ಕುಂಬಳೆ: ಆರಿಕ್ಕಾಡಿ ಕಾರ್ಳೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಮಾರ್ಚ್ 5ರಿಂದ 12ರವೆಗೆ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳ ಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯಾನುಗ್ರಹದೊಂದಿಗೆ ದ್ವಿತೀಯ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಶ್ರೀಕ್ಷೇತ್ರದಲ್ಲಿ ಸಿದ್ಧತಾ ಸಭೆ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿ.ಹರಿಶ್ಚಂದ್ರ ಆಚಾರ್ಯ ಬೇಕೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರದ ಧಾರ್ಮಿಕ ವಿಧಿ ವಿಧಾನಗಳ ಪದ್ಧತಿಯಂತೆ ಶ್ರೀ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲೋತ್ಸವ ಸಮಯ ಸನ್ನಿಹಿತವಾಗಿದ್ದು, ಕಾರ್ಯಕರ್ತರು ಅತ್ಯಂತ ಶ್ರದ್ಧೆಯಿಂದ ವಿವಿಧ ಕೈಂಕರ್ಯಗಳನ್ನು ಮಾಡುವ ಮೂಲಕ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು. ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪ್ರತಿಯ ಕರಡನ್ನು ರಚಿಸಲಾಯಿತು.
ಸಭೆಯಲ್ಲಿ ಶ್ರೀಕ್ಷೇತ್ರದ ಪ್ರಧಾನ ಆಚಾರ್ಯ ಬ್ರಹ್ಮಶ್ರೀ ಪುರೋಹಿತ ಕೆ.ರಾಮಕೃಷ್ಣ ಆಚಾರ್ಯ ಆರಿಕ್ಕಾಡಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ವಾಸುದೇವ ಆಚಾರ್ಯ ಕುಂಬಳೆ, ಮಾತೃ ಸಂಘದ ಅಧ್ಯಕ್ಷೆ ಜಯಂತಿ ವಾಸುದೇವ ಆಚಾರ್ಯ, ಕಾರ್ಯದರ್ಶಿ ತ್ರಿವೇಣಿ ದೇವರಾಜ ಆಚಾರ್ಯ, ಕ್ಷೇತ್ರದ ಪ್ರಧಾನ ಅರ್ಚಕ ದುರ್ಗಾಪ್ರಸಾದ ಆಚಾರ್ಯ, ನ್ಯಾ.ರಾಜೇಶ ಆಚಾರ್ಯ ತಾಳಿಪಡ್ಪು, ಶಿವಾನಂದ ಆಚಾರ್ಯ ಪ್ರತಾಪನಗರ, ಪಾಂಡುರಂಗ ಆಚಾರ್ಯ ತಾಳಿಪಡ್ಪು, ಸತ್ಯನಾರಾಯಣ ಕಾಸರಗೋಡು, ಶ್ರೀಕಾಂತ ಆಚಾರ್ಯ ಕಾಸರಗೋಡು ಮತ್ತಿತರರು ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು.