ಕಾಸರಗೊಡು: ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ವ್ಯಾಪಾರಿ ಮತ್ತು ವ್ಯವಸಾಯಿಗಳಿಗಾಗಿ ಪ್ಲಾಸ್ಟಿಕ್ ನಿಷೇಧ ಸಂಬಂಧ ಜನಜಾಗೃತಿ ತರಗತಿ ವ್ಯಾಪಾರಿ ಭವನದಲ್ಲಿ ಜರುಗಿತು. ಜ.1ರಿಂದ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ ಹಸಿರು ಕೇರಳ ಮಿಷನ್ ವತಿಯಿಂದ ತರಗತಿ ಆಯೋಜಿಸಲಾಗಿತ್ತು. ತ್ಯಾಜ್ಯ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಪ್ಲಾಸ್ಟಿಕ್ ಉತ್ಪನ್ನಗಳು, ತ್ಯಾಜ್ಯದಿಂದ ಉಂಟಾಗುವ ಸಮಸ್ಯೆಗಳು, ನಿಷೇಧಿತ ಉತ್ಪನ್ನಗಳ ಬಳಕೆ ವಿರುದ್ಧ ಕಾನೂನು ಕ್ರಮಗಳು, ಬದಲಿ ಉತ್ಪನ್ನಗಳು
ಇತ್ಯಾದಿಗಳಿಗೆ ಸಂಬಂಧಿಸಿ ತರಗತಿ ನಡೆಯಿತು.
ಗ್ರಾಮಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್ ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ತರಗತಿ ನಡೆಸಿದರು. ಸಹಾಯಕ ಕಾರ್ಯದರ್ಶಿ ಸುಧಾಕರನ್ ನಾಯರ್, ಆರೋಗ್ಯ ಇನ್ಸ್‍ಪೆಕ್ಟರ್ ಅಶ್ರಫ್, ಉಪಾಧ್ಯಕ್ಷೆ ನ್ಯಾಯವಾದಿ ಸಮೀರಾ ಫೈಝಲ್, ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಬೆಳ್ಳೂರು, ಸದಸ್ಯರಾದ ಅಬ್ದುಲ್ಲ ಕುಞÂ, ಎಸ್.ಎಚ್.ಹಮೀದ್ ಮೊದಲಾದವರು ಉಪಸ್ಥಿತರಿದ್ದರು.
ಇಂದು ಮೆರವಣಿಗೆ:
ಪ್ಲಾಸ್ಟಿಕ್ ನಿಷೇಧ ಕೇರಳಾದ್ಯಮತ ಜ.1ರಿಂದ ಜಾರಿಗೊಳ್ಳಲಿದ್ದು, ಇದರ ಅಂಗವಾಗಿ ಕಾಸರಗೋಡು ನಗರದಲ್ಲಿ ಡಿಸೆಂಬರ್ 1ರಂದು ಜಗೃತಿ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಆರಂಭಗೊಳುವ ಮೆರವಣಿಗೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಹಸುರು ನಿಶಾನಿ ತೋರಿಸುವರು. ಜನಪ್ರತಿನಿಧಿಗಳು, ಕುಟುಂಬಶ್ರೀ, ವಿದ್ಯಾರ್ಥಿ ಪೆÇಲೀಸ್, ಎನ್.ಸಿ.ಸಿ., ಎನ್.ಎಸ್.ಎಸ್. ಸ್ಕೌಟ್ ಮತ್ತು ಗೈಡ್ಸ್, ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸುವರು. ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಪ್ರತಿಜ್ಞಾ ಸ್ವೀಕಾರ, ಜಾಗೃತಿ ತರಗತಿ ಇತ್ಯಾದಿಗಳು ನಡೆಯಲಿವೆ.
ಕೇರಳದಲ್ಲಿ ಪ್ಲಾಸ್ಟಿಕ್ ನಿಷೇಧ ಜರಿಗೊಂಡಲ್ಲಿ ಸುಮಾರು 10800ಟನ್ ಪ್ಲಾಸ್ಟಿಕ್ ವಸ್ತುಗಳನ್ನು ಸಂಸ್ಕರಿಸಬೇಕಾಗಿ ಬರಲಿದೆ.