ಬದಿಯಡ್ಕ: ಶಾಲಾ ಪರಿಸರ ಶುಚೀಕರಣದಂಗವಾಗಿ ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘ ಹಾಗೂ ಮಾತೃ ಸಂಘದ ವತಿಯಿಂದ ಶುಚೀಕರಣ ದಿನಾಚರಣೆ ಇತ್ತೀಚೆಗೆ ನಡೆಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರಶಾಂತ್ ಕುಮಾರ್ ಶೆಟ್ಟಿ ಬೇಳ, ಸುರೇಶ ನಿಡುಗಳ, ಭಾರತಿ ಮಜೀರ್ಪಳ್ಳಕಟ್ಟೆ, ಗೀತಾ, ವಸಂತಿ ಅನ್ನೆಪಲ್ಲಡ್ಕ ನೇತೃತ್ವ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ಅಧ್ಯಾಪಿಕೆಯರು ಉಪಸ್ಥಿತರಿದ್ದು ಶಾಲಾ ಪರಿಸರವನ್ನು ಶುಚಿಗೊಳಿಸಿದರು.