ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಪೇರ್ ಸಹಕಾರಿ ಸಂಘದ ನೇತೃತ್ವದಲ್ಲಿ ಆದೂರು ಕುಕ್ಕಂಗೈ ಮೂಳಿ ಎಂಬಲ್ಲಿ ಎರಡು ಎಕ್ರೆ ಬಂಜರು ಭೂಮಿಯಲ್ಲಿ "ಬಿತ್ತುವ ನಲ್ಮೆಯ ಹೊಲದಲ್ಲಿ" ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ ಆಗಸ್ಟ್ 2 ರಂದು ಭತ್ತದ ನಾಟಿ ನಡೆಸಿ ಬಿತ್ತನೆಗೈದ ಸಾವಯವ ಬೆಳೆಯಿಂದ ಉತ್ಪಾದಿಸಲಾದ ಅಕ್ಕಿಯನ್ನು ಸಹಕಾರಿ ಅಕ್ಕಿ ಎಂಬ ಹೆಸರಲ್ಲಿ ಮಾರುಕಟ್ಟೆಗೆ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಆದೂರು ಚೆಕ್‍ಪೋಸ್ಟ್ ಪರಿಸರದಲ್ಲಿ ನಡೆದ ಸಮಾರಂಭದಲ್ಲಿ ಕಾರಡ್ಕ ಗ್ರಾ.ಪಂ. ಅಧ್ಯಕ್ಷೆ ಅನಸೂಯ ರೈ ಉದ್ಘಾಟಿಸಿದರು.ಸಹಕಾರಿ ಸಂಘದ ಅಧ್ಯಕ್ಷ ವಿ.ಕುಂಞÂರಾಮನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಎ.ವಿಜಯಕುಮಾರ್, ಸದಸ್ಯೆ ಸೌದಾ ಬಿ. ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು. ಸಹಕಾರಿ ಸಂಘದ ನಿರ್ದೇಶಕ ರವೀಂದ್ರ ರೈ ಮಲ್ಲಾವರ ಸ್ವಾಗತಿಸಿ, ಮೊಹಸಿನ ರಝಾಕ್ ವಂದಿಸಿದರು.