ಕಾಸರಗೋಡು: ಪೌರತ್ವ ಕಾನೂನು ವಿರುದ್ಧದ ಹೋರಾಟದ ಮರೆಯಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ಮತೀಯ ಉಗ್ರಗಾಮಿಗಳಿಗೆ ಪೆÇ್ರೀತ್ಸಾಹ ನೀಡುತ್ತಿದೆಯೆಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ.ಪದ್ಮನಾಭನ್ ಆರೋಪಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಾರ್ಯಕರ್ತರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಪಿಎಂ ಹಾಗು ಕಾಂಗ್ರೆಸ್‍ಗೆ ನಷ್ಟಗೊಳ್ಳಲು ಇನ್ನೇನೂ ಇಲ್ಲ. ಅವರಿಗೆ ಏನು ಸಿಕ್ಕಿದರೂ ಅದು ಲಾಭವೇ ಎಂದು ಅವರು ಅಭಿಪ್ರಾಯಪಟ್ಟರು. ಧಾರ್ಮಿಕ ವಿಶ್ವಾಸಿಗಳು ಇವರ ತಂತ್ರದಲ್ಲಿ ಸಿಲುಕಿದರೆ ಹಲವು ಕಾಲದಿಂದ ಭಾರತ ಅನುಸರಿಸಿಕೊಂಡು ಬರುತ್ತಿರುವ ಸೌಹಾರ್ದತೆಗೆ ಭಂಗವುಂಟಾಗಲಿದೆಯೆಂದೂ ಅದರಿಂದ ದೇಶಕ್ಕೆ ಭಾರೀ ನಷ್ಟವುಂಟು ಮಾಡಲಿದೆಯೆಂದೂ ಅವರು ಹೇಳಿದರು. ಪ್ರತಿಕ್ರಿಯೆಯ ನೇತೃತ್ವವನ್ನು ಧಾರ್ಮಿಕ ಮುಖಂಡರು ವಹಿಸಿಕೊಂಡಿರುವುದನ್ನು ಅವರು ಸ್ವಾಗತಿಸಿದರು.
ದೇಶ ಪ್ರೇಮದ ಹೆಸರಿನಲ್ಲಿ ಚಳವಳಿಗಿಳಿದಿರುವ ಎಡ-ಐಕ್ಯರಂಗಗಳು ವ್ಯಾಪಕವಾಗಿ ಸಾರ್ವಜನಿಕ ಸೊತ್ತುಗಳನ್ನು ನಾಶಗೊಳಿಸುತ್ತಿವೆ. ಸಾರ್ವಜನಿಕ ಸೊತ್ತುಗಳನ್ನು ನಾಶಗೊಳಿಸುವುದೇ ಈ ಒಕ್ಕೂಟಗಳ ದೇಶಪ್ರೇಮವೇ ಎಂದು ಅವರು ಪ್ರಶ್ನಿಸಿದರು. ಪಿಣರಾಯಿ ಹಾಗು ಚೆನ್ನಿತ್ತಲ ಒಂದೇ ಗರಿಯ ಹಕ್ಕಿಗಳಾಗಿದ್ದಾರೆಂದೂ ಪದ್ಮನಾಭನ್ ಅಪಹಾಸ್ಯಗೈದರು.
ಸಿ.ಪಿ.ಎಂ. ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಆಲಂಗಿಸಿಕೊಳ್ಳುತ್ತಿರುವುದು ಅಲ್ಪಸಂಖ್ಯಾತರ ಮತಗಳನ್ನು ಸುಲಭದಲ್ಲಿ ಪಡೆಯಬಹುದೆಂಬ ಉದ್ದೇಶದಿಂದ ಮಾತ್ರವಾಗಿದೆ. ಈ ಬಗ್ಗೆ ಅಲ್ಪಸಂಖ್ಯಾತರು ತಿಳಿದಿರಬೇಕೆಂದೂ ಅವರು ಹೇಳಿದರು.
ಭಾರತದ ಮುಸ್ಲಿಮರು ಈ ದೇಶದ ಮಕ್ಕಳಾಗಿದ್ದಾರೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪುನುರುಚ್ಛರಿಸುತ್ತಿದ್ದು, ಎಲ್ಲರ ಮೇಲೂ ನಂಬಿಕೆಯಿರಿಸಿ ಸರ್ವರ ಅಭಿವೃದ್ಧಿ, ಕ್ಷೇಮಕ್ಕಾಗಿ ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆಯೆಂದು ಅವರು ಹೇಳಿದರು. ಸಿಪಿಎಂ ಹಾಗು ಕಾಂಗ್ರೆಸ್ ಇಲ್ಲದ ಬೆಕ್ಕಿಗಾಗಿ ಕತ್ತಲಲ್ಲಿ ಹುಡುಕುತ್ತಿರುವುದಾಗಿ ಅವರು ಅಪಹಾಸ್ಯಗೈದರು. ಇವರ ಈ ಆಟ ಮುಂದುವರಿಸಲು ಜೀವ ಹೋದರೂ ಕೇರಳದ ಪ್ರಜಾಪ್ರಭುತ್ವ ತಿಳಿವಳಿಕೆಯಿಂದ ಸಮಾಜ ಬಿಡಲಾರದೆಂದು ಅವರು ಹೇಳಿದರು. ಮತೀಯ ಅರಿವಿನ ಬದಲಾಗಿ ಮತೀಯ ಮರಳು ಹುಟ್ಟಿಸಲು ಸಿಪಿಎಂ ಮತ್ತು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯದರ್ಶಿ ವಿ.ಕೆ.ಸಜೀವನ್, ಪಿ.ಸುರೇಶ್ ಕುಮಾರ್ ಶೆಟ್ಟಿ, ವಿ.ಬಾಲಕೃಷ್ಣ ಶೆಟ್ಟಿ, ಎ.ವೇಲಾಯುಧನ್, ಪಿ.ರಮೇಶ್, ಎಂ.ಬಲ್‍ರಾಜ್ ಮಾತನಾಡಿದರು.