ಕಾಸರಗೋಡು: ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನದ್ರೋಹಿ ನೀತಿಯನ್ನು ಪ್ರತಿಭಟಿಸಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ಧರಣಿ ಸತ್ಯಾಗ್ರಹವನ್ನು ಜೋನಿ ನೆಲ್ಲೂರು ಉದ್ಘಾಟಿಸಿ ಮಾತನಾಡಿದರು. ಟಿ.ಇ.ಅಬ್ದುಲ್ಲ ಅಧ್ಯಕ್ಷತೆ ವಹಿಸಿದರು. ಮಾಜಿ ಶಾಸಕ ಸಿ.ಟಿ.ಅಹಮ್ಮದಲಿ, ಕೆ.ಪಿ.ಕುಂಞÂಕಣ್ಣನ್, ಹಕೀಂ ಕುನ್ನಿಲ್, ಶಾಸಕ ಎನ್.ಎ.ನೆಲ್ಲಿಕುನ್ನು, ಕೆ.ನೀಲಕಂಠನ್, ಕುರ್ಯಾಕೋಸ್ ಪ್ಲಾಪರಂಬಿಲ್, ಹರೀಶ್ ಬಿ.ನಂಬ್ಯಾರ್, ಅಬ್ರಹಾಂ, ಎ.ಜಿ.ಸಿ.ಬಶೀರ್, ವಿ.ಕಮ್ಮಾರನ್, ಜೋಸೆಫ್, ಎಚ್.ಜನಾರ್ಧನನ್, ಮಾಹೀನ್ ಹಾಜಿ, ಶಾಂತಮ್ಮ ಫಿಲಿಪ್, ಗೋಪಾಲನ್ ನಾಯರ್ ಮೊದಲಾದವರಿದ್ದರು. ಎ.ಗಂಗಾಧರನ್ ಸ್ವಾಗತಿಸಿದರು.