ಕಾಸರಗೋಡು: ಜಿಲ್ಲಾ ಉದ್ದಿಮೆ ಕೇಂದ್ರ ಮುಖಾಂತರ ಜಾರಿಗೊಳಿಸುವ ಪ್ರಧಾನ ಮಂತ್ರಿ ನೌಕರಿ ದಾಯಕ ಯೋಜನೆಗೆ ಉತ್ಪಾದನೆ-ಸೇವಾ ವಲಯಗಳಲ್ಲಿ ನೂತನ ಉದ್ದಿಮೆ ಘಟಕನ್ನುಆರಂಭಿಸಲು ಆಸಕ್ತರಾದಮಂದಿ ಯಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಸರಗೋಡು,ಹೊಸದುರ್ಗ ಉಪಜಿಲ್ಲಾ ಉದ್ದಿಮೆ ಕಚೇರಿಗಳಲ್ಲಿ ಯಾ ವೆಬ್‍ಸೈಟ್ ಮೂಲಕ ಅರ್ಜಿ ಫಾರಂ ಲಭ್ಯವಿದ್ದು, ಈ ಬಗ್ಗೆ ಮಾಹಿತಿಗಾಗಿ ದೂರವಾಣಿಸಂಖ್ಯೆ:04994255749. ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಹೋಮ್‍ಶಾಪ್-ತರಬೇತಿ ಕಾರ್ಯಕ್ರಮ:
ಹೋಮ್ ಶಾಪ್ ಸೌಲಭ್ಯ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು, ಮಂಜೇಶ್ವರ, ಕಾರಡ್ಕ ಬ್ಲೋಕ್ ಗಳಲ್ಲಿ ನೂತನವಾಗಿ ಆಯ್ಕೆಗೊಂಡಿರುವ ಸೇಲ್ಸ್ ಎಕ್ಸಿಕ್ಯೂಟಿವ್ ಗಳಿಗೆ ಡಿ.9ರಿಂದ 13 ವರೆಗೆ ಒಂದು ದಿನದ ತರಬೇತಿ ನೀಡಲಾಗುವುದು.
ಕಾಸರಗೋಡನ್ನು ಸಪೂರ್ಣಹೋಂಶಾಪ್ ಜಿಲ್ಲೆಯಾಗಿ ಘೋಷಿಸುವ ಯೋಜನೆಯ ಅಂಗವಾಗಿ ಪರೀಕ್ಷಣಾರ್ಥ ಹೋಮ್ ಶಾಪ್ ಸೌಲಭ್ಯ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮಳೆಯರು, ಆಶ್ರಯ, ವಿಶೇಷ ಚೇತನರು-ಟಿ.ಜಿ., ಲೈಫ್, ಪಿ.ಎಂ.ಎ.ವೈ ಫಲಾನುಭವಿಗಳು, ಸ್ನೇಹಿತ ಕಾಲಿಂಗ್ ಬೆಲ್-ಫಲಾನುಭವಿಗಳು ಮೊದಲಾದವರಿಗೆ ಆದ್ಯತೆ ಕಲ್ಪಿಸಲಾಗಿದೆ.ತರಬೇತಿ ಆಯಾ ಸಿ.ಡಿ.ಎಸ್.ಗಳಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.