HEALTH TIPS

ತಾಳ, ಮೇಳ, ನೃತ್ಯಗಳ ರಾಜ್ಯ ಶಾಲಾ ಕಲೋತ್ಸವ ಸಂಪನ್ನ

     
    ಕಾಸರಗೋಡು: ತಾಳ, ಮೇಳ, ಸಂಗೀತ, ಗೆಜ್ಜೆಯ ನಾದದಿಂದ ಕಲೆಗಳ ಲೋೀಕಕ್ಕೆ ಕೊಂಡೊಯ್ದು ಮನ ಪುಳಕಿಸಿದ ಹಾಗು ಕಾಸರಗೋಡಿನ ಜನತೆಗೆ ರಂಗು ರಂಗಿನ ಕಲೆಗಳನ್ನು ಪರಿಚಯಿಸಿ ಹೊಸ ಅನುಭವನ್ನು ಉಂಟುಮಾಡಿ ಜನಸಾಗರವನ್ನು ಸೆಳೆದ ಶಾಲಾ ಕಲೋತ್ಸವ ಸಂಪನ್ನಗೊಂಡಿತು.
ನಾಲ್ಕು ದಿನಗಳಿಂದ ಕಾಸರಗೋಡು ಜಿಲ್ಲೆಯ ಕಾಂಞಂಗಾಡ್‍ನ ವಿವಿಧ ಶಾಲೆ ಮತ್ತು ಸಭಾಂಗಣಗಳಲ್ಲಿ ನಡೆದ 60 ನೇ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವಕ್ಕೆ ತೆರೆ ಬಿತ್ತು. ನ.28 ರಂದು ಆರಂಭಗೊಂಡ ಶಾಲಾ ಕಲೋತ್ಸವದಲ್ಲಿ ಒಟ್ಟು 239 ವಿಭಾಗದ ಸ್ಪರ್ಧೆಗಳು ನಡೆಯಿತು. ಕಾಸರಗೋಡು ಜಿಲ್ಲೆಯಲ್ಲಿ 28 ವರ್ಷಗಳ ಹಿಂದೆ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವ ಜರಗಿತ್ತು. ಆ ಸಂದರ್ಭದಲ್ಲಿ ಕೇವಲ ಆರು ವೇದಿಕೆಗಳಿದ್ದರೆ, ಈ ಬಾರಿ 28 ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆಯಿತು.
     1977 ರಿಂದ ಇದು ವರೆಗೆ ನಡೆದ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಸತತವಾಗಿ 12 ವರ್ಷ ಅಂದರೆ 1977 ರಿಂದ 1989 ರ ವರೆಗೆ ತಿರುವನಂತಪುರ ಸಮಗ್ರ ಪ್ರಶಸ್ತಿಯನ್ನು ಪಡೆದಿತ್ತು. ಕಲ್ಲಿಕೋಟೆ ಜಿಲ್ಲೆ 17 ಬಾರಿ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ. ಎರಡು ಬಾರಿ ಎರ್ನಾಕುಳಂ ಜಿಲ್ಲೆ, ಮೂರು ಬಾರಿ ತೃಶ್ಶೂರು ಜಿಲ್ಲೆ, ಎರಡು ಬಾರಿ ಕಣ್ಣೂರು ಜಿಲ್ಲೆ ಸಮಗ್ರ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಒಂದು ವರ್ಷ ಕಣ್ಣೂರು ಹಾಗು ಎರ್ನಾಕುಳಂ ಸಮಾನ ಅಂಕ ಪಡೆದು ಪ್ರಶಸ್ತಿಯನ್ನು ಹಂಚಿಕೊಂಡಿತ್ತು. ಪಾಲ್ಘಾಟ್ ಜಿಲ್ಲೆ 3 ಬಾರಿ ಪಡೆದಿದೆ. 2015 ರಲ್ಲಿ ಪಾಲ್ಘಾಟ್ ಮತ್ತು ಕಲ್ಲಿಕೋಟೆ ಸಮಾನ ಅಂಕವನ್ನು ಪಡೆದು ಎರಡೂ ಜಿಲ್ಲೆಗಳು ಪ್ರಶಸ್ತಿಗೆ ಪಾತ್ರವಾಗಿತ್ತು.
     ವಿಶ್ವದಲ್ಲೇ ಬೃಹತ್ ಕಲೋತ್ಸವ ಎಂಬ ಖ್ಯಾತಿಗೆ ಪಾತ್ರವಾಗಿರುವ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ಪ್ರದರ್ಶನಗೊಂಡ ವೈವಿಧ್ಯಮಯ ಯಕ್ಷಗಾನ, ಸಂಗೀತ, ನೃತ್ಯ, ಜಾನಪದ, ಚಿತ್ರಕಲೆ, ಭಾಷಣ, ಪ್ರಬಂಧ, ಕಥೆ, ಕವನ ಹೀಗೆ ಮೊದಲಾದವು ಒಂದಕ್ಕಿಂತ ಮಿಗಿಲು ಎಂಬಂತಿತ್ತು. ಪ್ರಕೃತಿ ರಮಣೀಯತೆಗೆ ಹೆಸರಾದ ಕೇರಳದ ವಿವಿಧ ಕಲೆಗಳು ರಂಗದಲ್ಲಿ ಪ್ರದರ್ಶನಗೊಂಡಾಗ ಅದನ್ನು ವೀಕ್ಷಿಸಲು ಸೇರಿದ ಜನಸ್ತೋಮವೇ ಈ ಎಳೆಯ ವಿದ್ಯಾರ್ಥಿ ಪ್ರತಿಭೆಗಳಿಗೆ ಪೆÇ್ರೀತ್ಸಾಹ ಹಾಗು ನವ ಚೈತನ್ಯವನ್ನು ತಂದುಕೊಟ್ಟಿತು.
                          (ಚಿತ್ರ ಮಾಹಿತಿ : ಚವಿಟ್ಟು ನಾಟಕಂ, -ಕೂಡಿಯಾಟ್ಟ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries