HEALTH TIPS

ಮಕ್ಕಳ ಸಾಹಿತ್ಯ ಸಮ್ಮೇಳನದ ಬಾಲ ಪ್ರತಿಭೆಗಳಿಗೆ ಇಂದು ಅಭಿನಂದನಾ ಕಾರ್ಯಕ್ರಮ

        ಮುಳ್ಳೇರಿಯ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ಆದಿ ಚುಂಚನಗಿರಿ ಮಹಾಸಂಸ್ಥಾನದ ಆಶ್ರಯದಲ್ಲಿ ಹಾಸನದ ಕೇಂದ್ರ ಮೈದಾನದಲ್ಲಿ ನ.29 ಮತ್ತು 30 ರಂದು ನಡೆದ ಅಖಿಲ ಭಾರತ ಕನ್ನಡ ಮಕ್ಕಳ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ.ಕಾಸರಗೋಡು ಇದರ ಸಾರಥ್ಯದಲ್ಲಿ ಪಾಲ್ಗೊಂಡು ಕವಿಗೋಷ್ಠಿ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ ಜಿಲ್ಲೆಯ ಬಾಲ ಪ್ರತಿಭೆಗಳಿಗೆ ಗಡಿನಾಡ ಅಭಿನಂದನಾ ಸಮಾರಂಭ ಮತ್ತು ಯುವ ಕವಿಗೋಷ್ಠಿ ಇಂದು(ಡಿ.8 ರಂದು) ಮುಳ್ಳೇರಿಯದ ಗಾಡಿಗುಡ್ಡೆ ರಸ್ತೆಯಲ್ಲಿರುವ ಶ್ರೀಶಾಸ್ತಾ ನಿಲಯ ನೆಲ್ಲಿಕ್ಕಳೆಯದಲ್ಲಿ ಆಯೋಜಿಸಲಾಗಿದೆ.
     ಸಮಾರಂಭದಲ್ಲಿ ಕಾರ್ಟೂನ್ ಕಾಸರಗೋಡಿನ ಅಧ್ಯಕ್ಷ, ಖ್ಯಾತ ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಅಧ್ಯಕ್ಷತೆ ವಹಿಸುವರು. ಕಾಞÂಂಗಾಡ್ ವಲಯ ಟ್ರಾಫಿಕ್ ನಿಯಂತ್ರಣ ಸಬ್ ಇನ್ಸ್‍ಫೆಕ್ಟರ್ ಪರಮೇಶ್ವರ ನಾಯ್ಕ್ ಅಭಿನಂದಿಸುವರು. ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಕಾಟುಕುಕ್ಕೆ ಶಾಲಾ ಮುಖ್ಯೋಪಾಧ್ಯಾಯ ಸುಧೀರ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸುವರು. ಸವಿ ಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ, ಪೆರ್ಲ ಸ.ನಾ.ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಭಟ್ ಎನ್ ಉಪಸ್ಥಿತರಿರುವರು. ವೇದಿಕೆಯ ನಿರ್ದೇಶಕ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಹ ಸಂಚಾಲಕಿ ಚೇತನಾ ಕುಂಬಳೆ, ಸದಸ್ಯೆ ಶ್ವೇತಾ ಕಜೆ, ರಿತೇಶ್ ಕಿರಣ್ ಕಾಟುಕುಕ್ಕೆ, ಆನಂದ ರೈ ಅಡ್ಕಸ್ಥಳ ಮೊದಲಾದವರು ನೇತೃತ್ವ ವಹಿಸುವರು.
          ಸಮಾರಂಭದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸೃಷ್ಠಿ ಕೆ.ಶೆಟ್ಟಿ ಕಾಟುಕುಕ್ಕೆ, ನಿರೂಪಕರಾಗಿ ಹಾಗೂ ನಾಟಕ ಅಭಿನಯದ ಮೂಲಕ ಜನಮೆಚ್ಚುಗೆ ಪಡೆದ ಅನೂಪ್ ರಮಣ ಶರ್ಮ ಮುಳ್ಳೇರಿಯ, ಕವಿಗೋಷ್ಠಿಯಲ್ಲಿ ಕವನಗಳನ್ನು ವಾಚಿಸಿದ ಸೌಪರ್ಣಿಕಾ ಕೆ, ಪ್ರಿಯಾ ಎಸ್.ಸಾಯ, ಪೃಥ್ವಿ ಕೆ.ಶೆಟ್ಟಿ, ನವನೀತ ನಾಯ್ಕ ಬಿ., ಅಭಿ ಪೆರ್ಲ, ಹಾಗೂ ಯಕ್ಷ ಪ್ರತಿಭೆ ಸುಪ್ರೀತಾ ಸುಧೀರ್ ರೈ ಅವರನ್ನು ಅಭಿನಂದಿಸಿ ಗೌರವಿಸಲಾಗುವುದು. ಬಳಿಕ ಯುವ ಕವಿಗೋಷ್ಠಿ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries