ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀಕಾಳಿಕಾಪರಮೇಶ್ವರಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾಗುವ ಶ್ರೀನಾಗನಕಟ್ಟೆ, ಕ್ಷೇತ್ರಪಾಲ, ಗುಳಿಗನಕಟ್ಟೆ ಮತ್ತು ಪಂಚಶಕ್ತಿಗಳ ಕಟ್ಟೆಯ ಶಿಲಾನ್ಯಾಸ ಶುಕ್ರವಾರ ಬೆಳಿಗ್ಗೆ ಶ್ರೀಕ್ಷೇತ್ರ ಪರಿಸರದಲ್ಲಿ ನಡೆಯಿತು.
ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಮೇಶ ತಂತ್ರಿ ಮಂಗಳೂರು ಅವರ ಆಚಾರ್ಯತ್ವದಲ್ಲಿ ಭೂ-ವರಾಹ ಶಾಂತಿಹೋಮ ನಡೆಯಿತು. ಕ್ಷೇತ್ರದ ಅಧ್ಯಕ್ಷ ಪೊಳ್ಯ ಉಮೇಶ ಆಚಾರ್ಯ ಪುತ್ತೂರು ಶಿಲಾನ್ಯಾಸ ನೆರವೇರಿಸಿದರು. ಕ್ಷೇತ್ರದ ಶಿಲ್ಪಿ ಪೋಳ್ಯ ಸೀತಾರಾಮ ಆಚಾರ್ಯ, ಮೊಕ್ತೇಸರರಾದ ಪದ್ಮನಾಭ ಆಚಾರ್ಯ ಪ್ರತಾಪನಗರ, ವೆಂಕಟ್ರಮಣ ಆಚಾರ್ಯ ಮುಳಿಗದ್ದೆ, ಅಶೋಕ ಆಚಾರ್ಯ ಉದ್ಯಾವರ, ಇತರ ಪದಾಧಿಕಾರಿಗಳು, ಸದಸ್ಯರುಗಳು, ಓಜ ಸಾಹಿತ್ಯ ಕೂಟ ಮತ್ತು ಕಾಳಿಕಾಪರಮೇಶ್ವರಿ ವಿಶ್ವಕರ್ಮ ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.