ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಕುರಿತಂತೆ ಈಶಾನ್ಯ ಭಾರತದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದು, ನಿಮ್ಮ ಹಕ್ಕು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಿಮ್ಮ ಹಕ್ಕನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಪೌರತ್ವ ಮಸೂದೆ ಕುರಿತಂತೆ ಅನಗತ್ಯ ಭಯಬೇಡ. ನಿಮ್ಮ ಹಕ್ಕುಗಳನ್ನು, ಅನನ್ಯ ಗುರುತು ಮತ್ತು ಸುಂದರ ಸಂಸ್ಕøತಿಯನ್ನುಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಅದು ಪ್ರವರ್ಧಮಾನಕ್ಕೆ ಬಂದು ಬೆಳೆಯುತ್ತದೆ. ಅಸ್ಸಾಂ ಮತ್ತು ಈಶಾನ್ಯ ಭಾರತದ ನನ್ನ ಸಹೋದರ-ಸಹೋದರಿಯರಿಗೆ ನಾನು ಈ ಮೂಲಕ ಹೇಳುವುದೇನೆಂದರೆ, ಕೇಂದ್ರ ಸರ್ಕಾರ ಮತ್ತು ನಾನು ಅಸ್ಸಾಮ್ ಜನರ ರಾಜಕೀಯ, ಭಾಷಾ, ಸಾಂಸ್ಕೃತಿಕ ಮತ್ತು ಭೂ ಹಕ್ಕುಗಳನ್ನು ಸಾಂವಿಧಾನಿಕವಾಗಿ ರಕ್ಷಿಸಲು ಸಂಪೂರ್ಣವಾಗಿ ಬದ್ಧವಾಗಿದ್ದೇವೆ. ಈ ಕುರಿತಂತೆ ಅನಗತ್ಯ ಭಯ ಬೇಡ ಎಂದು ಹೇಳಿದ್ದಾರೆ.
ಮೊನ್ನೆಯಷ್ಟೇ ರಾಜ್ಯಸಭೆಯಲ್ಲೂ ಪೌರತ್ವ ತಿದ್ದುಪಡಿ ಮಸೂದೆ ಮಂಡನೆಯಾಗಿ ಅನುಮೋದನೆ ಕೂಡ ಪಡೆದಿತ್ತು. ಮಸೂದೆಯ ಪರವಾಗಿ 125 ಮತಗಳು ಬಂದರೆ, ವಿರುದ್ಧವಾಗಿ 99 ಮತಗಳು ಚಲಾವಣೆಯಾದವು. ಅನುಮೋದನೆಗೆ 112 ಮತಗಳ ಅವಶ್ಯಕತೆ ಇತ್ತು.