ಕಾಸರಗೋಡು: ಹಸಿರು ಕೇರಳ ಮಿಷನ್ ಜಿಲ್ಲಾ ಸಮಿತಿಯ ಚಟುವಟಿಕೆಗಳ ಅವಲೋಕನ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಹಸಿರು ಕೆÉೀರಳ ಮಿಷನ್ ರಾಜ್ಯ ಮಟ್ಟದ ಕಾರ್ಯಕಾರಿ ಉಪಾಧ್ಯಕ್ಷೆ ಡಾ.ಟಿ.ಎನ್.ಸೀಮಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ' ಭವಿಷ್ಯದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ನಮ್ಮನ್ನು ಗಂಭೀರವಾಗಿ ಕಾಡುವ ಮೊದಲು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಜಲಸುರಕ್ಷಾ ರಾಜ್ಯವಾಗಿ ಕೇರಳ ಮಾರ್ಪಾಡುಗೊಳ್ಳಬೇಕಾದರೆ, ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲು ಮುಂದಾಗಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಜಲಾಶಯಗಳ ನೀರಿನ ಸಂರಕ್ಷಣೆ, ಶುದ್ಧತೆ ಬಗ್ಗೆ ಖಚಿತಪಡಿಸುವಿಕೆ ಇತ್ಯಾದಿ ನಡೆಸಲಾಗುವುದು. ಇದರಅಂಗವಾಗಿ ಜಲಾಶಯಗಳಲ್ಲಿ ಜಲ ಅಳತೆಗೋಲು ಸ್ಥಾಪಿಸಿ, ನೀರಿನ ಮುಂಗಡ ನಿರೀಕ್ಷಣೆ ನಡೆಸುವುದು ಇತ್ಯಾದಿ ಕ್ರಮ ಕೈಗೊಳ್ಳಲಾಗುವುದು. ಆಳವಾದ ಅಧ್ಯಯನ, ವಿನೂತನ ತಂತ್ರಜ್ಞಾನದ ಬಳಕೆ, ಜನಪರ ಒಕ್ಕೂಟದ ಯತ್ನ ಇತ್ಯಾದಿಗಳ ಮೂಲಕ ಇದು ಜಾರಿಗೊಳ್ಳಲಿದೆ. ಈ ಯೋಜನೆಯನ್ನು ಜನತೆಗೆ ತಲಪಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತೆ ಮಟ್ಟದ ವಿವಿಧ ಕಾರ್ಯಕ್ರಮಗಳನ್ನುನಡೆಸಲಾಗುವುದು ಎಂದವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಪ್ರಧಾನ ಭಾಷಣ ಮಾಡಿ ನೇಕ ವಿಚಾರಗಳಿಗೆ ಬೆಳಕುಚೆಲ್ಲಿದರು. ರಾಜ್ಯ ಸರ್ಕಾರದ'ನವಕೇರಳ ನಿರ್ಮಾಣ'ಉದ್ದೇಶದಿಂದ ಪ್ರಧಾನವಾಗಿ 4 ಸುರಕ್ಷಾ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಜಲಸುರಕ್ಷೆ, ಆಹಾರ ಸುರಕ್ಷೆ, ಆರ್ಥಿಕಸುರಕ್ಷೆ ಮತ್ತು ಸಾಮಾಜಿಕ ಸುರಕ್ಷೆ ಇವುಗಳಾಗಿವೆ. ನಾನಾ ಕಾರಣಗಳಿಂದ ಸರ್ಕಾರದ ಯೋಜನೆಗಳು ಗುರಿ ತಲಪುತ್ತಿಲ್ಲ ಎಂಬುದನ್ನು ಗಮನಿಸಿ, ಇದಕ್ಕೆ ಪರಿಹರ ಕಾಣುವ ಕುರಿತು ಗಂಭೀರ ಚಿಂನೆನಡೆಸಬೇಕಾಗಿದೆ.ಜಿಲ್ಲೆಯಲ್ಲಿರುವ 12 ಜೀವನದಿಗಳಲ್ಲಿ 11 ಕೂಡ ಗಂಭೀರ ಸಮಸ್ಯೆಗಳಿಂದ ಕೂಡಿವೆ. ಕೊಳವೆ ಬಾವಿಗಳು ಜಿಲ್ಲೆಯನ್ನೇ ಶಿಥಿಲಗೊಳಿಸಿವೆ. ಇನ್ನಾದರೂ ನಾವು ಜಾಗೃತರಾಗದೇ ಹೋದರೆ ಗಂಭೀರದುರಂತಕ್ಕೆ ಸಾಕ್ಷಿಯಾಗಬೇಕಾದೀತು ಎಂದವರು ಕಳವಳ ವ್ಯಕ್ತಪಡಿಸಿದರು.ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು 450 ತೆರೆದ ಬಾವಿಗಳನ್ನು ನಿರ್ಮಿಸಲಾಗುವುದು. 6 ಬೃಹತ್ ತೋಡುಗಳನ್ನು ತೋಡಲಾಗುವುದು. ತ್ಯಾಜ್ಯ ಪರಿಷ್ಕರಣೆ ಮೂಲಕ ಡೀಸೆಲ್, ಶುದ್ಧ ನೀರು,ವಿದ್ಯುತ್ ಉತ್ಪಾದನೆ ನಡೆಸುವ ಯೋಜನೆ ಈಗಾಗಲೇ ಸಿದ್ಧವಾಗಿದ್ದು, ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸಾರ್ವಜನಿಕಸಹಭಾಗಿತ್ವದಲ್ಲಿ ಈ ಯೋಜನೆಗಳು ಜಾರಿಗೊಳ್ಳಲಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಧಿ ಮಂಜೂರು ಮಾಡುವಹಿನ್ನೆಲೆಯಲ್ಲಿ ಸರಕಾರಕ್ಕೆ ಈ ಮೂಲಕ ಆರ್ಥಿಕ ಭಾರವಿರುವುದಿಲ್ಲ ಎಂಬುದೂ ಗಮನಾರ್ಹ. ಸ್ಥಳೀಯಾಡಳಿತ ಸಂಸ್ಥೆಗಳು ಸಹಕಾರನೀಡಬೇಕು ಎಂದವರು ವಿವರಣೆ ನೀಡಿದರು.
ಮಿಷನ್ ವತಿಯಿಂದ ಜಾರಿಯಾಗುತ್ತಿರುವ 'ಪೆನ್ ಫ್ರೆಂಡ್'ಯೋಜನೆಯಂತೆ ಸಂಗ್ರಹಿಸಿದ ಉಪಯೋಗವಿಲ್ಲದ ಪ್ಲಾಸ್ಟಿಕ್ ಪೆನ್ ಗಳನ್ನು ಪುನ:ನಿರ್ಮಾನಕ್ಕಾಗಿ ಹಸ್ತಾಂತರಿಸಲಾಯಿತು.ಜಿಲ್ಲಾಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಮಿಷನ್ ಜಿಲ್ಲಾ ಸಂಚಾಲಕಎಂ.ಪಿ.ಸುಬ್ರಹ್ಮಣ್ಯನ್ ವರದಿ ವಾಚಿಸಿದರು. ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಹಸಿರು ಕೇರಳ ಮಿಷನ್ ರಾಜ್ಯ ಕನ್ಸೆಲ್ಟೆಂಟ್ ವಿ.ವಿ.ಹರಿಪ್ರಿಯಾ ದೇವಿ, ಕಾಸರಗೋಡು ಜಿಲ್ಲಾ ಅಭಿವೃದ್ಧಿ ಪ್ಯಾಕೇಜ್‍ನ ವಿಶೇಷ ಅಧಿಕಾರಿ ಇ.ಪಿ.ರಾಜ್‍ಮೋಹನ್, ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕ ಪಿ.ವಿ.ಜಸೀರ್, ಜಿಲ್ಲಾ ಯೋಜನೆ ಅಧಿಕಾರಿ ಎಸ್.ಸತ್ಯಪ್ರಕಾಶ್, ಪಂಚಾಯತ್ ಸಹಾಯಕ ನಿರ್ದೇಶಕ ಕೆ.ಕೆ.ರೆಜಿ ಕುಮಾರ್, ಮೈನರ್ ಇರಿಗೇಶನ್‍ಕಾರ್ಯಕಾರಿ ಇಂಜಿನಿಯರ್ ಡಿ.ರಾಜನ್, ಪ್ರಧಾನ ಕೃಷಿ ಅಧಿಕಾರಿ ಮಧು ಜೇಕಬ್ ಮತ್ತಾಯಿ ಮೊದಲಾದವರು ಉಪಸ್ಥಿತರಿದ್ದರು. ಪಿ.ವಿ.ಅನಿಲ್ ಸ್ವಾಗತಿಸಿದರು. ಹಸಿರು ಕೇರಳ ಮಿಷನ್ ಇಂಟರ್ನ್ ಶಿಪ್ ಟ್ರೈನಿ ಕೆ.ಅಶ್ವಿನಿ ವಂದಿಸಿದರು.
'ಹಸಿರು ಕೇರಳ'-ಅಭಿಯಾನ:
ಹಸಿರು ಕೇರಳ ಮಿಷನ್ ಯಾವುದೇ ಒಂದು ಇಲಾಖೆ, ವಿಭಾಗ ಅತವಾ ಏಜೆನ್ಸಿಯಾಗಿರದೆ, ಸಾರ್ವಜನಿಕರನ್ನೊಳಗೊಂಡ ಅಭಿಯಾನವಾಗಿದೆ ಎಂದು ಸಂಸ್ಥೆಯ ರಾಜ್ಯ ಮಟ್ಟದ ಕಾರ್ಯಕಾರಿ ಉಪಾಧ್ಯಕ್ಷೆ ಡಾ.ಟಿ.ಎನ್.ಸೀಮಾ ವಿಶ್ಲೇಷಿಸಿದರು. ರಾಜ್ಯ ಅನೇಕ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಯಾಗಿರುವ ತ್ಯಾಜ್ಯ ಪರಿಷ್ಕರಣೆ, ಜಲ ದುರುಪಯೋಗ ಇತ್ಯಾದಿಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಚನೆಗೊಂಡಿರುವ ಜನಪರ ಒಕ್ಕೂಟವಾಗಿದ್ದು, ರಾಜ್ಯದ ಮುಖ್ಯಮಂತ್ರಿ ಇದರ ಅಧ್ಯಕ್ಷರಾಗಿದ್ದಾರೆ. ಸ್ಥಳೀಯಾಡಳಿತೆ ಸಂಸ್ಥೆಗಳು ಈ ಸಂಬಂಧ ಚಟುವಟಿಕೆ ನಡೆಸುವ ಮತ್ತು ಕಾರ್ಯಕ್ರಮ ಜಾರಿಗೆ ತರುವ ಹೊಣೆಹೊತ್ತಿರುವುದಾಗಿ ತಿಳಿಸಿದರು. ಹಸಿರುಕೇರಳ ಮಿಷನ್ ತಮ್ಮ ಚಟುವಟಿಕೆಯೊಂದಿಗೆ ಮೂರನೇ ವರ್ಷಕ್ಕೆ ಕಾಲಿರಿಸುತ್ತಿದೆ. ಈ ನಿಟ್ಟಿನಲ್ಲಿ ನಡೆಸುವ ಜಲಸಂರಕ್ಷಣೆ ಅಂಗವಾಗಿ ಡಿ.14ರಿಂದ 22 ವರೆಗೆ ವಿವಿಧ ಕಾರ್ಯಕ್ರಮ ನಡೆಸಲಾಗುವುದು ಎಂದು ಡಾ.ಸೀಮಾ ನುಡಿದರು.