HEALTH TIPS

ಓದಿನ ಹಸಿವಿರುವವರಿಗೆ ಸುಗ್ಗಿ-ಕಸ್ತೂರಿ ಹಳೆಯ ಸಂಚಿಕೆಗಳನ್ನು ಆಸ್ವಾದಿಸಲು ಅವಕಾಶ

       
      "ಕನ್ನಡಕ್ಕೊಂದೇ ಕಸ್ತೂರಿ", "ಕನ್ನಡದ Readers' Digest" ಎಂಬ ಹೆಮ್ಮೆಯ ಕಸ್ತೂರಿ ಮಾಸಿಕದ ಹಳೆಯ ಸಂಚಿಕೆಗಳು ಈಗ ಅಂತರಜಾಲದಲ್ಲಿ ಠಿಜಜಿ ರೂಪದಲ್ಲಿ ಸಿಗುತ್ತವೆ. 1957ರ ಫೆಬ್ರವರಿ ಯಿಂದ 1995ರ ನವೆಂಬರ್ ವರೆಗಿನ, ಅಂದರೆ ಮೊಹರೆ ಹನುಮಂತರಾಯರು ಪ್ರಧಾನ ಸಂಪಾದಕರಾಗಿದ್ದ ಕಾಲದಿಂದ, ಆಮೇಲೆ ರಂಗನಾಥ ದಿವಾಕರ ಹಾಗೂ ಪಾ.ವೆಂ.ಆಚಾರ್ಯರ ಸಾರಥ್ಯದಲ್ಲಿ ನಡೆದು, ಕೆ.ಶಾಮರಾವ್ ಸಂಪಾದಕರಾಗಿದ್ದ ಅವಧಿಯವರೆಗಿನ ಬಹುತೇಕ ಸಂಚಿಕೆಗಳು ಇವೆ.
   ಪಾ.ವೆಂ.ಆಚಾರ್ಯರ ಮೊಮ್ಮಗಳು ಛಾಯಾ ಆಚಾರ್ಯ ಅವರು ಮುತುವರ್ಜಿ ವಹಿಸಿ, ಓಂಶಿವಪ್ರಕಾಶ್ ಅವರ ತಾಂತ್ರಿಕ ಸಲಹೆ/ಸಹಕಾರಗಳನ್ನು ಪಡೆದು, ಇಂಥದೊಂದು ಜನೋಪಯೋಗಿ ಕೆಲಸ ಸಾಧ್ಯವಾಗಿದೆ.
   ಅಂತರಜಾಲದಲ್ಲಿ ಪುಸ್ತಕಗಳು ಉಚಿತವಾಗಿ ಸಿಗುವ ಬೃಹತ್ ಸಂಗ್ರಹ archive dot org ಈ ತಾಣದಲ್ಲಿ ಕನ್ನಡದ ಬೇರೆ ಹಲವಾರು ಪುಸ್ತಕಗಳು ಈಗಾಗಲೇ ಲಭ್ಯವಿದ್ದು, ಇದೀಗ ಸುಮಾರು 175ರಷ್ಟು ಕಸ್ತೂರಿ ಸಂಚಿಕೆಗಳು ಈ ಸಂಗ್ರಹಕ್ಕೆ ಸೇರಿಕೊಂಡಿರುವುದು ಆಸಕ್ತರಿಗೆ ಮುತ್ತುರತ್ನಗಳ ದೊಡ್ಡ ಕೊಪ್ಪರಿಗೆ ಸಿಕ್ಕಂತೆಯೇ. ವಿಶ್ವಕನ್ನಡಿಗರಿಗೆ ಇದೊಂದು ಪ್ರೀತಿಯ ಉಡುಗೊರೆಯೇ ಸೈ.
             ಕಸ್ತೂರಿಯಲ್ಲಿ ಪ್ರಕಟವಾಗುವ ಸರಕಿಗೆ expiry date ಇಲ್ಲ. *ನಿಮ್ಮ ಶಬ್ದಭಾಂಡಾರ ಬೆಳೆಯಲಿ*, *ಇದುವೆ ಜೀವ ಇದು ಜೀವನ*, *ಪದಾರ್ಥ ಚಿಂತಾಮಣಿ*, *ನಗೆಮಲ್ಲಿಗೆ*, *ಪುಸ್ತಕ ವಿಭಾಗ* ಮುಂತಾದ ಸ್ಥಿರಶೀರ್ಷಿಕೆಗಳಷ್ಟೇ ಅಲ್ಲದೆ ಸತ್ತ್ವಯುತ ಲೇಖನಗಳು, ಚಿಂತನೆಗಳು... ಜತೆಯಲ್ಲೇ ಆ ಕಾಲದ ಗ್ರಾಹಕೋತ್ಪನ್ನಗಳ ಜಾಹಿರಾತುಗಳು... ಹಳೆಯ ಪುಸ್ತಕದ *ಘಮ* ಮೂಗಿಗೆ ಅಡರುವುದಿಲ್ಲ ಎಂಬುದೊಂದು ಅಂಶವನ್ನು ಬಿಟ್ಟರೆ ಅಕ್ಷರಶಃ ನಾಲ್ಕೈದು ದಶಕಗಳ ಹಿಂದಕ್ಕೆ ಹೋಗಿ ಜೀವನದ ಸುಂದರ ಉದ್ಯಾನದಲ್ಲಿ ವಿಹರಿಸಿ ಬಂದ ಅನುಭವ!
   ನೀವು *ಕಸ್ತೂರಿ*ಯ ಖಾಯಂ ಓದುಗರಾಗಿದ್ದವರಾದರೂ ಒಳ್ಳೆಯದೇ, ಇದುವರೆಗೆ ಒಮ್ಮೆಯೂ *ಕಸ್ತೂರಿ*ಯನ್ನು ಓದಿದ್ದೇ ಇಲ್ಲ ಎನ್ನುವವರಾದರೂ ಸರಿಯೇ, ಈ ನಿಧಿಯನ್ನು ಒಮ್ಮೆ ತೆರೆದುನೋಡಿ. ಮನಸ್ಸಿಗೆ (ಮತ್ತು ದೇಹಕ್ಕೂ) ಉಲ್ಲಾಸ ನೀಡುವ ಆರೋಗ್ಯಕರ *ಊಟ* ನಿಮಗಿಲ್ಲಿ ಸಿಗುತ್ತದೆ.ತಪ್ಪಿಸಿಕೊಳ್ಳಬೇಡಿ.
           https://archive.org/search.php?query=ಕಸ್ತೂರಿ
Attachments area

                                                ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries