ಕಾಸರಗೋಡು: ದ್ರಾವಿಡ ಜಾನಪದದ ತೌಲನಿಕ ಅಧ್ಯಯನವನ್ನು ವೈಜ್ಞಾನಿಕವಾಗಿ ನಡೆಸಿದಾಗ ಮಾತ್ರ ಇತಿಹಾಸ ರಚನೆ ಪರಿಪೂರ್ಣವಾಗುವುದರೊಂದಿಗೆ, ಇದರಿಂದ ಇತಿಹಾಸಕ್ಕೆ ಮಹತ್ವದ ಕೊಡುಗೆ ನೀಡಲೂ ಸಾಧ್ಯವಾಗಲಿದೆ ಎಂಬುದಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿಕಟಪೂರ್ವ ಉಪಕುಲಪತಿಗಳಾದ ಪೆÇ್ರ.ಕೆ ಚಿನ್ನಪ್ಪ ಗೌಡ ತಿಳಿಸಿದ್ದಾರೆ.
ಅವರು ಕೇರಳ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾ ಯೋಜಕತ್ವ ದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತ ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನೇತೃತ್ವದಲ್ಲಿ 'ದ್ರಾವಿಡ ಜಾನಪದ ಸಂಶೋಧನ ವಿಧಾನ - ತಾತ್ವಿಕ, ಪ್ರಾಯೋಗಿಕ ಅನುಸಂಧಾನ'ಎಂಬ ವಿಷಯದ ಬಗ್ಗೆ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಆರಂಭಗೊಂಡ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ತುಳುನಾಡಿನ ಮಹಾಕಾವ್ಯಗಳು ಇಂದಿಗೂ ಜ್ವಲಂತ ಬೆಳಕು ಚೆಲ್ಲುವಲ್ಲಿ ಸಹಕಾರಿಯಾಗಿದ್ದು, ಇದಕ್ಕಾಗಿ ನಾವು ಹೆಮ್ಮೆಪಡಬೇಕಾಗಿದೆ ಎಂದು ತಿಳಿಸಿದರು. ಕಾಲೇಜು ಪ್ರಾಂಶುಪಾಲ ಡಾ ಎ.ಎಲ್ ಅನಂತಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು.
ಕೇರಳ ತುಳು ಅಕಾಡಮಿ ಅಧ್ಯಕ್ಷ ಎಂ. ಉಮೇಶ್ ಸಾಲ್ಯಾನ್, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಎಸ್ ಸ್ವಾಗತಿಸಿದರು. ವಿಚಾರಗೋಷ್ಟಿಯ ಸಂಯೋಜಕಿ ಡಾ.ಆಶಾಲತಾ ಸಿ.ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇಂದು ಸಮಾರೋಪ:
10ರಂದು ಬೆಳಗ್ಗೆ 9.30ರಿಂದ 'ಜನಪದ ರಂಗಭೂಮಿ-ತಾತ್ವಿಕ ಗ್ರಹಿಕೆಯಹಿನ್ನೆಲೆ' ಎಂಬ ವಿಷಯದಲ್ಲಿ ಹಂಪಿ, ಕನ್ನಡ ವಿಶ್ವವಿದ್ಯಾನಿಲಯದ ದ್ರಾವಿಡ ಅಧ್ಯಯನ ವಿಭಾಗದ ಪೆÇ್ರ. ಮಾಧವ ಪೆರಾಜೆ ಹಾಗೂ 'ಮಲಯಾಳ ತೋಟ್ಟಂ ಹಾಗೂ ವಡಕ್ಕನ್ ಪಾಟ್ಟುಗಳ ತಾತ್ವಿಕ ಗ್ರಹೀತಗಳು' ಎಂಬ ವಿಷಯದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ, ಗಿಳಿವಿಂಡು' ಇದರ ಆಡಳಿತಾಧಿಕಾರಿ ಡಾ. ಕೆ. ಕಮಲಾಕ್ಷ ಮಾತನಾಡಲಿದ್ದಾರೆ. ಮಧ್ಯಾಹ್ನ 'ಜನಪದ ಕುಣಿತಗಳು-ತಾತ್ವಿಕತೆ ಮತ್ತು ಆನ್ವಯಿಕತೆ' ಎಂಬ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್. ವಿ. ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪೆÇ್ರ. ಅಭಯ ಕುಮಾರ್ ಕೆ. ಮಾತನಾಡುವರು. ಸಂಜೆ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪೆÇ್ರ. ಅಭಯ್ ಕುಮಾರ ಸಮಾರೋಪ ಭಾಷಣ ಮಾಡುವರು. ಪ್ರಬಂಧ ಮಂಡನೆಗೆ ಪೂರಕವಾಗಿ ಪಾಡ್ದನ ಗಾಯನ, ಕವಿತಾ ಗಾಯನ, ಯಕ್ಷಗಾನ ಭಾಗವತಿಕೆ ಮತ್ತು ಜನಪದ ದುಡಿಕಣಿತ ಇತ್ಯಾದಿಗಳು ನಡೆಯಲಿವೆ.