ಮಂಜೇಶ್ವರ: ಡಿಸೆಂಬರ್ 1 ರಿಂದ ದೇಶದ ಎಲ್ಲ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಜ್ಯಾರಿ ಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಕರ್ನಾಟಕ ಗಡಿ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಟೋಲ್ ಗೇಟ್ ನಲ್ಲಿ ಆಸುಪಾಸಿನ ಐದು ಕಿಲೋ ಮೀಟರ್ ಆಸುಪಾಸಿನ ಜನರಿಗೆ ಈ ಮೊದಲು ನೀಡಿದಂತೆ ವಿನಾಯಿತಿಯನ್ನು ಮುಂದುವರಿಸಬೇಕು. ಇಲ್ಲದೆ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ತೀವೃ ಗೊಳಿಸಲಾಗುದೆಂಬ ಮುನ್ನೆಚ್ಚರಿಕೆಯೊಂದಿಗೆ ಗಡಿ ನಾಡು ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮಂಜೆಶ್ವರದ ಸರ್ವ ಪಕ್ಷ ಗಳ ನೇತಾರರ ಬೆಂಬಲದೊಂದಿಗೆ ಟೋಲ್ ಗೇಟ್ ಮುಂಬಾಗದಲ್ಲಿ ಭಾನುವಾರ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಮಂಜೇಶ್ವರ ಗ್ರಾಹಕರ ವೇದಿಕೆಯ ಅಧ್ಯಕ್ಷ ಮುರಳೀಧರ ಭಟ್ ಉದ್ಘಾಟಿಸಿದರು.
ಈ ಪ್ರತಿಭಟನೆ ಕೇವಲ ಮುನ್ನೆಚ್ಚರಿಕೆಯ ಸಾಂಕೇತಿಕ ಪ್ರತಿಭಟನೆ ಮಾತ್ರವಾಗಿದೆ. ಟೋಲ್ ಗೇಟಿನ ಐದು ಕಿಲೋ ಮೀಟರ್ ಸುತ್ತಳತೆಯಲ್ಲಿರುವ ನಾಗರಿಕರಿಗೆ ಫಾಸ್ಟ್ ಟ್ಯಾಗ್ ಬರಲಿ ಅಥವಾ ಬರದೇ ಇರಲಿ ಈ ಮೊದಲಿನ ರೀತಿಯಲ್ಲಿಯೇ ಉಚಿತವಾದ ಪ್ರಯಾಣಕ್ಕೆ ಅನುಮತಿ ನೀಡಲೇ ಬೇಕಾಗಿದೆ ಹೊರತು ನವಯುಗ ಕಂಪನಿಯವರು ಆಸುಪಾಸಿನ ನಾಗರಿಕರನ್ನು ಕೆಣಕಲು ಬಂದರೆ ಮುಂದಿನ ದಿನಗಳಲ್ಲಿ ತಲಪಾಡಿ ಟೋಲ್ ಗೇಟ್ ಇತಿಹಾಸ ಪುಟ ಸೇರುವುದರಲ್ಲಿ ಎರಡು ಮಾತಿರಲಾರದು. ನ್ಯಾಯಕ್ಕಾಗಿ ನಾವು ಜೈಲುವಾಸವನ್ನು ಕೂಡಾ ಅನುಭವಿಸಲು ಸಿದ್ದರಿದ್ದೇವೆ .ಇಲ್ಲಿಯ ನಾಗರಿಕರಿಗೆ ನ್ಯಾಯ ಲಭಿಸಬೇಕಾಗಿದೆ ಎಂದು ನೇತಾರರು ನವ ಯುಗ ಕಂಪನಿಗೆ ಖಡಕ್ ತಾಕೀತು ನೀಡಿದರು.
ಟೋಲ್ ಗೇಟ್ ನ ಐದು ಕಿಲೋ ಮೀಟರ್ ಸುತ್ತಳತೆಯಿಂದ ಸಂಚರಿಸುವ ಗೂಡ್ಸ್ ಟೆಂಪೆÇೀ, ಟ್ಯಾಕ್ಸಿ, ಖಾಸಗಿ ವಾಹನಗಳಿಗೆ ವಿನಾಯಿತಿ ನೀಡಬೇಕೆನ್ನುವ ಪ್ರಧಾನ ಬೇಡಿಕೆ ಮುಂದಿಟ್ಟು ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆಯಲ್ಲಿ ಮಂಜೇಶ್ವರದ ಪ್ರಮುಖ ರಾಜಕೀಯ ಪಕ್ಷಗಳ ಎಲ್ಲಾ ನೇತಾರರು ಪಾಲ್ಗೊಂಡಿದ್ದರು . ಸಭೆಯಲ್ಲಿಹೋರಾಟ ಸಮಿತಿ ನೇತಾರರಾದ ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಖ್ ತಲಪಾಡಿ , ಹರ್ಷಾದ್ ವರ್ಕಾಡಿ . ಸೈಫುಲ್ಲಾ ತಂಘಳ್ , ಹುಸೈನ್ ತಲಪಾಡಿ, ಮೊಹಮ್ಮದ್ ಕುಂuಟಿಜeಜಿiಟಿeಜ, ಕಬೀರ್ ಅಬ್ಬಾಸ್, ವಿನು ಶೆಟ್ಟಿ, ಬಿಜೆಪಿ ನೇತಾರ ಹರೀಶ್ ಚಂದ್ರ ಮಂಜೇಶ್ವರ , ಮುಸ್ಲಿಂ ಲೀಗ್ ನೇತಾರ ಮುಕ್ತಾರ್ , ಸಿಪಿಐ ನೇತಾರ ದಯಾಕರ ಮಾಡ, ಎಸ ಡಿ ಪಿ ಐ ನೇತಾರ ಹಮೀದ್ ಹೊಸಂಗಡಿ, ಪಿಡಿಪಿ ನೇತಾರ ರಫಿಕ್ ಇರ್ಷಾದ್ , ಕಾಂಗ್ರೆಸ್ ನೇತಾರ ಸಕರಿಯ್ಯಾ ಶಾಲಿಮಾರ್ , ಸಿಪಿಎಂ ನೇತಾರ ಅಬ್ದುಲ್ ರಜಾಕ್ ಚಿಪ್ಪಾರ್, ಜನಪ್ರತಿನಿಧಿಗಳಾದ ಮುಸ್ತಫ , ಮಂಜೇಶ್ವರ ಪ್ರೆಸ್ ಕ್ಲಬ್ ಅಧ್ಯಕ್ಷ ರಹಿಮಾನ್ ಉದ್ಯಾವರ, ವ್ಯಾಪಾರಿ ಏಕೋಪನ ಸಮಿತಿ ನೇತಾರ ಬಶೀರ್ ಕನಿಲ ಮೊದಲಾದವರು ಮಾತನಾಡಿದರು . ಈ ಸಂದರ್ಭ ವಿವಿಧ ಕ್ಲಬ್ , ಸಂಘಟನೆಗಳ ನೇತಾರರು ಉಪಸ್ಥಿತರಿದ್ದರು.