ಕಾಸರಗೋಡು: ವಯೋವೃದ್ದರಿಗೆ ಆತ್ಮವಿಶ್ವಾಸ ಹೆಚ್ಚಿಸಿ, ಸಮಾಜದ ಪ್ರಧಾನ ವಾಹಿನಿಗೆ ಕರೆತರುವ ಸೃಜನಾತ್ಮಕ ಚಟುವಟಿಕೆಗಳ ಅಂಗವಾಗಿ ಪರಪ್ಪ ಬ್ಲಾಕ್ ಪಂಚಾಯತ್ ವತಿಯಿಂದ ಹಗಲು ಮನೆಯ ಉದ್ಘಾಟನೆ ಫೆ.8ರಂದು ನಡೆಯಲಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು.
ಪರಪ್ಪ ಬ್ಲಾಕ್ ಕಿನಾನೂರು-ಕರಿಂದಳಂ ಕುಂಬಳಪಳ್ಳಿ ಎಂಬಲ್ಲಿ ಖರೀದಿಸಿದ 20 ಸೆಂಟ್ಸ್ ಜಾಗದಲ್ಲಿ 20 ಲಕ್ಷ ವೆಚ್ಚದಲ್ಲಿ ಹಗಲು ಮನೆ ನಿರ್ಮಿಸಲಾಗಿದೆ. ಹಾಲ್, ಅಡುಗೆಮನೆ, ಶೌಚಾಲಯ ಸೇರಿದ ಕಟ್ಟಡವಿದು. ವಿಶಾಲ ಅಂಗಳ, ಸೂಕ್ತ ಆಸನಗಳು, ಮೇಜುಗಳು ಇವೆ. ಆಟವಾಡಲು ಚೆಸ್ ಬೋರ್ಡ್, ಕ್ಯಾರಂಸ್, ವೀಕ್ಷಣೆಗೆ ಟೀವಿ ಇತ್ಯಾದಿಗಳಿವೆ. ಅಡುಗೆ ಮನೆಯಲ್ಲಿ ಅಗತ್ಯದ ಅಡುಗೆ ಅನಿಲ,ಪಾತ್ರೆ ಸಲಕರಣೆಗಳು ಇವೆ. ಬ್ಲೋಕ್ ಪಂಚಾಯತ್ ಅಧ್ಯಕ್ಷ ಪಿ.ರಾಜನ್ ಅವರು ಅಧ್ಯಕ್ಷರಾಗಿರುವ ಹಗಲು ಮನೆ ಕಲ್ಯಾಣಸಮಿತಿ ಈ ಯೋಜನೆಯ ಹೊಣೆ ಹೊತ್ತಿದೆ.
ಬಡ್ತಿಗೆ ಪೂರಕ ನಿರ್ಮಾಣ:
ಮುಂದೆ ಈ ಹಗಲುಮನೆಯನ್ನು ಸ್ವಯಂ ಪ್ರಭಾ ಹೋಂ ಆಗಿ ಬಡ್ತಿಗೊಳಿಸುವ ಉದ್ದೇಶವಿದ್ದು, ಅದಕ್ಕೆ ಪೂರಕವಾಗಿಯೇ ನಿರ್ಮಾಣ ಪೂರ್ತಿಗೊಳಿಸಲಾಗಿದೆ.
ಪಿ.ರಾಜನ್, ಅಧ್ಯಕ್ಷ, ಪರಪ್ಪ ಬ್ಲೋಕ್ ಪಂಚಾಯತ್.