ಮುಳ್ಳೇರಿಯ: ಮುಳಿಯಾರು ಬೋವಿಕ್ಕಾನದ ಶ್ರೀ ಲಕ್ಷ್ಮೀ ನರಸಿಂಹ ನಾಗರಾಜ ಮಂದಿರದ 15 ನೇ ಪ್ರತಿಷ್ಠಾ ವರ್ಧಂತಿ ದಿನಾಚರಣೆ ಇಂದು(ಡಿ.12) ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಗ್ಗೆ 8.30 ಕ್ಕೆ ಪ್ರಭಾತ ಪೂಜೆ, 11 ಕ್ಕೆ ದೇವರ ಪ್ರಾರ್ಥನೆ, ಪಂಚಾಮೃತಾಭಿಷೇಕ, ಶತ ಕಲಶಾಭಿಷೇಕ, ಮಧ್ಯಾಹ್ನ 12 ಕ್ಕೆ ಆಶ್ಲೇಷ ಬಲಿ, ಮಂಡಲ ಪೂಜೆ, 12.30 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 1.30 ಕ್ಕೆ ಮಹಾಪೂಜೆ, ಮಂಗಳಾರತಿ, ಪ್ರತಿಷ್ಠಾ ಲಾಲ್ಕಿ ಉತ್ಸವ, ಮಹಾ ಪ್ರಸಾದ, 2.30 ಕ್ಕೆ ಅನ್ನ ಸಂತರ್ಪಣೆ ನಡೆಯುವುದು.