HEALTH TIPS

ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವ ಹೊಣೆ ಹೆತ್ತವರಿಗಿದೆ : ಈಶ್ವರಿ ಬೇರ್ಕಡವು-ಮುಳ್ಳೇರಿಯ ಮಂಡಲದ `ಸಂತತಿ ಮಂಗಲ' ಕಾರ್ಯಕ್ರಮದ ಉದ್ಘಾಟನೆ

 
        ಬದಿಯಡ್ಕ: ನಮ್ಮ ಮಕ್ಕಳಿಗೆ ನಮ್ಮ ಮನೆಯೇ ಮೊದಲ ಪಾಠಶಾಲೆಯಾಗಿದ್ದರೆ ಮಾತ್ರ ಅವರ ಭವಿಷ್ಯ ಭದ್ರವಾಗಿರುತ್ತದೆ. ನಮ್ಮ ಶ್ರೇಷ್ಠವಾದ ಸಂಸ್ಕøತಿ, ಸಂಸ್ಕಾರದಿಂದ ಮಕ್ಕಳನ್ನು ನೋಡಿಕೊಳ್ಳುವ ಮೂಲಕ ಮುಂದಿನ ಪರಂಪರೆಯನ್ನು ಬೆಳೆಸಬೇಕು. ಇದಕ್ಕಾಗಿ ಮಾತೆಯರು ಹೆಚ್ಚಿನ ಮುತುವರ್ಜಿಯನ್ನು ವಹಿಸಿಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಮಹಾಮಂಡಲ ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಹೇಳಿದರು.
       ಶ್ರೀರಾಮಚಂದ್ರಾಪುರ ಮಠದ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನಿರ್ದೇಶಾನುಸಾರ ಹವ್ಯಕ ಮಹಾಮಂಡಲಾಂತರ್ಗತ ಮುಳ್ಳೇರಿಯ ಮಂಡಲದ ಆಶ್ರಯದಲ್ಲಿ ಭಾನುವಾರ ಪಳ್ಳತ್ತಡ್ಕ ವಲಯದ ಮುದ್ದು ಮಂದಿರದಲ್ಲಿ ಶ್ರೀಗಳವರ ವಿಶಿಷ್ಟ ಕಲ್ಪನೆಯ ಸಪ್ತ ಮಂಗಲಗಳಲ್ಲಿ ಒಂದಾದ, ಮುಂದಿನ ಪೀಳಿಗೆಯ ಶೇಯಸ್ಸಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿದುಕೊಳ್ಳುವ `ಸಂತತಿ ಮಂಗಲ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
      ಯುವಜನಾಂಗವು ಸಂಸ್ಕಾರವನ್ನು ಮೈಗೂಡಿಸಿಕೊಂಡು ನಮ್ಮತನವನ್ನು ಗಟ್ಟಿಗೊಳಿಸಬೇಕು ಎಂದು ಅವರು ತಿಳಿಸಿದರು.
       ಡಾ. ಶೋಭಾ ಕಾಟಿಪಳ್ಳ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿಗಳನ್ನು ನೀಡುತ್ತಾ ಪ್ರತ್ಯೇಕವಾಗಿ ತಂದೆ ತಾಯಂದಿರು ಮಕ್ಕಳಿಗೆ ನೀಡಬೇಕಾದ ಪ್ರೀತಿ, ಸಲುಗೆ ಮೊದಲಾದವುಗಳ ಕುರಿತು ಮಾತನಾಡಿದರು. ಕುಟುಂಬದೊಂದಿಗಿನ ಪರಸ್ಪರ ಹೊಂದಾಣಿಕೆ, ಮಕ್ಕಳ ಮೇಲೆ ಪ್ರೀತಿಪೂವ9ಕ ಹಿಡಿತವನ್ನು ಕಾಯ್ದುಕೊಳ್ಳುವುದರಿಂದ ಉತ್ತಮ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
     ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಮಾತೃ ವಿಭಾಗ ಪ್ರಧಾನರಾದ ಕುಸುಮಾ ಪೆಮು9ಖ, ಸಂಘಟನಾ ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ, ಉಪಾಧ್ಯಕ್ಷ ಡಾ.ಬೇ. ಸೀ. ಗೋಪಾಲಕೃಷ್ಣ ಭಟ್, ಸಹಾಯ ವಿಭಾಗ ಪ್ರಧಾನ ಮಹೇಶ ಸರಳಿ, ಬಿಂದು ಸಿ0ಧು ವಿಭಾಗದ ಪ್ರಧಾನ ಉಳುವಾನ ಈಶ್ವರ ಭಟ್, ಶಿಷ್ಯ ಮಾಧ್ಯಮ ಪ್ರಧಾನ ಗೋವಿಂದ ಭಟ್ ಬಳ್ಳಮೂಲೆ,  ಪಳ್ಳತ್ತಡ್ಕ ವಲಯ ಅಧ್ಯಕ್ಷ ಪರಮೇಶ್ವರ ಭಟ್ಟ ಮೊದಲಾದವರು ಉಪಸ್ಥಿತರಿದ್ದರು.
     ಗುರುವಂದನೆ ಗೋವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಶ್ರೀ ರಾಮ ತಾರಕ ಮಂತ್ರ ಪಠಣ ಶಾಂತಿಮಂತ್ರ ಧ್ವಜಾವರೋಹಣದೊಂದಿಗೆ ಮುಕ್ತಾಯಗೊಂಡಿತು. ಮಾತೃತ್ವಮ್ ಮಂಡಲ ಕೋಶಾಧಿಕಾರಿ ಶಿವಕುಮಾರಿ ಕುಂಚಿನಡ್ಕ, ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಗುರುಮೂರ್ತಿ ಮೇಣ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries