HEALTH TIPS

ಉದ್ಘಾಟನೆಗೆ ಸಜ್ಜಾಗುತ್ತಿರುವ ಉಳಿಯತ್ತಡ್ಕ ಶಕ್ತಿ ಸಭಾ ಭವನ, ಸ್ವಾಗತ ಸಮಿತಿ ರಚನೆ- ಹಿಂದೂ ಧರ್ಮ ಶ್ರೇಷ್ಠ : ಉಳಿಯತ್ತಾಯ ವಿಷ್ಣು ಆಸ್ರ


       ಮಧೂರು: ವಿಶ್ವದಲ್ಲೇ ಶ್ರೇಷ್ಠವಾದ ಧರ್ಮ ಸನಾತನವೊಂದೇ ಆಗಿದೆ. ಸನಾತನ ಪರಂಪರೆಯಿರುವ ಈ ಪವಿತ್ರ ಧರ್ಮವನ್ನು ರಕ್ಷಿಸಲು ನಾವೆಲ್ಲ ಮುಂದಾಗಬೇಕೆಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ನುಡಿದರು.
    ಉಳಿಯತ್ತಡ್ಕ ಶ್ರೀ ಶಕ್ತಿ ಭಜನಾ ಮಂದಿರ ಪರಿಸರದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೆ ಸಜ್ಜಾಗಿರುವ ಶಕ್ತಿ ಸಭಾ ಭವನದ ಪ್ರವೇಶೋತ್ಸವದ ಯಶಸ್ವಿಗಾಗಿ ನಡೆದ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ಮಾಡಿದರು.
      ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಆಸ್ತಿಕ ಶ್ರದ್ಧಾಳುಗಳನ್ನು ಒಟ್ಟು ಸೇರಿಸುವ ಕೆಲಸ ನಡೆಯಬೇಕಾಗಿದೆ. ಯುವ ಜನರಲ್ಲಿ ಧರ್ಮ ಜಾಗೃತಿ ಮೂಡಿಸುವ ಮೂಲಕ ದೇಶವನ್ನು ಸಮೃದ್ಧವಾಗಿಸಬಹುದಾಗಿದೆ. ಅಂತಹಾ ಸತ್ಕಾರ್ಯಗಳಿಗೆ ಶಕ್ತಿ ಸಭಾ ಭವನ ವೇದಿಕೆಯಾಗಲಿದೆ ಎಂದು ಉಳಿಯತ್ತಾಯರು ನುಡಿದರು.
   ಶ್ರೀ ಶಕ್ತಿ ಭಜನಾ ಮಂದಿರದ ಅಧ್ಯಕ್ಷ ಸಂತೋಷ್ ಆರ್.ಗಟ್ಟಿ ವಿಷಯ ಮಂಡಿಸಿ ಸರ್ವರ ಸಹಕಾರವನ್ನು ಕೋರಿದರು. ಶಕ್ತಿ ಸಭಾ ಭವನದ ನಿರ್ಮಾಣಕ್ಕೆ ತಗಲಿದ ಖರ್ಚುವೆಚ್ಚಗಳ ಬಗ್ಗೆ ಮತ್ತು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಅವರು ಪ್ರಸ್ತಾಪಿಸಿದರು.
   ತಾರಾನಾಥ ಮಧೂರು, ಕೆ.ಎನ್.ವೆಂಕಟ್ರಮಣ ಹೊಳ್ಳ, ಗಿರೀಶ್, ಪ್ರಭಾಶಂಕರ, ಮಹಾಬಲ ರೈ ಕೂಡ್ಲು, ಉಮೇಶ ಮನ್ನಿಪ್ಪಾಡಿ, ರವೀಂದ್ರ ರೈ ಸಿರಿಬಾಗಿಲು, ಶಂಕರ ಜೆ.ಪಿ.ನಗರ, ರಘು ಮೀಪುಗುರಿ, ಶ್ರೀಧರ ಗಟ್ಟಿ, ಉದಯ ಕುಮಾರ್ ಮನ್ನಿಪ್ಪಾಡಿ, ಗಿರೀಶ್ ಸಂಧ್ಯಾ, ದಿನೇಶ್ ಬಂಬ್ರಾಣ, ಸುಕುಮಾರ ಕುದ್ರೆಪ್ಪಾಡಿ, ಬಿ.ಬಾಲಕೃಷ್ಣ ಅಗ್ಗಿತ್ತಾಯ ಮೊದಲಾದವರು ಅಭಿಪ್ರಾಯಗಳನ್ನು ಮಂಡಿಸಿದರು.
     ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ರಕ್ಷಾಧಿಕಾರಿಯಾಗಿರುವ ಸ್ವಾಗತ ಸಮಿತಿಯನ್ನು ರೂಪಿಸಲಾಯಿತು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಬ್ರಹ್ಮಶ್ರೀ ಪುರೋಹಿತ ರತ್ನ ಕೇಶವಾಚಾರ್ಯ ಉಳಿಯತ್ತಡ್ಕ, ವಸಂತ ಪೈ ಬದಿಯಡ್ಕ ಗೌರವಾಧ್ಯಕ್ಷರಾಗಿರುವರು. ಅಧ್ಯಕ್ಷರಾಗಿ ತಾರಾನಾಥ ಮಧೂರು, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಆರ್.ಗಟ್ಟಿ, ಕೋಶಾಧಿಕಾರಿಯಾಗಿ ಯು.ಗೋಪಾಲ ಆಯ್ಕೆಯಾದರು.
    ವಿವಿಧ ಕ್ಷೇತ್ರಗಳ ಗಣ್ಯರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಮತ್ತು ಸಂಚಾಲಕರನ್ನೂ ನೇಮಿಸಲಾಯಿತು. ಮಾರ್ಚ್ 24 ರಂದು ಸಭ ಭವನ ಉದ್ಘಾಟನೆಯಾಗಲಿದೆ. ಶ್ರೀ ಶಕ್ತಿ ಭಜನಾ ಮಂದಿರದ ಕಾರ್ಯದರ್ಶಿ ಮನೀಶ್ ಸ್ವಾಗತಿಸಿ, ಕೋಶಾಧಿಕಾರಿ ಮಣಿ ವಂದಿಸಿದರು. ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಶಕ್ತಿ ಸಭಾ ಭವವನದ ಕಾಮಗಾರಿ ಪೂರ್ಣಗೊಳಿಸಲು ಸಹಾಯವಾಗುವಂತೆ ನಗದು ಮತ್ತು ಸಾಮಾಗ್ರಿಗಳನ್ನು ನೀಡುವುದಾಗಿ ಸಭೆಯಲ್ಲಿ ಭರವಸೆ ವ್ಯಕ್ತವಾಯಿತು. ಉದ್ಘಾಟನಾ ಸಮಾರಂಭದ ಯಶಸ್ವಿಗೆ ಸಹಕರಿಸುವುದಾಗಿ ಭಾಗವಹಿಸಿದ ಊರಪರವೂರ ಭಕ್ತಾದಿಗಳು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries