ಕಾಸರಗೋಡು: ಮುಟ್ಟುಂತಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೈವಿಕ ತರಕಾರಿ ಕೃಷಿ ಆರಂಭಗೊಂಡಿದೆ. ಅಜಾನೂರು ಕೃಷಿ ಭವನದ ಸಹಾಯದೊಂದಿಗೆ ಈ ಶಾಲೆಯ ಮಕ್ಕಳು ಕೃಷಿ ಆರಂಭಿಸಿದ್ದಾರೆ.
ಹರಿತ ಕೇರಳಂ ಮಿಷನ್ ಅಂಗವಾಗಿ ನಡೆಸಲಾಗುತ್ತಿರುವ ಸಂಸ್ಥೆಗಳ ಮಟ್ಟದ ತರಕಾರಿ ಕೃಷಿ ಯೋಜನೆ ಅಂಗವಾಗಿ ತರಕಾರಿ ಬೆಳೆಯಲಾಗುವುದು. ಶಾಲೆಯ ಆವರಣದ 5 ಸೆಂಟ್ಸ್ ಜಾಗದಲ್ಲಿ ಮರಗೆಣಸು, ಸೌತೆ, ಕುಂಬಳ, ಅಲಸಂಡೆ ಇತ್ಯಾದಿಗಳನ್ನೂ, ಗ್ರೋ ಬ್ಯಾಗ್‍ಗಳಲ್ಲಿ ಟೊಮೆಟೋ, ಬದನೆ, ಹೂಕೋಸು(ಕಾಲಿಫ್ಲವರ್), ಹಸಿಮೆಣಸು ಇತ್ಯಾದಿಗಳನ್ನು ಜೈವಿಕವಾಗಿ ಬೆಳೆಸಲಾಗುವುದು.
ವಿದ್ಯಾಲಯದಲ್ಲಿ ನೀಡಲಾಗುವ ಮಕ್ಕಳ ಭೋಜನಕ್ಕೆ ವಿಷಮುಕ್ತ ತರಕಾರಿ ಬೆಳಸುವ ಉದ್ದೇಶದಿಂದ ಈ ಕೃಷಿ ಆರಂಭಿಸಲಾಗಿದೆ.
ಅಜಾನೂರು ಕೃಷಿ ಭವನದ ಸಹಾಯಕ ಸಿ.ವಿ.ಪ್ರಿಯೇಷ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎ.ರತೀಶ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಮಾತೃ ಸಂಘದ ಅಧ್ಯಕ್ಷೆ ಕೆ.ಸುಜಾತಾ, ಮುಖ್ಯ ಶಿಕ್ಷಕಿ ಎಂ.ಗೀತಾ, ಎ.ಕೆ.ಶೀಬಾ, ಆಷಲತಾ, ಬಾಪು ಶುಕೂರ್, ನಮಿತಾ, ಚಿತ್ರಾ, ಸೆನ್ ಮತ್, ನೂರ್ಜಹಾನ್, ಜರೀನಾ ಮೊದಲಾವರು ಉಪಸ್ಥಿತರಿದ್ದರು.