ನವದೆಹಲಿ: ಸೇವಾ ತೆರಿಗೆ ಮತ್ತು ಅಬಕಾರಿ ತೆರಿಗೆಗಳ ಪರಿಹಾರ ಯೋಜನೆ ಸಬ್ ಕಾ ವಿಶ್ವಾಸ್ ಅನ್ನು ಹಣಕಾಸು ಸಚಿವಾಲಯ ಜನವರಿ 15ರವರೆಗೆ ವಿಸ್ತರಿಸಿದೆ.
ಯೋಜನೆಗೆ ತೆರಿಗೆ ಪಾವತಿದಾರರ ಪ್ರತಿಕ್ರಿಯೆ ಆಧರಿಸಿ ಹದಿನೈದು ತಿಂಗಳ ಕಾಲ ಈ ಅವಧಿ ವಿಸ್ತರಿಸಲಾಗಿದೆ. ಇದೇ ಮೊದಲ ಬಾರಿಗೆ ಈ ಯೋಜನೆಯಡಿ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಸಚಿವಾಲಯದ ಅಧಿಕೃತ ಹೇಳಿಕೆ ತಿಳಿಸಿದೆ. ಈ ಯೋಜನೆಯಡಿ ಬರುವ ತೆರಿಗೆದಾರರು ಬಾಕಿ ತೆರಿಗೆಯಾದ 30 ಸಾವಿರದ 627 ಕೋಟಿ ರೂಪಾಯಿಗಳನ್ನು ಜನವರಿ 15ರೊಳಗೆ ಪಾವತಿಸಬೇಕಾಗುತ್ತದೆ.
ಕಳೆದ ಬಾರಿ ಬಜೆಟ್ ಮಂಡನೆ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಬ್ ಕಾ ವಿಶ್ವಾಸ್ ಯೋಜನೆಯನ್ನು ಅನಾವರಣಗೊಳಿಸಿದ್ದರು.