HEALTH TIPS

ಸಮರಸ ಸುದ್ದಿಗೆ ರಾಷ್ಟ್ರೀಯ ಪ್ರಶಸ್ತಿಯ ಗರಿಮೆ-ಪ್ರಾದೇಶಿಕ ನವ ಮಾಧ್ಯಮಕ್ಕೆ ಲಭ್ಯವಾದ ಹಿರಿಮೆ- 7 ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನದಲ್ಲಿ ನಾಳೆ ಪ್ರದಾನ


        ಕಾಸರಗೋಡು: ಗಡಿನಾಡು ಕಾಸರಗೋಡಿನ ಭಾಷೆ, ಸಂಸ್ಕøತಿ, ಜನಜೀವನ, ಆಡಳಿತ ಮೊದಲಾದ ಸಾರ್ವಕಾಲಿಕ ವಿಷಯಗಳನ್ನು ಸಮರ್ಥವಾಗಿ ಕಳೆದ ಎರಡು ವರ್ಷಗಳಿಂದ ಜನರಿಗೆ ತಲಪಿಸುವಲ್ಲಿ ನಿಷ್ಪಕ್ಷಪಾತವಾಗಿ ನವಮಾಧ್ಯಮ ರಂಗದಲ್ಲಿ ಯಶಸ್ವಿಯಾಗಿ ಮುಂದುವರಿದು ಮೂರನೇ ವರ್ಷಕ್ಕೆ ಪಾದಾರ್ಪಣೆಗೈಯುವ ಹಂತದಲ್ಲಿ ಪ್ರಶಸ್ತಿಯ ಗರಿಯೆಂದು ಅರಸಿ ಬಂದಿರುವುದು ಓದುಗರು ಸಮರಸದ ಮೇಲಿರಿಸಿರುವ ವಿಶ್ವಾಸದ ಸಂಕೇತ.
      ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ಇದರ ಆಶ್ರಯದಲ್ಲಿ ನಾಳೆ ಹಾಗೂ ಮತ್ತು 31 ರಂದು ಪಾರೆಕಟ್ಟೆಯ `ಕನ್ನಡ ಗ್ರಾಮ'ದಲ್ಲಿ ಹಮ್ಮಿಕೊಂಡಿರುವ 7 ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದ ವೇದಿಕೆಯ ಉದ್ಘಾಟನಾ ದಿನವಾದ ನಾಳೆ ಈ ಹಿರಿಮೆಯ ಸಾಥ್ರ್ಯಕ್ಯ ಸಮರಸ ತನ್ನದಾಗಿಸಿಕೊಳ್ಳಲಿದೆ.
    ಜಾಹೀರಾತುಗಳ ವ್ಯಾಪಾರಿ ಮಾಧ್ಯಮ ಲೋಕಕ್ಕಿಂತ ವಿಭಿನ್ನವಾಗಿ ತನ್ನದೇ ಶೈಲಿ ಮತ್ತು ಓದುಗರನ್ನು ಹೊಂದಿರುವ ಸಮರಸ ಸುದ್ದಿ, 14ಕ್ಕಿಂತಲೂ ಹೆಚ್ಚು ವಿದೇಶಿ ನೆಲದ ಕಾಸರಗೋಡು ಕನ್ನಡಿಗರ ವಿಷಯ ಸಂಗ್ರಹಿಸುವಿಕೆಯ ಆಶೋತ್ತರಗಳಿಗೆ ಬೆಂಬಲವಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಈ ಹೊತ್ತಲ್ಲಿ ಲಭ್ಯವಾಗುತ್ತಿರುವ ಪ್ರಶಸ್ತಿಯ ಗರಿ ಜವಾಬ್ದಾರಿಯನ್ನು ಹೆಚ್ಚಿಸಿದೆ.   
      ಜ.30 ರಂದು ಬೆಳಗ್ಗೆ 9 ಕ್ಕೆ ಸಮ್ಮೇಳಾಧ್ಯಕ್ಷರೊಂದಿಗೆ ಕನ್ನಡ ಭುವನೇಶ್ವರಿಯ ಸಾಂಸ್ಕøತಿಕ ಮೆರವಣಿಗೆಯನ್ನು ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಉದ್ಘಾಟಿಸುವರು. ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲಾ ಪ್ರಬಂಧಕ ಕೆ.ಜಿ.ಶ್ಯಾನುಭೋಗ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ದಿವಾಕರ ಆಚಾರ್ಯ, ಕೆ.ಮಾಧವ ಮಾಸ್ತರ್, ಶ್ರೀಧರ ಮಣಿಯಾಣಿ, ಶ್ರೀಹರಿ ಮಾಸ್ತರ್ ಭಾಗವಹಿಸುವರು. 9.30 ಕ್ಕೆ ಕನ್ನಡ ಭುವನೇಶ್ವರಿಯ ಮಂಟಪ ಉದ್ಘಾಟನೆ, ಕೆ.ಶಂಕರ್ ಅವರಿಂದ ರಾಷ್ಟ್ರ ಧ್ವಜಾರೋಹಣ, ಶಿವರಾಮ ಕಾಸರಗೋಡು ಅವರಿಂದ ಕನ್ನಡ ಧ್ವಜಾರೋಹಣ ನಡೆಯಲಿದೆ.
      ಆ ಬಳಿಕ ಸಮ್ಮೇಳನ ಉದ್ಘಾಟನಾ ಸಮಾರಂಭ ನಡೆಯುವುದು. ಕರ್ನಾಟಕ ಬಂದರು-ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ಸರ್ವಾಧ್ಯಕ್ಷ ಗಣೇಶ್ ಕಾಸರಗೋಡು ಅವರಿಂದ ಸಮ್ಮೇಳನಾಧ್ಯಕ್ಷರ ನುಡಿ, ಹಿರಿಯ ನ್ಯಾಯವಾದಿ ಪ್ರಕಾಶ್ ಎಸ್.ಉಡಿಕೇರಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಚಟ್ನಳ್ಳಿ ಮಹೇಶ್ ಪ್ರಧಾನ ಭಾಷಣ ಮಾಡುವರು. ಶಾಸಕ ಎನ್.ಎ.ನೆಲ್ಲಿಕುನ್ನು, ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮಧ್ಯಾಹ್ನ 2 ರಿಂದ ನೃತ್ಯ ಕಲಾ ಪ್ರತಿಭೋತ್ಸವ ಪ್ರದರ್ಶನ, 3.30 ರಿಂದ ರಾಷ್ಟ್ರೀಯ ವಿಚಾರಗೋಷ್ಠಿ, ಸಂಜೆ 6 ರಿಂದ ಸಾಂಸ್ಕøತಿಕ ವೈವಿಧ್ಯ ನಡೆಯಲಿದೆ.
       ಜ.31 ರಂದು ಬೆಳಗ್ಗೆ 10 ರಿಂದ ರಾಷ್ಟ್ರೀಯ ವಿಚಾರಗೋಷ್ಠಿ, ಮಧ್ಯಾಹ್ನ 12.30 ರಿಂದ ಅಂತಾರಾಜ್ಯ ಮಟ್ಟದ ಕಾವ್ಯ ಪ್ರಸ್ಥಾನ, 2 ರಿಂದ ಅಂತಾರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ, 3 ರಿಂದ ಅಂತಾರಾಜ್ಯ ಮಟ್ಟದ ಮಕ್ಕಳ ಕವಿಗೋಷ್ಠಿ, ಸಂಜೆ 3.30 ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಕರ್ನಾಟಕ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಡಾ.ರಾಜೇಶ್ ಬೆಜ್ಜಂಗಳ ಸಮಾರೋಪ ಭಾಷಣ ಮಾಡುವರು. ಗಣ್ಯರು ಅತಿಥಿಗಳಾಗಿ ಭಾಗವಹಿಸುವರು. ಸಂಜೆ 6 ರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries