ಕಾಸರಗೋಡು: ಅಣಂಗೂರು ಶ್ರೀ ಶಾರದಾಂಬ ಭಜನಾ ಮಂದಿರದ ವತಿಯಿಂದ 2020 ನೇ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಭಾನುವಾರ ಮಂದಿರದಲ್ಲಿ ನಡೆಯಿತು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗು ವಕೀಲ ಪಿ. ಮುರಳೀಧರನ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮಂದಿರದ ಅಧ್ಯಕ್ಷ ಸೂರಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸತೀಶ್, ಕೋಶಾಧಿಕಾರಿ ಕಿರಣ್ ಚಂದ್ರ, ಜೊತೆಕಾರ್ಯದರ್ಶಿ ನಳಿನಾಕ್ಷ, ಹಿರಿಯ ಸದಸ್ಯ ಶಂಕರ ನಾಯ್ಕ್, ಶರತ್ ಕುಮಾರ್, ರಾಜೇಶ್ ಮಾತೃಸಮಿತಿಯ ಅಧ್ಯಕ್ಷೆ ಬಿಂದು ದಾಸ್ ಹಾಗು ಕಾರ್ಯದರ್ಶಿ ಹೇಮಲತಾ, ಉಷಾ ಸುರೇಶ್, ಜಾಹ್ನವಿ ಮೊದಲಾದವರು ಉಪಸ್ಥಿತರಿದ್ದರು. ಕ್ಯಾಲೆಂಡರ್ ಕನ್ನಡ ಹಾಗು ಮಲಯಾಳದಲ್ಲಿ ಉಚಿತವಾಗಿ ವಿತರಿಸಲಾಗುತ್ತದೆ.
ಅಣಂಗೂರಲ್ಲಿ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ
0
ಡಿಸೆಂಬರ್ 15, 2019