ಕಾಸರಗೋಡು: ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಕೌನ್ಸಿಲರ್ ಗಳನ್ನು ನೇಮಿಸುವಂತೆ ಶಿಕ್ಷಣ ಇಲಾಖೆಗೆ ಆದೇಶ ನೀಡಲು ಜಿಲ್ಲಾ ಮಟ್ಟದ ಜ್ಯುವೆನೆಲ್ ಜಸ್ಟೀಸ್ ಸಮಿತಿ ಸಭೆ ನಿರ್ಧರಿಸಿದೆ.
ಬಾಲ ಕಾನೂನು ಸಂಬಂಧ ಚಟುವಟಿಕೆ ನಡೆಸುತ್ತಿರುವ ವಿವಿಧ ಏಜೆನ್ಸಿಗಳ ಏಕೀಕರಣ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಸಭೆ ಜರುಗಿತು.
ಜಿಲ್ಲಾ ನ್ಯಾಯಮೂರ್ತಿ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪೆÇೀಕ್ಸೋ ಪ್ರಕರಣಗಳಿಗೆ ಈಡಾದ ಮಕ್ಕಳನ್ನು ಮಾನವೀಯ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವಂತೆ ಜಲ್ಲಾ ವೈದ್ಯಾಧಿಕಾರಿಗೆ ಜಿಲ್ಲಾ ನ್ಯಾಯಮೂರ್ತಿ ಆದೇಶ ನೀಡಿದರು. ಮಕ್ಕಳ ವಿರುದ್ಧ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದರೆ ತುರ್ತಾಗಿ ಜಿಲ್ಲಾ ಜ್ಯುವೆನೆಲ್ ಜಸ್ಟೀಸ್ ಸಮಿತಿಯ ಸಭೆ ನಡೆಸುವಂತೆ ಅವರು ಆದೇಶ ನೀಡಿದರು. ಬಳಕೆಯಿಲ್ಲದ, ಅಪಾಯಕಾರಿ ರೂಪದಲ್ಲಿ ತೆರೆದುಕೊಂಡಿರುವ ಕೊಳವೆ ಬಾವಿಗಳನ್ನು ತಕ್ಷಣ ಮುಚ್ಚುಗಡೆ ನಡೆಸುವಂತೆ ಜಿಲ್ಲಾಡಳಿತೆಗೆ ಸಭೆ ಆದೇಶ ನೀಡಿದೆ.
ಸಭೆಯಲ್ಲಿ ಸಹಾಯಕ ಜಿಲ್ಲಾ ನ್ಯಾಯಮೂರ್ತಿ ಪಿ.ಎಸ್.ಶಶಿ ಕುಮಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪಿ.ಪಿ.ಶ್ಯಾಮಲಾದೇವಿ, ಕ್ರೈಂ ಬ್ರಾಂಚ್ ಡಿ.ವೈ.ಎಸ್.ಪಿ. ಪ್ರದೀಪ್ ಕುಮಾರ್, ಜಿಲ್ಲಾ ಕಾನೂನು ಅಧಿಕಾರಿ ಕೆ.ಪಿ.ಉಣ್ಣಿಕೃಷ್ಣನ್, ಬುಡಕಟ್ಟು ಅಭಿವೃದ್ಧಿ ಅಧಿಕಾರಿ ಪಿ.ಟಿ.ಅನಂತ ಕೃಷ್ಣನ್, ಸರಕಾರಿ ಮಕ್ಕಳ ಹೋಂ ವರಿಷ್ಠಾಧಿಕಾರಿ ಕೆ.ಎಸ್.ಮಾಯಾ, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಷಾಂಟಿ ಕೆ.ಕೆ., ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಸಿ.ಎ.ಸಿಂಧು, ಜಿಲ್ಲಾ ಶಿಕ್ಷಣ ನಿರ್ದೇಶಕರ ಕಚೇರಿ ಕಿರಿಯ ವರಿಷ್ಠಾಧಿಕಾರಿ ಕೆ.ನೂರುಲ್ ಅಬ್ ಸಾರ್ ಮೊದಲಾದವರು ಉಪಸ್ಥಿತರಿದ್ದರು.