ಮುಳ್ಳೇರಿಯ: ಕಾಸರಗೋಡು ಸರ್ಕಾರಿ ಕಾಲೇಜಿನ ಎರಡು ಮತ್ತು ಮೂರನೇ ಎನ್ ಎಸ್ ಎಸ್ ಘಟಕಗಳ ನೇತೃತ್ವದಲ್ಲಿ ಕೋಳಿಯಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಪ್ತದಿನ ಎನ್ ಎಸ್ ಎಸ್ ವಿಶೇಷ ಶಿಬಿರ ನಡೆಯಿತು.
ಶಿಬಿರದ ಸಮಾರೋಪ ಸಮಾರಂಭವನ್ನು ಕಾಸರಗೋಡು ಸರ್ಕಾರಿ ಕಾಲೇಜಿನ ಪಾಂಶುಪಾಲ ಡಾ.ಎ.ಎಲ್. ಅನಂತಪದ್ಮನಾಭ ಅವರು ಉದ್ಘಾಟಿಸಿದರು. ಶಿಬಿರವನ್ನು ಸ್ಥಳೀಯರ ಸಂಪೂರ್ಣ ಬೆಂಬಲ ಮತ್ತು ಭಾಗವಹಿಸುವಿಕೆಯೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು.
ಶಿಬಿರದ ಭಾಗವಾಗಿ ತಡೆಗೋಡೆ ನಿರ್ಮಾಣ, ಗುರುಕುಲ ಮಾದರಿಯ ಕ್ಲಾಸ್ ನಿರ್ಮಾಣ, ಒಪನ್ ಕ್ಲಾಸ್ ನಿರ್ಮಾಣ, ಜೀವವೈವಿಧ್ಯ ಉದ್ಯಾನ ನಿರ್ಮಾಣ, ಶಾಲಾ ಆವರಣ ಶುಚೀಕರಣ, ರಸ್ತೆ ಬದಿ ಶುಚೀಕರಣ, ಕೆರೆ ಶುಚೀಕರಣ, ವಾಲಿಬಾಲ್, ಕೊಕ್ಕೋ ಮತ್ತು ಕಬಡ್ಡಿ ಕೋರ್ಟ್ ನಿರ್ಮಿಸಿದರು.
ಕಲೆ, ಸಾಂಸ್ಕøತಿಕ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳ ನೇತೃತ್ವದಲ್ಲಿ ವಿವಿಧ ವಿಷಯಗಳ ಕುರಿತು ತರಗತಿಗಳನ್ನು ನಡೆಸಲಾಯಿತು. ಉರ್ವರಂ ಪ್ಲಾಸ್ಟಿಕ್ ವಿಮುಕ್ತ ಹರಿತ ಕೇರಳ ಯೋಜನೆಯ ಭಾಗವಾಗಿ ಬೀದಿನಾಟಕ, ಸರ್ವೇ, ಜಾಗೃತಿ ರ್ಯಾಲಿಗಳನ್ನು ಎನ್ನೆಸ್ಸೆಸ್ ಸ್ವಯಂಸೇವಕರು ಹಮ್ಮಿಕೊಂಡಿದ್ದರು.