ಮುಳ್ಳೇರಿಯ: ಪುತ್ತೂರು ತಾಲ್ಲೂಕಿನ ಕೈಯೂರು ಜಯಕರ್ನಾಟಕ ಸಭಾಭವನದಲ್ಲಿ ಭಾನುವಾರ ನಡೆದ ಪುತ್ತೂರು ತಾಲ್ಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಿರಿಯ ಪ್ರಾಥಮಿಕ ವಿಭಾಗದ ಶಾಲಾ ಮಕ್ಕಳಿಗೆ ಏರ್ಪಡಿಸಿದ ಸ್ವರಚಿತ ಕವನ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮ ಪಂಚಾಯಿತಿನ ಅಡೂರು ಗ್ರಾಮದ ಆದ್ಯಂತ್ ಅಡೂರು ಅವರು ತೃತೀಯ ಬಹುಮಾನ ಪಡೆದಿದ್ದಾರೆ. ಕಾರ್ಯಕ್ರಮದಲ್ಲಿ ಉದ್ಯಮಿ ಸವಣೂರು ಸೀತಾರಾಮ ರೈ ಅವರು ಅದ್ಯಂತ್‍ಗೆ ನಗದು, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ. ನರೇಂದ್ರ ರೈ ದೇರ್ಲ, ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಐತ್ತಪ್ಪ ನಾಯ್ಕ್, ಕಸಾಪ ಗೌರವ ಕಾರ್ಯದರ್ಶಿ ಡಾ.ಶ್ರೀಧರ ಎಚ್ ಜಿ, ಹಿರಿಯ ಸಾಹಿತಿ ಪ್ರೊ. ಹರಿನಾರಾಯಣ ಮಾಡಾವು, ಆನಂದ ರೈ ದೇವಿನಗರ, ಜ್ಯೋತಿ ಆಚಾರ್ಯ, ಗುಣಶೀಲ ಕೆ ಎನ್ ಮೊದಲಾದವರು ಭಾಗವಹಿಸಿದ್ದರು. ಆದ್ಯಂತ್ ಅಡೂರು ಅವರು ಈಶ್ವರಮಂಗಲದ ಗಜಾನನ ಆಂಗ್ಲ ಮಾದ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಹಾಗೂ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು - ಜಯಲಕ್ಷ್ಮಿ ದಂಪತಿಯ ಪುತ್ರ.
ಆದ್ಯಂತ್ ಅಡೂರ್‍ಗೆ ಸಾಹಿತ್ಯ ಪುರಸ್ಕಾರ
0
ಡಿಸೆಂಬರ್ 10, 2019