ಕಾಸರಗೋಡು: ಅಂತಾರಾಷ್ಟ್ರೀಯ ಬಾಲ ಹಕ್ಕು ದಿನಾಚರಣೆ ಅಂಗವಾಗಿ ಜಿಲ್ಲಾ ಶಿಶು ಸಂರಕ್ಷಣೆ ಯೂನಿಟ್ ಮತ್ತು ಪರಪ್ಪ ಸರಕಾರಿ ಹೈಯರ್ ಸೆಕೆಂಡರ ಶಾಲೆ ವತಿಯಿಂದ ಫೆÇೀಕ್ಸೋ ಕಾಯಿದೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಪರಪ್ಪ ಶಾಲೆಯಲ್ಲಿ ಜರುಗಿತು.
ವೆಳ್ಳರಿಕುಂಡ್ ಠಾಣೆಯ ಎಸ್.ಐ. ಎನ್.ಒ.ಸಿಬಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಕೊಡಕ್ಕಾಲ್ ದಾಮೋದರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಸಿ.ಬಿಂದು ಮುಖ್ಯ ಅತಿಥಿಯಾಗಿದ್ದರು. ಪೆÇ್ರಟೆಕ್ಷನ್ ಆಫೀಸರ್ ಕೆ.ಶುಹೈಬ್, ಕರಿಂದಳ ವಾರ್ಡ್ ಸದಸ್ಯೆ ಕಾತ್ರ್ಯಾಯಿನಿ, ಎಸ್.ಎಂ.ಸಿ. ಅಧ್ಯಕ್ಷ ಸಿ.ನಾರಾಯಣನ್. ಮಾತೃ ಸಂಘ ಪ್ರತಿನಿ„ ಸ್ವರ್ಣಲತಾ, ಸೀನಿಯರ್ ಅಸಿಸ್ಟೆಂಟ್ ಕೋಮಳವಳ್ಳಿ ಉಪಸ್ಥಿತರಿದ್ದರು.
ಡಿ.ಸಿ.ಪಿ.ಯು. ಪೆÇ್ರ ಟೆಕ್ಷನ್ ಆಫೀಸರ್ ಎ.ಜಿ.ಫೈಝಲ್ ತರಗತಿ ನಡೆಸಿದರು. ನಂತರ ಚಿತ್ರರಚನೆ ಸ್ಪರ್ಧೆ ಜರುಗಿತು. ಟಿ.ಕೆ.ಸಬೀನ್, ಸಿ.ಬಿಜು, ಸುನಿತಾ ಬಿ. ವಿದ್ಯಾ ಮೊದಲಾದವರು ನೇತೃತ್ವ ವಹಿಸಿದ್ದರು. ಮುಖ್ಯಶಿಕ್ಷಕ ಇ.ಕೆ.ಅಬ್ದುಲ್ ಮಜೀದ್ ಸ್ವಾಗತಿಸಿದರು. ಸ್ಟಾಫ್ ಸೆಕ್ರೆಟರಿ ಕೆ.ಪಿ.ರೆಜಿತಾ ವಂದಿಸಿದರು.