HEALTH TIPS

ಸಹಕಾರಿ ಸಂಘಗಳು ಜನರೊಂದಿಗೆ ನಿಕಟ ಸಂಪರ್ಕ ಹೊಂದಿರಬೇಕು-ವಿ.ಮಹಮ್ಮದ್ ನೌಶಾದ್

      ಮಂಜೇಶ್ವರ: ಸಹಕಾರಿ ಸಂಘಗಳು,ಬ್ಯಾಂಕ್‍ಗಳು ಕ್ರಿಯಾತ್ಮಕವಾಗಿ ಜನರೊಂದಿಗೆ ಇನಷ್ಟು ನಿಕಟ ಸಂಪರ್ಕ ಹೊಂದಿರಬೇಕು. ಆಡಳಿತಮಂಡಳಿ, ಸದಸ್ಯರು, ನೌಕರರು ಮತ್ತು ಗ್ರಾಹಕರು ಪರಸ್ಪರ ಧನಾತ್ಮಕವಾಗಿ ಚಿಂತಿಸಿ ಸ್ವಸಾಮರ್ಥಯದಿಂದ ಉನ್ನತ ಮೌಲ್ಯಗಳನ್ನು ಅಳವಡಿಸಿ ಪ್ರವರ್ತಿಸಿದಲ್ಲಿ ಸಹಕಾರಿ ಸಂಘಗಳಿಗೆ ಉಜ್ವಲ ಭವಿಷ್ಯವಿರುವುದಾಗಿ ಸಹಕಾರಿ ಜೋಯಿಂಟ್ ರಿಜಿಸ್ಟಾರ್ ವಿ.ಮಹಮ್ಮದ್ ನೌಷಾದ್ ಹೇಳಿದರು.
      ಮಜಿಬೈಲು ಸಹಕಾರಿ ಸಂಘದ ಸಭಾಭವನದಲ್ಲಿ ಇತ್ತೀಚೆಗೆ ಜರಗಿದ ಸಹಕಾರಿ ಸಪ್ತಾಹದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
     ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ಜನರ ಹೃದಯದಲ್ಲಿ ಭದ್ರವಾಗಿರಬೇಕು.ಮಹಿಳೆಯರು ಸಹಕಾರಿ ರಂಗಗಳಲ್ಲಿ ಸ್ವಯಂಸ್ಫೂರ್ತಿಯಿಂದ ತೆuಟಿಜeಜಿiಟಿeಜಡಗಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಮುಂದುವರಿಯುವ ಕಾಲ ಸನ್ನಿಹಿತವಾಗಿರುವುದಾಗಿ ಅವರು ಹೇಳಿದರು.
     ಬ್ಯಾಂಕಿನ ಉಪಾಧ್ಯಕ್ಷ ಮಮ್ಮುಂಞÂ ಹಾಜಿ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಸಹಕಾರಿ ರಂಗದ ನಾಯಕರಾದ ಕೆ.ಮುರಳೀಧರನ್, ಜಯಚಂದ್ರನ್, ಎಸ್.ಜೆ.ಪ್ರಸಾದ್, ಬಿ.ವಿ.ರಾಜನ್, ದಿವಾಕರ್ ಎಸ್‍ಜೆ, ಎಂ.ಸಂಜೀವ ಶೆಟ್ಟಿ, ಸುನಿಲ್ ಕುಮಾರ್ ಮತ್ತು ಶ್ರೀಕೃಷ್ಣ ಭಟ್ ಮುಂತಾದವರು ಉಪಸ್ಥಿತರಿದ್ದರು.
       ಸಮಾರಂಭದ ಬಳಿಕ ಯುವಕರು,ಯುವತಿಯರು,ಮತ್ತು ದುರ್ಬಲ ಜನವಿಭಾಗದವರಿಗಿರುವ ಸಹಕಾರಿ ಸಂಸ್ಥೆಗಳು ಎಂಬ ವಿಚಾರದ ಕುರಿತು ವಿಚಾರಗೋಷ್ಠಿ ಜರಗಿತು. ದಿವಾಕರ್ ಎಸ್‍ಜೆ ವಿಷಯ ಮಂಡಿಸಿದರು. ಸಹಾಯಕ ರಿಜಿಸ್ಟಾರ್ ಅಬ್ದುಲ್ ಅಸೀಸ್ ಪಿ ನಿರೂಪಕರಾಗಿ ಕಾರ್ಯನಿರ್ವಹಿಸಿದರು. ಚರ್ಚೆಯಲ್ಲಿ ಸಹಕಾರಿ ಧುರೀಣರಾದ ಕುಮಾರ್,ಗೀತಾ ಸಾಮಾನಿ,ಪ್ರದೀಪ್ ಕುಮಾರ್,ವಿಠಲ ರೈ ಮತ್ತು ಜಯಶ್ರೀ ಭಾಗವಹಿಸಿದರು. ಬ್ಯಾಂಕ್ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್ ಸ್ವಾಗತಿಸಿ, ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries