ಬದಿಯಡ್ಕ: ಮುಂಡಿತ್ತಡ್ಕ ಶ್ರೀ ಮಹಾವಿಷ್ಣು ಭಜನಾ ಸಂಘ ವಿಷ್ಣು ನಗರ ಇದರ ವಾರ್ಷಿಕೋತ್ಸವಕ್ಕೆ ದೀಪ ಪ್ರಜ್ವಲನೆಯೊಂದಿಗೆ ಭಾನುವಾರ ಚಾಲನೆ ನೀಡಲಾಯಿತು. ಭಜನಾ ಸಂಘದ ಸ್ಥಾಪಕ ಸದಸ್ಯ,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ದೇರಳಕಟ್ಟೆ ಬೆಳ್ಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಬಿ.ವಾಮನ ನಾಯ್ಕ ದೀಪ ಪ್ರಜ್ವಲನೆಗೈದರು. ಶ್ರೀ ಕೃಷ್ಣ ಭಜನಾ ಸಂಘ ಮಂಗಲ್ಪಾಡಿ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.
ಭಜನಾ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಸಂಕೀರ್ತನಾ ಸರಣಿಯು ಡಿ. 29ರಿಂದ ಜನವರಿ 27ರ ತನಕ ವಿವಿಧ ಭಜನಾ ಸಂಘಗಳಿಂದ ಭಜನೆ ಹಾಗೂ ನಿತ್ಯ ಅನ್ನದಾನಗಳೊಂದಿಗೆ ನಡೆಯುತ್ತಿದೆ. ಜ. 27 ರಂದು ಭಜನಾ ಸಂಘದ 30ನೇ ವಾರ್ಷಿಕೋತ್ಸವವು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮ ಹಾಗೂ ಅರ್ಧ ಏಕಾಹ ಭಜನೆಯೊಂದಿಗೆ ಸಂಪನ್ನಗೊಳ್ಳಲಿದೆ.