HEALTH TIPS

2020ರಲ್ಲಿ ಭಾರತದ ಮೂರನೇ ಚಂದ್ರಯಾನ: ಕೇಂದ್ರ ಸಚಿವ ಜಿತೇಂದರ್ ಸಿಂಗ್

   
       ನವದೆಹಲಿ: 2020ರಲ್ಲಿ ಭಾರತವು ಮೂರನೇ ಚಂದ್ರಯಾನವನ್ನು ಆರಂಭಿಸಲಿದೆ ಎಂದು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
           ಸಂಸತ್ತ್ ಕಲಾಪದಲ್ಲಿ ಈ ಕುರಿತಂತೆ ನಿನ್ನೆ ಲಿಖಿತ ಉತ್ತರ ನೀಡಿದ ಸಚಿವ ಜಿತೇಂದ್ರ ಸಿಂಗ್ ಅವರು, 2020ರಲ್ಲಿ ಭಾರತವು ಮೂರನೇ ಚಂದ್ರಯಾನವನ್ನು ಆರಂಭಿಸಲಿದೆ. ಚಂದ್ರಯಾನ- 3 ರಲ್ಲಿ ಲ್ಯಾಂಡರ್ ಮತ್ತು ರೋವರ್?ಗಳು ಈ ಬಾರಿ ಮೃದುವಾಗಿ ಚಂದ್ರನ ಮೇಲೆ ಇಳಿಯಲಿವೆ ಎಂದು ಹೇಳಿದರು.
      'ಚಂದ್ರಯಾನ -2ರಲ್ಲಿ ನಾವು ಸೋತಿಲ್ಲ. ಅದರಿಂದ ನಾವು ತುಂಬ ಕಲಿತಿದ್ದೇವೆ. ಪ್ರಪಂಚದಲ್ಲಿ ಯಾವ ದೇಶವೂ ಮೊದಲ ಬಾರಿಗೆ ಚಂದ್ರನ ಮೇಲೆ ಇಳಿದಿಲ್ಲ. ಅಮೆರಿಕ ದೇಶ ಕೂಡ ಸಾಕಷ್ಟು ಬಾರಿ ಪ್ರಯತ್ನಿಸಿದೆ. ಆದರೆ ನಮಗೆ ಅಷ್ಟು ಪ್ರಯತ್ನಗಳು ಬೇಕಾಗಿಲ್ಲ.  ಚಂದ್ರಯಾನ 2 ಭಾರತದ ಮೊದಲ ಪ್ರಯತ್ನವಾಗಿತ್ತು. ಚಂದ್ರನನ್ನು ತಲುಪಲು ಕೇವಲ 2.1 ಕಿಲೋ ಮೀಟರ್? ಅಂತರದಲ್ಲಿ ಕೈ ತಪ್ಪಿತು. ಸೆಪ್ಟೆಂಬರ್? 7ರಂದು ನಿಗದಿತ ಸ್ಥಳದಿಂದ 500 ಮೀಟರ್?ಗಳ ಅಂತರದಲ್ಲಿ ವಿಕ್ರಮ್? ಲ್ಯಾಂಡರ್? ಕೈ ತಪ್ಪಿತು. ವಿಕ್ರಮ್  ಲ್ಯಾಂಡರ್  ಹಾರ್ಡ್  ಲ್ಯಾಂಡ್  ಆಗಿದ್ದನ್ನು ಅಧಿಕಾರಿಗಳ ದೃಢಪಡಿಸಿದ್ದಾರೆ ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.
   ಜೊತೆಗೆ 'ನಾವು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿದರೆ ವಿಶ್ವದ ನಾಲ್ಕನೇ ದೇಶವಾಗಿ ಹೊರ ಹೊಮ್ಮಲಿದ್ದೇವೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಯುಎಸ್?ಎಸ್?ಆರ್? ಮತ್ತು ಚೀನಾಗಳು ಈಗಾಗಲೇ ಇಳಿದ ದೇಶಗಳಾಗಿವೆ. ಈ ಬಾರಿ ಲ್ಯಾಂಡರ್?ನ ವೇಗವನ್ನು ಕಡಿಮೆಗೊಳಿಸಲಾಗುವುದು. ಲ್ಯಾಂಡರ್?ನ ವೇಗವನ್ನು 1683 ಮೋಟರ್?ಶಿಪ್? ವೇಗದಿಂದ 146 ಮೋಟರ್ ಶಿಪ್  ವೇಗಕ್ಕೆ ತಗ್ಗಿಸಲಾಗುವುದು ಎಂದು ಸಚಿವ ಜಿತೇಂದರ್ ಸಿಂಗ್ ಸಂಸತ್ ಗೆ ಮಾಹಿತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries