ಕಾಸರಗೋಡು: ಕಾಸರಗೋಡಿನಂತಹ ಗಡಿನಾಡುಗಳಲ್ಲಿ ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸಲು ಕರ್ನಾಟಕ ಸರಕಾರ ವಿದ್ಯಾರ್ಥಿ ವೇತನ, ಉದ್ಯೋಗ ಮೀಸಲಾತಿ ಮೊದಲಾದ ಸವಲತ್ತುಗಳನ್ನು ಒದಗಿಸಬೇಕೆಂದು ಹಿರಿಯ ಸಿನೆಮಾ ಪತ್ರಕರ್ತ ಗಣೇಶ್ ಕಾಸರಗೋಡು ಹೇಳಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ಇದರ ಆಶ್ರಯದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಗುರುವಾರ ಆರಂಭಗೊಂಡ ಎರಡು ದಿನಗಳ 7 ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಡಿನಾಡಿನಲ್ಲಿ ಮನೆ ಮಾತಿನ ಭೇದವಿಲ್ಲದೆ ಎಲ್ಲ ಕನ್ನಡಿಗ ಜನ ಸಾಮಾನ್ಯರ, ಕನ್ನಡ ವಿದ್ಯಾರ್ಥಿಗಳ ಹಾಗು ಕನ್ನಡ ಕಲಿತ ಯುವ ಉದ್ಯೋಗಾರ್ಥಿಗಳ ಭಾಷಿಕ ಸಮೆಸ್ಯೆಗಳು ಇಂದು ಹಲವಾರಿವೆ. ಕನ್ನಡ ಮಾಧ್ಯಮ ಶಾಲೆಗಳ ಉಳಿವು ಕೂಡ ಮುಖ್ಯ ವಿಷಯವಾಗಿದೆ. ತಳಮಟ್ಟದ ಸಮಸ್ಯೆಗಳ ಪರಿಹಾರದ ಜತೆಗೆ ಸಾಹಿತ್ಯ, ಕಲೆ, ಸಾಂಸ್ಕøತಿಕ ರಂಗಗಳಿಗೆ ಉತ್ತೇಜನ ಕೂಡ ನೀಡಬೇಕು. ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಅರಿಯದ ಶಿಕ್ಷಕರ ನೇಮಕವನ್ನು ತಡೆಗಟ್ಟುವಂತೆ ಕೇರಳ ಸರಕಾರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಸರಕಾರ, ಕೇರಳ ಸರಕಾರ ಮತ್ತು ಕರ್ನಾಟಕ ಸರಕಾರಗಳ ಜತೆಗೆ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಲು ಕನ್ನಡ ಅಭಿವೃದ್ಧಿ ಪ್ರಾ„ಕಾರದ ಮಾದರಿಯಲ್ಲಿ ಓರ್ವ ಅ„ಕಾರಿ, ರಾಯಭಾರಿಯನ್ನು ಕಾಸರಗೋಡಿನಲ್ಲಿ ನೇಮಿಸಬೇಕೆಂದರು.
ನಕಲಿ ಕನ್ನಡ ಬಲ್ಲ, ಗಡಿನಾಡ ಕನ್ನಡಿಗ ಪ್ರಮಾಣಪತ್ರಗಳನ್ನು ಬಳಸಿ ಕರ್ನಾಟಕದಲ್ಲಿ ಸವಲತ್ತುಗಳನ್ನು ಪಡೆಯುವುದನ್ನು ತಡೆಗಟ್ಟಬೇಕು, ಇದಕ್ಕಾಗಿ ಗಡಿನಾಡಿನಲ್ಲಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಅಥವಾ ಕನ್ನಡವನ್ನು ಒಂದು ವಿಷಯವನ್ನಾಗಿ ಕಲಿತವರಿಗೆ ಮಾತ್ರ ಉನ್ನತ ಶಿಕ್ಷಣದಲ್ಲಿ ಕನ್ನಡ ಬಲ್ಲ, ಗಡಿನಾಡು ಕನ್ನಡಿಗ ಸೀಟುಗಳನ್ನು ನಿಡಬೇಕು. ಅದೇ ರೀತಿ ಕರ್ನಾಟಕದ ಯಾವುದಾದರೂ ಸಂಸ್ಥೆಗಳಿಂದ ಭ್ರಷ್ಟಾಚಾರದ ಮೂಲಕ ನಕಲಿ ಕನ್ನಡ ಬಲ್ಲ ಪ್ರಮಾಣಪತ್ರ ಪಡೆಯುವವರನ್ನು ನಿಯಂತ್ರಿಸಬೇಕೆಂದರು.
ಕಾಸರಗೋಡಿನಲ್ಲಿ ಕೆಲವು ಸಭೆ, ಸಮ್ಮೇಳನಗಳಿಗೆ ಕರ್ನಾಟಕ ಸಂಸ್ಕøತಿ ಇಲಾಖೆ, ಅಭಿವೃದ್ಧಿ ಪ್ರಾಧಿಕಾರ ಮೊದಲಾದ ಇಲಾಖೆಗಳಿಂದ ನೀಡುತ್ತಿರುವ ಪೆÇ್ರೀತ್ಸಾಹ ಸದುಪಯೋಗವಾಗುತ್ತಿದೆಯೇ ಎಂಬ ಬಗ್ಗೆ ನಿಗಾವಹಿಸಬೇಕೆಂದು ಅವರು ಹೇಳಿದರು.
ಸಾಮರಸ್ಯ ಬೇಕು :
ಪ್ರತೀ ಭಾಷೆಗೂ ತನ್ನದೇ ಆದ ಅಸ್ಮಿತೆಯಿದೆ. ಯಾವ ಭಾಷೆಯೂ ಮೇಲಲ್ಲ. ಕೀಳಲ್ಲ. ಭಾಷೆಗಾಗಿ ಸಂಘರ್ಷ ಬೇಡ. ಸಾಮರಸ್ಯ ಬೇಕು. ಆಗ ಭಾಷೆ ಬೆಳೆಯುತ್ತದೆ. ಕನ್ನಡ ಭಾಷೆಯ ಮಹತ್ವವನ್ನು ಹೊಸ ತಲೆಮಾರಿಗೆ ಹಸ್ತಾಂತರಿಸುವ ಕೆಲಸ ನಡೆಯಬೇಕಾಗಿದೆ ಎಂದು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‍ಸಾರ್ ಅವರು ಹೇಳಿದರು.
ಶುದ್ಧವಾಗಿ ಹಾಗು ವ್ಯಾಕರಣ ಬದ್ಧವಾಗಿ ಮಾತನಾಡಿದರೆ ಕನ್ನಡ ಭಾಷೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ. ಭಾಷಾ ಶುದ್ಧತೆಯನ್ನು ಯುವ ತಲೆಮಾರಿಗೆ ಕಲಿಸಿಕೊಡಬೇಕು ಎಂದ ಅವರು ತುಳು ಭಾಷೆಯನ್ನು 8 ನೇ ಪರಿಚ್ಛೇಧದಲ್ಲಿ ಸೇರ್ಪಡೆಗೆ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಬೇಕಾಗಿದೆ ಎಂದರು. ಸಾಹಿತಿಗಳು ಇನ್ನೊಬ್ಬರ ಭಾವನೆಗಳಿಗೆ ಘಾಸಿ ಮಾಡದಂತೆ ಬರೆಯಿರಿ. ಜನರನ್ನು ಬೆಸೆಯುವ ಕೆಲಸ ಮಾಡಿ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಕನ್ನಡ ಕಟ್ಟುವ ಕೆಲಸ ಮಾಡೋಣ : ಗಡಿನಾಡು ಕಾಸರಗೋಡು ಕೇರಳದಲ್ಲಿದ್ದರೂ ಒಗ್ಗಟ್ಟಿನಿಂದ ಕನ್ನಡ ಕಟ್ಟುವ ಕೆಲಸವನ್ನು ಮಾಡೋಣ. ಕೇರಳ ಸರಕಾರ ಕನ್ನಡ ಭಾಷೆ, ಸಂಸ್ಕøತಿಗೆ ನಿರಂತರವಾಗಿ ಕೊಡಲಿಯೇಟು ನೀಡುತ್ತಿದ್ದರೂ ಕನ್ನಡಿಗರ ಹೋರಾಟದಿಂದ ಅವುಗಳನ್ನೆಲ್ಲವನ್ನು ಮೆಟ್ಟಿ ನಿಂತ ಇತಿಹಾಸ ನಮ್ಮದು. ಆದುದರಿಂದ ಕಾಸರಗೋಡಿನಲ್ಲಿ ಇನ್ನೂ ಕನ್ನಡ ಜೀವಂತ ಉಳಿಸಿಕೊಳ್ಳಲು ಎಲ್ಲಾ ಹೋರಾಟಗಳಿಗೆ ಸಿದ್ಧ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಶ್ರೀ ವೆಂಕಟ್ರಮಣ ಕೃಪಾಪೆÇೀಷಿತ ಯಕ್ಷಗಾನ ಕಲಾ ಸಂಘ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ಕರ್ನಾಟಕ ರಕ್ಷಣಾ ವೇದಿಕೆ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷೆ ರೇಣುಕಾ ಎಸ್.ಅವಾಜಿ, ಉದ್ಯಮಿ ಸೋಮೇಶ್ವರ ಜಿ.ಅವಾಜಿ, ಉದ್ಯಮಿ ನಿರಂಜನ ಕೊರಕ್ಕೋಡು, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾ„ಕಾರಿ ಚೇತನಾ ಎಂ, ಜಿ.ಎಂ.ಹೆಗಡೆ ಶಿರಸಿ, ರಾಮಕೃಷ್ಣ ಮಯ್ಯ ಸಿರಿಬಾಗಿಲು, ರಾಮಕೃಷ್ಣ ಕಾಟುಕುಕ್ಕೆ, ಜಯಾನಂದ ಕುಮಾರ್ ಹೊಸದುರ್ಗ, ಸಿ.ಎಂ.ತಿಮ್ಮಯ್ಯ, ಕೆ.ಮಾಧವ ಮಾಸ್ತರ್, ವಾಮನ ರಾವ್ ಬೇಕಲ್, ರುದ್ರೇಶ್, ಎಸ್.ಎಲ್.ಭಾರದ್ವಾಜ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು ನಗರಸಭಾ ಸದಸ್ಯ ಕೆ.ಶಂಕರ್ ರಾಷ್ಟ್ರ ಧ್ವಜಾರೋಹಣಗೈದರು. ಶಿವರಾಮ ಕಾಸರಗೋಡು ಕನ್ನಡ ಧ್ವಜಾರೋಹಣಗೈದರು. ಇದಕ್ಕೂ ಮುನ್ನ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯ ಪರಿಸರದಿಂದ ಆರಂಭಗೊಂಡ ಮೆರವಣಿಗೆಯನ್ನು ಶಾಲಾ ಆಡಳಿತ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಅವರ ಅಧ್ಯಕ್ಷತೆಯಲ್ಲಿ ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್ ಉದ್ಘಾಟಿಸಿದರು. ಉಪಾಧ್ಯಕ್ಷ ದಿವಾಕಾರ ಆಚಾರ್ಯ, ಮಾಜಿ ಅಧ್ಯಕ್ಷ ಮಾಧವ ಮಾಸ್ತರ್, ಸದಸ್ಯ ಶ್ರೀಧರ ಮಣಿಯಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ರೀಹರಿ ಮಾಸ್ತರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ದಿಕ್ಸೂಚಿ ಭಾಷಣ ಮಾಡಿದರು. ಸಮ್ಮೇಳನದ ಅಂಗವಾಗಿ ಪುಸ್ತಕ ಪ್ರದರ್ಶನ, ಕಲಾ ಪ್ರದರ್ಶನ, ಕರಕುಶಲ ಸಿದ್ಧ ಉಡುಪುಗಳ ಪ್ರದರ್ಶನ, ಯಕ್ಷಗಾನ ವೇಷ ಭೂಷಣ ಮೊದಲಾದ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು.