ಕುಂಬಳೆ: ನಾಯ್ಕಾಪು ಶ್ರೀ ಸಾಯಿಬಾಬಾ ಮಂದಿರದಲ್ಲಿ ನಾರಾಯಣಮಂಗಲದ ಶ್ರೀ ವಿಘ್ನೇಶ್ವರ ಯಕ್ಷಗಾನ ಸಂಘದಿಂದ `ಚೂಡಾಮಣಿ' ಪ್ರಸಂಗದ ಯಕ್ಷಗಾನ ತಾಳಮದ್ದಳೆ ಕೂಟ ಇತ್ತೀಚೆಗೆ ಜರಗಿತು.
ಹಿಮ್ಮೇಳದಲ್ಲಿ ಕೇಶವ ಭಟ್ ಕಂಬಾರ್, ವಸಂತ್ ಕುಮಾರ್ ಶರ್ಮ, ನಟರಾಜ ಕಲ್ಲೂರಾಯ, ಕೃಷ್ಣಮೂರ್ತಿ, ಮುಮ್ಮೇಳದಲ್ಲಿ ಗೋಪಾಲಕೃಷ್ಣ ನಾಯ್ಕ್ ಸೂರಂಬೈಲು, ಪ್ರತಾಪ್ ಕುಂಬಳೆ, ಉದಯಶಂಕರ ಭಟ್ ಮಜಲು, ಪ್ರದೀಪ್ ಕೂಡ್ಲು, ಸದಾಶಿವ ಗಟ್ಟಿ ನಾಯ್ಕಾಪು, ಬಾಲ ಕೃಷ್ಣ ಆಚಾರ್ ನೀರ್ಚಾಲು, ಪವನ್ ಕುಮಾರ್ ನೀರ್ಚಾಲು ಹಾಗೂ ಸುಧಾ ಕಲ್ಲೂರಾಯ ಸಹಕರಿಸಿದರು.