HEALTH TIPS

ಮುಂದಿನ 5 ವರ್ಷಗಳಲ್ಲಿ 102 ಲಕ್ಷ ಕೋಟಿ ಮೂಲಸೌಕರ್ಯ ಯೋಜನೆ ಜಾರಿ: ನಿರ್ಮಲಾ ಸೀತಾರಾಮನ್

 
      ನವದೆಹಲಿ: ಮೂಲಸೌಕರ್ಯ ಕ್ಷೇತ್ರದಲ್ಲಿ ಸರ್ಕಾರದ ಖರ್ಚು ಹೆಚ್ಚಳದ ಭಾಗವಾಗಿ ಮುಂದಿನ ಐದು ವರ್ಷಗಳಲ್ಲಿ ಜಾರಿಗೆ ಬರುವಂತೆ  102 ಲಕ್ಷ ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಘೋಷಿಸಿದ್ದಾರೆ.
      ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ 100 ಲಕ್ಷ ಕೋಟಿ ರೂ. ಮೂಲಸೌಕರ್ಯಕ್ಕಾಗಿ ಹೂಡಿಕೆ ಮಾಡುವ ಬಗ್ಗೆ ಮಾತನಾಡಿದ್ದಾರೆ.ತರುವಾಯ, ನಾಲ್ಕು ತಿಂಗಳ ಅಲ್ಪಾವಧಿಯಲ್ಲಿ 70 ಮಧ್ಯಸ್ಥಗಾರರ ಸಮಾಲೋಚನೆ ನಡೆದಿದ್ದು 02 ಲಕ್ಷ ಕೋಟಿ ರೂ. ಯೋಜನೆಗಳನ್ನು ಗುರುತಿಸಲಾಗಿದೆ ಎಂದರು. ಅಲ್ಲದೆ ಇದಕ್ಕೆ ಇನ್ನೂ  3 ಲಕ್ಷ ಕೋಟಿ ರೂ. ಯೋಜನೆಗಳನ್ನು ಸೇರಿಸುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದರು. ಈ ಯೋಜನೆಗಳು ಕಳೆದ ಆರು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು ಖರ್ಚು ಮಾಡಿದ 51 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನದಾಗಿದೆ, ಹೊಸ ಯೋಜನೆಗಳು ಸೇರಿಸುವುದರಿಂದ ಕೇಂದ್ರ ಮತ್ತು ರಾಜ್ಯಗಳು ತಲಾ 39 ಶೇಕಡಾ ಯೋಜನೆಗಳನ್ನು ಒಳಗೊಂಡಿರುತ್ತವೆ ಮತ್ತು ಉಳಿದವು ಶೇಕಡಾ 22 ರಷ್ಟು ಖಾಸಗಿ ವಲಯಕ್ಕೆ ಸೇರಿರಲಿದೆ ಎಂದರು ಸಚಿವೆ ವಿವರಿಸಿದ್ದಾರೆ.
       ವಿದ್ಯುತ್, ರೈಲ್ವೆ, ನಗರ ನೀರಾವರಿ, ಮೊಬಿಲಿಟಿ , ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಯೋಜನೆಗಳನ್ನು ಗುರುತಿಸಲಾಗಿದೆ.ಸುಮಾರು 25 ಲಕ್ಷ ಕೋಟಿ ಇಂಧನ ಯೋಜನೆಗಳನ್ನು ಪೂರೈಸಲಾಗುತ್ತಿದೆ. ರಸ್ತೆಗಳಲ್ಲಿ ಇನ್ನೂ 20 ಲಕ್ಷ ಕೋಟಿ ರೂ. ಮತ್ತು ಸುಮಾರು 14 ಲಕ್ಷ ಕೋಟಿ ರೈಲ್ವೆ ಯೋಜನೆಗಳು ಸಾಲಾಗಿ ನಿಂತಿವೆ. ನವೀಕರಿಸಬಹುದಾದ ವಲಯ, ರೈಲ್ವೆ, ನಗರಾಭಿವೃದ್ಧಿ, ನೀರಾವರಿ, ಮೊಬಿಲಿಟಿ, ಶಿಕ್ಷಣ, ಆರೋಗ್ಯ, ನೀರು ಮತ್ತು ಡಿಜಿಟಲ್ ಸೇರಿದಂತೆ ಹಲವು ವಲಯಗಳಲ್ಲಿ ಹೊಸ ಯೋಜನೆಗಳು ಬರಲಿದೆ.ಈ ಕ್ಷೇತ್ರಗಳು ರಾಷ್ಟ್ರೀಯ ಮೂಲಸೌಕರ್ಯ ದ ಕ್ಷೇತ್ರದಡಿ ಬರಲಿದ್ದು ಮಂಗಳವಾರ ಘೋಷಣೆಯಾದ  ಹೂಡಿಕೆಯ ಬಹುಭಾಗವನ್ನು ರೂಪಿಸಲಿವೆ ಎಂದು ಸೀತಾರಾಮನ್ ಹೇಳಿದರು.
     2025 ರ ವೇಳೆಗೆ ಭಾರತವನ್ನು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು 102 ಲಕ್ಷ ಕೋಟಿ ರೂ.ಗಳ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಗಳು ಸಹಾಯ ಮಾಡುತ್ತವೆ ಎಂದು ಹಣಕಾಸು ಸಚಿವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries