ಕುಂಬಳೆ: ರಾಷ್ಟ್ರೀಯ ಕನ್ನಡ ಪರಿಷತ್ತು ಆಶ್ರಯದಲ್ಲಿ ಏಪ್ರಿಲ್ 10ರಿಂದ 12ರ ತನಕ ಕುಂಬಳೆ ಸಮೀಪದ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಪರಿಸರದಲ್ಲಿ ನಡೆಯಲಿರುವ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಲಯದ ಉದ್ಘಾಟನೆಯು ಫೆ.2ರಂದು ಬೆಳಗ್ಗೆ 10ಕ್ಕೆ ಕುಂಬಳೆ ಸಿಂಡಿಕೇಟ್ ಬ್ಯಾಂಕ್ ಮಹಡಿಯ ಮಾಧವ ಪೈ ಹಾಲ್‍ನಲ್ಲಿ ನಡೆಯಲಿದೆ.
ಕಾರ್ಯಕ್ರಮವು ತಂತ್ರಿವರ್ಯ ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯ, ಕುಂಬಳೆ ಸೈಂಟ್ ಮೋನಿಕಾ ಚರ್ಚ್ ಧರ್ಮಗುರು ಫಾ. ಅನಿಲ್ ಡಿ. ಸಿಲ್ವ, ಸೈಫುಲ್ಲ ಯು ಕೆ. ತಂಙಳ್ ದಿವ್ಯ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ. ಕುಂಬಳೆ ಗ್ರಾಪಂ ಅಧ್ಯಕ್ಷ ಪುಂqರೀಕಾಕ್ಷ ಕೆ.ಎಲ್., ಕಾಸರಗೋಡು ಜಿಲ್ಲಾ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಅನಂತಪುರ ಕ್ಷೇತ್ರದ ಆಡಳಿತ ಟ್ರಸ್ಟಿ ಮಹಾಲಿಂಗೇಶ್ವರ ಭಟ್, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕ ಅಧ್ಯಕ್ಷ ಎಸ್.ವಿ.ಭಟ್, ಅಖಿಲ ಕರ್ನಾಟಕ ಜಾನಪದ ಪರಿಷತ್ತು ಒಕ್ಕೂಟದ ಅಧ್ಯಕ್ಷ ಜೋಗಿಲಾಲ್ ಸಿದ್ಧರಾಜು, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್, ಕರ್ನಾಟಕ ರಕ್ಷಣಾ ವೇದಿಕೆಯ ದಕ್ಷಿಣ ಕನ್ನಡ ಸಮಿತಿ ಅಧ್ಯಕ್ಷ ಅನಿಲ್‍ದಾಸ್ ಮಂಗಳೂರು, ಸಾಮಾಜಿಕ ಮುಂದಾಳು ಗೋಪಾಲಕೃಷ್ಣ ಶೆಟ್ಟಿ ಅರಿಬೈಲು, ಪಮ್ಮಿ ಕೊಡಿಯಾಲ್‍ಬೈಲು, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಯೂನಿಟ್ ಅಧ್ಯಕ್ಷ ವಿಕ್ರಮ್ ಪೈ, ನಿವೃತ್ತ ಬ್ಯಾಂಕ್ ಪ್ರಬಂಧಕ ನಾರಾಯಣ ಪೂಜಾರಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.