ನವದೆಹಲಿ: 2019 ವರ್ಷ ಮುಕ್ತಾಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, 2020ನ್ನು ಸ್ವಾಗತಿಸಲು ವಿಶ್ವಾದ್ಯಂತ ಜನ ಕಾತರದಿಂದ ಕಾಯುತ್ತಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಜೆಗಳಿಗೆ ಶುಭ ಕೋರಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಶುಭ ಕೋರಿರುವ ಪ್ರಧಾನಿ ಮೋದಿ, 2020ರಲ್ಲೂ ನವ ಭಾರತ ನಿರ್ಮಾಣಕ್ಕೆ 130 ಕೋಟಿ ಜನರ ಪ್ರಜಾ ಚಾಲಿತ ಯತ್ನ ಮುಂದುವರೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಅಂತೆಯೇ 2020 ಹೊಸ ವರ್ಷಾಚರಣೆಗೆ ಸಂಬಂಧಿಸಿದ ವಿಡಿಯೋವನ್ನು ಅಪೆÇ್ಲೀಡ್ ಮಾಡಿದ್ದು, ನಮೋ 2.0 ಸರ್ಕಾರದ ಅಭಿವೃದ್ಧಿಗಳ ಕುರಿತು ಸಣ್ಣ ವಿಡಿಯೋ ಮಾಹಿತಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಕರ್ತಾರ್ ಪುರ ಕಾರಿಡಾರ್ ಯೋಜನೆ, ವಿಧಿ 370ರ ರದ್ಧತಿ, ಸೆಮಿ ಹೈಸ್ಪೀಡ್ ರೈಲು, ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಹಲವು ವಿಚಾರಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಹಿಂದಿನ ಸರ್ಕಾರ ಯಾವುದನ್ನು ಅಸಾಧ್ಯ ಎಂದು ಪರಿಗಣಿಸಿದ್ದವೋ ಅವುಗಳನ್ನು ನಾವು ಸಾಕಾರ ಮಾಡಿದ್ದೇವೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಅಲ್ಲದೆ ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡ ವಾಯುಸೇನೆಯನ್ನು, ಸ್ಯಾಟೆಲೈಟ್ ಮಿಸೈಲ್ ಎ-ಸ್ಯಾಟ್ ಅಭಿವೃದ್ಧಿ ಪಡಿಸಿದ ಇಸ್ರೋ ಮತ್ತು ಡಿಆರ್ ಡಿಒ ಸಂಸ್ಥೆಗಳನ್ನು ಶ್ಲಾಘಿಸಲಾಗಿದೆ. ಅಲ್ಲದೆ ಹೌಡಿ ಮೋದಿ ಕಾರ್ಯಕ್ರಮದ ಕುರಿತು ವಿಡಿಯೋದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
7,070 people are talking about this