ಕಾಸರಗೋಡು: ಯಾವುದೇ ಮುನ್ಸೂಚನಾ ನೋಟೀಸ್ ನೀಡದೆ ಮತೀಯ ಭಯೋತ್ಪಾದಕರು ಆಹ್ವಾನ ನೀಡಿದ ಹರತಾಳಕ್ಕೆ ಪೆÇೀಲೀಸ್ ಬೆಂಬಲ ನೀಡುತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯಾವಾದಿ ಕೆ. ಶ್ರೀಕಾಂತ್ ಆರೋಪಿಸಿದ್ದಾರೆ.
ಹರತಾಳವು ನಿಯಮ ವಿರುದ್ಧವಾಗಿದೆ ಎಂದೂ ಇದಕ್ಕೆ ಬೆಂಬಲ ಪ್ರಕಟಿಸಿದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂಬುವುದಾಗಿ ಪೆÇೀಲೀಸ್ ತಿಳಿಸಿದ್ದರೂ, ನಿಯಮಪಾಲಕರ ಕಣ್ಣಮುಂದೆಯೇ ಮತೀಯ ಉಗ್ರವಾದಿಗಳು ವ್ಯಾಪಾರಿಗಳಿಗೆ ಹಾಗೂ ವಾಹನ ಮಾಲೀಕರಿಗೆ ಕರ ಪತ್ರಗಳನ್ನು ವಿತರಿಸಿ ಬೆದರಿಕ್ಕೆಯೊಡ್ಡುತ್ತಿದ್ದಾರೆಂದು ಶ್ರೀಕಾಂತ್ ತಿಳಿಸಿದರು.
ಆರಂಭದಲ್ಲಿ ಇದು ಅನಾಥ ಹರತಾಳವಾಗಿದ್ದರೂ ಕ್ರಮೇಣ ಮತೀಯತೀವ್ರವಾದ ಸಂಘಟನೆಗಳು ಪ್ರತ್ಯಕ್ಷದಲ್ಲಿ ಮುಂದೆಬಂದಿರುವುದು ವಾಸ್ತವ. ಆದರೆ ಹೈಕೋರ್ಟ್ ನೀಡಿರುವ ಆದೇಶಗಳನ್ನು ಉಲಂಘಿಸಿ ಹರತಾಳಕ್ಕೆ ಆಹ್ವಾನ ನೀಡಿದವರಿಗೆ ಇದೀಗ ಪೆÇೀಲಿಸರು ಕಾವಲು ನೀಡುತ್ತಿದ್ದಾರೆ ಎಂದು ಅವರು ಸೂಚಿಸಿದರು.
ಶಬರಿಮಲೆ ವಿಷಯದ ಸಮಯದಲ್ಲಿ ಭಕ್ತರ ಮೇಲೆ ನಿಯಮ ಪಾಲನೆಯ ಹೆಸರಿನಲ್ಲಿ ಅಕ್ರಮವೆಸಗಿದ ಪೆÇೀಲೀಸರು ಹಾಗೂ ಸಿ.ಪಿ.ಎಂ, ಕಾಂಗ್ರೆಸ್, ಮುಸ್ಲಿಂ ಲೀಗ್ ಪಕ್ಷಗಳು ಇದಕ್ಕೆದುರಾಗಿ ಯಾವುದೇ ಮಾತುಗಳನ್ನಾಡದೆ ಮೌನದಿಂದಲೇ ಹರತಾಳಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತಿದ್ದಾರೆಯೆಂದೂ ಅವರು ಆರೋಪಿಸಿದರು.
ಸೋಶಿಯಲ್ ಮೀಡಿಯಾಗಳಲ್ಲಿ ನಡೆದ ಅಕ್ರಮ ಹರತಾಳದ ಆಹ್ವಾನದ ಕುರಿತು ಶೀಘ್ರವಾಗಿ ತನಿಖೆ ನಡೆಸಿ ಇದರನ್ನು ಹರಡಿಸಿದವರ, ಬೆಂಬಲಸೂಚಿಸಿದವರ ಮೇಲೆ ದೇಶದ್ರೋಹ ಅಪರಾಧ ಎಂಬ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿ ತಕ್ಕ ಶಿಕ್ಷೆಗೊಳಪಡಿಸಬೇಕೆಂದೂ ಹಾಗೂ ಜನರ ಸಂಚಾರ ಸ್ವಾತಂತ್ರ್ಯ ಕ್ಕೆ ಸಂರಕ್ಷಣೆ ನೀಡಲು ಸರಕಾರ ತಯಾರಾಗಬೇಕೆಂದು ಶ್ರೀಕಾಂತ್ ಆಗ್ರಹಿಸಿದ್ದಾರೆ.