ಬದಿಯಡ್ಕ: ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಕೆಡೆಂಜಿ 6ನೇ ವಾರ್ಡು ಮಟ್ಟದ ನೇತೃತ್ವದಲ್ಲಿ ವಳಮಲೆ ತರವಾಡಿನಲ್ಲಿ ಮಂಗಳವಾರ ಆರೋಗ್ಯ ಶಿಬಿರ ನಡೆಯಿತು. ವಾರ್ಡು ಸದಸ್ಯ ವಿಶ್ವನಾಥ ಪ್ರಭು ಕರಿಂಬಿಲ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಓರ್ವ ವ್ಯಕ್ತಿಯ ಬದುಕಿಗೆ ಆಹಾರವು ಎಷ್ಟುಮುಖ್ಯವೋ ಅಷ್ಟೇ ಮುಖ್ಯವಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಪರಿಸರದ ಕುರಿತು ಕಾಳಜಿ, ಇಂತಹ ಶಿಬಿರಗಳ ಮೂಲಕ ಸೂಕ್ತವಾದ ತಿಳುವಳಿಕೆಯನ್ನು ಪಡೆದುಕೊಳ್ಳಬೇಕು. ಆರೋಗ್ಯವಂತ ವ್ಯಕ್ತಿಯು ಸಮಾಜದ ಆಸ್ತಿ ಎಂದು ಅವರು ತಿಳಿಸಿದರು.
ಆರೋಗ್ಯ ಇಲಾಖೆಯ ಅಧಿಕಾರಿ ವಿನೋದ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸಹಾಯಕ ಅಧಿಕಾರಿಗಳಾದ ಬಷೀರ್, ಶಕೀರ್, ಜ್ಯೋತಿ, ಚಿತ್ರಕಲಾ ಹಾಗೂ ತರವಾಡಿನ ತಿಮ್ಮಪ್ಪ ರೈ, ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು. ಊರವರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಶಿಬಿರದಲ್ಲಿ ಪಾಲ್ಗೊಂಡವರು ಮಧುಮೇಹ, ಬ್ಲಡ್ ಪ್ರೆಶರ್ ತಪಾಸಣೆ ನಡೆಸಿದರು. ಆಶಾ ಕಾರ್ಯಕರ್ತೆಯರಾದ ಶೋಭಾ, ಹರಿಣಾಕ್ಷಿ ಸಹಕರಿಸಿದರು. . ಬ್ಲೋಕ್ ಪಂಚಾಯಿತಿ ಸದಸ್ಯ ಅವಿನಾಶ್ ರೈ ಪಾಲ್ಗೊಂಡಿದ್ದರು.