ಕಾಸರಗೋಡು: ನೂತನ ನಿರೀಕ್ಷೆಗಳೊಂದಿಗೆ ಆಗಮಿಸಿರುವ ನೂತನ ವರ್ಷವನ್ನು ಸ್ವಾಗತಿಸುವ ನಿಟ್ಟಿನಲ್ಲಿ ಕಾಸರಗೋಡಿನ ಜನತೆ ಒಂದೆಡೆ ಸೇರಿ ಹರ್ಷಾಚರಣೆ ನಡೆಸಿದರು. "ಒಪ್ಪರಂ-2020" ಎಂಬ ಹೆಸರಲ್ಲಿ ಜಿಲ್ಲಾಡಳಿತೆ ಮತ್ತು ಥಿಯಾಟ್ರಕ್ಸ್ ಸೊಸೈಟಿ ಜಂಟಿ ವತಿಯಿಂದ ಪಿಲಿಕುಂಜೆಯಲ್ಲಿರುವ ನಗರಸಭೆಯ ಮುಕ್ತಸಭಾಂಗಣ ಸಂಧ್ಯಾರಾಗಂ ನಲ್ಲಿ ಹೊಸವರ್ಷಾಚರಣೆ ಜರುಗಿತು.
ಸಂಜೆ 7 ಗಂಟೆಯಿಂದ ಕಲೆಗಳ ಮಹಾಪ್ರವಾಹವೇ ಇಲ್ಲಿ ಜರುಗಿತ್ತು. ಕಣ್ಣೂರು ಜಿಲ್ಲಾಧಿಕಾರಿ ಟಿ.ವಿ.ಸುಭಾಷ್ ಅವರು ಆಲಾಪಿಸಿದ್ದ ಗಝಲ್ ಭಾರೀ ಮನ್ನಣೆಗೆ ಪಾತ್ರವಾಗಿತ್ತು. ಶಾಲಾ ಕಲೋತ್ಸವಗಳಲ್ಲಿ ಅತ್ಯುತ್ತಮ ಪ್ರದರ್ಶಗಳನ್ನು ನೀಡಿದ ವಿದ್ಯಾರ್ಥಿಗಳಿಂದ ವಿವಿಧ ಕಲಾಪ್ರಸ್ತುತಿಗಳು ನಡೆದುವು.
ಎಲ್ಲದಕ್ಕೂ ವಿಭಿನ್ನವಾಗಿ ಕೇರಳ ತುಳು ಅಕಾಡೆಮಿ ವತಿಯಿಂದ ಜರುಗಿದ ತೌಳವ ಸಂಸ್ಕøತಿಯನ್ನು ಬಿಂಬಿಸುವ ಕಲಾಪ್ರಕಾರಗಳು ಗಮನ ಸೆಳೆದುವು. ಕಂಗಿಲ ನೃತ್ಯ, ಪಾಡ್ದನಗಳು ಮೆರುಗನನು ಹೆಚ್ಚಿಸಿದುವು. ಉಳಿದಂತೆ ಫೆÇೀಕ್ ಫ್ಯೂಷನ್ ಡ್ಯಾನ್ಸ್, ಪುರುಷರ ಒಪ್ಪನ, ರಿಥಂ ಬೀಟ್ಸ್ ಕ್ಯಾಲಿಕಟ್ ವತಿಯಿಂದ ನಡೆದ ಸಂಗಿತ ರಸಮಂಜರಿ ಉತ್ತಮವಾಗಿದ್ದುವು. ನಂತರ ಹಳೆವರ್ಷದ ಪ್ರಕೃತಿ ದಹಿಸಿ ಹೊಸವರ್ಷಕ್ಕೆ ಸ್ವಾಗತ ಕೋರಲಾಯಿತು.
ಕಣ್ಣೂರು ಜಿಲ್ಲಾಧಿಕಾರಿ ಟಿ.ವಿ.ಸುಭಾಷ್ ಸಮಾರಂಭವನ್ನು ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಹುಸೂರು ಶಿರ್ಸತೇದಾರ್ ಕೆ.ನಾರಾಯಣನ್, ಜಿಲ್ಲಾ ಪಂಚಾಯತ್ ಸದಸ್ಯ ಷಾನವಾಝ್ ಪಾದೂರು, ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಜಿಲ್ಲಾ ಕ್ರೀಡಾಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ಕಾಸರಗೋಡು ಥಿಯಟ್ರಿಕ್ಸ್ ಸೊಸೈಟಿ ಕಾರ್ಯದರ್ಶಿ ಟಿ.ಎ.ಶಾಫಿ, ಕೋಶಾಧಿಕಾರಿ ಟಿ.ವಿ.ಗಂಗಾಧರನ್, ಕುವೆಂಪು ವಿವಿಯ ನಿರ್ದೇಶಕ ಎನ್.ಎಂ.ತಲ್ವಾರ್, ಝುಬಿನ್ ಜೋಸ್, ಕೆ.ಎಸ್.ಗೋಪಾಲಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.