ಗೋಪಾಲ್ ಗಂಜ್: ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಅಶ್ಲೀಲ ವೆಬ್ ಸೈಟ್ ಗಳು ಕಾರಣ ಎಂದು ಆರೋಪಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಎಲ್ಲಾ ಪೆÇೀರ್ನ್ ವೆಬ್ ಸೈಟ್ ಗಳನ್ನು ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಹೈದರಾಬಾದ್ ಅತ್ಯಾಚಾರ ಹಾಗೂ ತಮ್ಮ ರಾಜ್ಯದಲ್ಲಿನ ಬಕ್ಸರ್ ಮತ್ತು ಸಮಸ್ತಿಪುರ್ ಜಿಲ್ಲೆಯಲ್ಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ಬಿಹಾರ ಸಿಎಂ, ಅಶ್ಲೀಲ ವೆಬ್ ಸೈಟ್ ಗಳನ್ನು ಸಂಪೂರ್ಣ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಹೈದರಾಬಾದ್, ಬಿಹಾರ ಹಾಗೂ ಉತ್ತರ ಪ್ರದೇಶ ಸೇರಿದಂತೆ ದೇಶದಲ್ಲಿ ಇತ್ತೀಚಿಗೆ ಹೀನ ಕೃತ್ಯಗಳು ಹೆಚ್ಚುತ್ತಿದೆ. ಇದಕ್ಕೆ ಸಾಮಾಜಿಕ ಮಾಧ್ಯಮ ಮತ್ತು ಅಶ್ಲೀಲ ವೆಬ್ ಸೈಟ್ ಗಳು ಕಾರಣ. ತಂತ್ರಜ್ಞಾನದಿಂದ ಸಾಕಷ್ಟು ಪ್ರಯೋಜನ ಇದೆ. ಆದರೆ ಅಷ್ಟೇ ದುಷ್ಪರಿಣಾಮಗಳು ಇದ್ದು, ಅದರ ಬಗ್ಗೆ ನಾನು ಸದಾ ಕಳವಳ ವ್ಯಕ್ತಪಡಿಸುತ್ತೇನೆ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.