HEALTH TIPS

ಡಿಸೆಂಬರ್ ತಿಂಗಳಲ್ಲೂ 1.03 ಲಕ್ಷ ಕೋಟಿ ರೂ. ಜಿಎಸ್ ಟಿ ಸಂಗ್ರಹ

   
          ನವದೆಹಲಿ: ಕೇಂದ್ರ ಸರ್ಕಾರದ ಉತ್ತೇಜನಕಾರಿ ಕ್ರಮಗಳಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದ ಮೊತ್ತ ಎರಡನೇ ಬಾರಿ 1.03 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ.
    ಕಳೆದ ಮೂರು ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ ಮೊತ್ತ 1 ಲಕ್ಷ ಕೋಟಿ ರೂ.ಗಿಂತ ಕೆಳಗಿತ್ತು. ಆದರೆ ಕಳೆದ ನವೆಂಬರ್ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ ಮೊತ್ತ 1.03 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದೀಗ ಡಿಸೆಂಬರ್ ತಿಂಗಳಲ್ಲೂ 1.03 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಡಿಸೆಂಬರ್ 2018ರಲ್ಲಿ 97,278 ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿತ್ತು. 2019ರ ನವೆಂಬರ್?ನಲ್ಲಿ ಜಿಎಸ್ ಟಿ ಸಂಗ್ರಹ ಮೊತ್ತ 1,03,492 ಕೋಟಿ ರೂ.ಗೆ ಏರಿಕೆಯಾಗಿತ್ತು. ಕಳೆದ ತಿಂಗಳು ಒಟ್ಟು 1,03,184 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಹಿದ್ದು, ಇದರಲ್ಲಿ ಸಿಜಿಎಸ್ ಟಿ 19,962 ಕೋಟಿ ರೂ., ಎಸ್ ಜಿಎಸ್ ಟಿ 26,792 ಕೋಟಿ ರೂ., ಐಜಿಎಸ್ ಟಿ 48,099 ಕೋಟಿ ರೂ.(ಆಮದು ಮೇಲಿನ ಸುಂಕ 20,948 ಕೋಟಿ ರೂ. ಸೇರಿ) ಮತ್ತು ಸೆಸ್ 8,331 ಕೋಟಿ ರೂ.( ಆಮದು ಮೇಲಿನ ಸುಂಕ 869 ಕೋಟಿ ರೂ. ಸೇರಿ) ಸಂಗ್ರಹವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
          2017ರ ಜುಲೈನಲ್ಲಿ ಜಿಎಸ್ ಟಿ ಜಾರಿಯಾದಾಗಿನಿಂದ 9ನೇ ಬಾರಿಗೆ ಜಿಎಸ್ ಟಿ ಸಂಗ್ರಹ ಮೊತ್ತ ಒಂದು ಲಕ್ಷ ಕೋಟಿ ರೂ. ದಾಟಿದೆ. ಅಲ್ಲದೆ, ನವೆಂಬರ್ ಮೂರನೇ ಅತಿಹೆಚ್ಚು ಜಿಎಸ್ ಟಿ ಸಂಗ್ರಹ ತಿಂಗಳಾಗಿದೆ. 2019 ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಅತಿ ಹೆಚ್ಚು ಜಿಎಸ್ಟಿ ಸಂಗ್ರಹವಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries