ಕುಂಬಳೆ: ಶ್ರೀಧರ್ಮಚಕ್ರ ಟ್ರಸ್ಟ್, ಶ್ರೀ ಭಾರತೀ ನೇತ್ರಚಿಕಿತ್ಸಾಲಯ ಮುಜುಂಗಾವು ಹಾಗೂ ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿಯ ನೇತೃತ್ವದಲ್ಲಿ ವಿಹಾನ್ ಮೋಹನ್ ಪುಣೆ ಪ್ರಾಯೋಜಕತ್ವದಲ್ಲಿ ಕುಂಬಳೆ ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದಲ್ಲಿ ಭಾನುವಾರ ಜರಗಿತು.
ಶ್ರೀ ಭಾರತೀ ನೇತ್ರಚಿಕಿತ್ಸಾಲಯದ ಆಡಳಿತ ಅಧಿಕಾರಿ ಡಾ. ಎಂ. ಶ್ರೀಧರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್.ಎನ್.ಭಟ್ ಅರ್ಜುನಗುಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್.ಎನ್.ಶರ್ಮ ಶುಭಾಶಂಸನೆಗೈದರು. ಡಾ| ಶ್ರೀಧರ ಭಟ್ ಮಾವೆ ಕಣ್ಣು ತಪಾಸಣೆ ನಡೆಸಿದರು. ಶ್ರೀಕೃಷ್ಣ ವಿದ್ಯಾಲಯದ ಸಂಚಾಲಕ ಶೇಂತಾರು ನಾರಾಯಣ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.