ಮುಳ್ಳೇರಿಯ: ವಿದ್ಯಾಲಯವು ಪ್ರತಿಭೆಗಳೊಂದಿಗೆ ಎಂಬ ಯೋಜನೆಯ ಭಾಗವಾಗಿ ಬೋವಿಕ್ಕಾನದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ನಿವೃತ್ತ ಅಧ್ಯಾಪಕ ಗೋವಿಂದ ಬಳ್ಳಮೂಲೆ ಇವರ ನಿವಾಸಕ್ಕೆ ಸಂದರ್ಶನವಿತ್ತು ಸಂವಾದ ನಡೆಸಿದರು.
ಪಂಚಕೋಶಗಳನ್ನು ಆರೋಗ್ಯದಾಯಕವಾಗಿ ಪೆÇೀಷಣೆಮಾಡುವುದರಿಂದ ಬದುಕಿನಲ್ಲಿ ಯಶಸ್ಸು ಗಳಿಸಬಹುದು ಎಂಬ ವಿಷಯದಲ್ಲಿ ಬಳ್ಳಮೂಲೆಯವರು ವಿದ್ಯಾರ್ಥಿಗಳಿಗೆ ಚಟುವಟಿಕೆಯೊಂದಿಗೆ ತರಗತಿ ನಡೆಸಿದರು. ವಿದ್ಯಾರ್ಥಿಗಳು ಸಂವಾದಗಳೊಂದಿಗೆ ಸಕ್ರಿಯವಾಗಿ ಭಾಗವಹಿಸಿದರು. ಅಧ್ಯಾಪಕಿ ಪ್ರೇಮಬಿಂದು ನಿರ್ವಹಿಸಿದರು. ಸುಭಾಷ್ ಚಂದ್ರ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಜಿತ್ ವಂದಿಸಿದರು.