ಕಾಸರಗೋಡು: ಮಲೆನಾಡ ಜನತೆಯ ಕನಸು ನನಸಾಗಿಸುವ ನಿಟ್ಟಿನಲ್ಲಿ ವೆಳ್ಳರಿಕುಂಡ್ ಸಿವಿಲ್ ಸ್ಟೇಷನ್ ನಿರ್ಮಾಣ ಚುರುಕಿನಲ್ಲಿ ಸಾಗುತ್ತಿದೆ. 2019 ಫೆಬ್ರವರಿ ತಿಂಗಳಲ್ಲಿ ಈ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನಡೆಸಲಾಗಿತ್ತು.
ವೆಳ್ಳರಿಕುಂಡ್ ಪೇಟೆಯಿಂದ ಕೊಂಚದೂರದ ಕುನ್ನಿಲ್ ಚೆರುವು ಎಂಬಲ್ಲಿ ಮಂಜೂರುಗೊಂಡಿರುವ ಪ್ರದೇಶದಲ್ಲಿ ಪ್ರಕೃತಿಗೆ ಯಾವುದೇ ರೀತಿ ಹಾನಿಯಾಗದಂತೆ ತಪ್ಪಲು ರೂಪದಲ್ಲಿ ಸಿವಿಲ್ ಸ್ಟೇಷನ್ ನಿರ್ಮಿಸಲಾಗುತ್ತಿದೆ. ಇಲ್ಲಿನ ಪ್ರಧಾನ ಬ್ಲೋಕ್ ನಲ್ಲಿ 4 ಅಂತಸ್ತುಗಳಿವೆ. ಅದರ ಹಿಂದಿನ ಮೇಲ್ಭಾಗದ ತಪ್ಪಲಿನಲ್ಲಿರುವ ಎರಡನೇ ಬ್ಲೋಕ್ ನಲ್ಲಿ ಕ್ಯಾಂಟೀನ್ ಬ್ಲಾಕ್ ನಿರ್ಮಿಸಲಾಗುವುದು. ಮೊದಲನೇ ಬ್ಲೋಕ್ ನ ಕಾಮಗಾರಿ ಚುರುಕಿನಲ್ಲಿ ನಡೆಯುತ್ತಿದೆ. ಇಲ್ಲಿನ ಕೆಳ ಅಂತಸ್ತಿಗೆ 45 ಮೀಟರ್ ಉದ್ದವಿದೆ.
ವಸತಿ ನಿರ್ಮಾಣ ಇಲಾಖೆಯ ಮೇಲ್ನೋಟದಲ್ಲಿ ಟಿ.ಪಿ.ಕನ್ ಸ್ಟ್ರಕ್ಷನ್ ಸಂಸ್ಥೆ ಸಿವಿಲ್ ಸ್ಟೇಷನ್ ಕಾಮಗಾರಿಯ ಹೊಣೆ ವಹಿಸಿಕೊಂಡಿದೆ. ವೆಳ್ಳರಿಕುಂಡ್ ತಹಸೀಲ್ದಾರ್ ಪಿ.ಕುಂ ಞÂ ಕಣ್ಣನ್ ನೇರವಾಗಿ ಆಗಮಿಸಿ ನಿರ್ಮಾಣ ಚಟುವಟಿಕೆಗಳ ಮೇಲ್ನೋ ವಹಿಸುತ್ತಿದ್ದಾರೆ. 18 ತಿಂಗಳಲ್ಲಿ ನಿರ್ಮಾಣ ಪೂರ್ಣಗೊಳಸಬೇಕು ಎಂಬ ಕರಾರಿದೆ.
ಬಿರುಸಿನ ಮಳೆಯ ಕಾರಣ ಎರಡು ತಿಂಗಳು ತಡವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಆದರೆ ಈಗ ಷೆಡ್ಯೂಲ್ ಪ್ರಕಾರ ಕಾಮಗಾರಿಮುಂದುವರಿಯುತ್ತಿದೆ ಎಂದು ಓವರ್ ಸೀಯರ್ ಕೆ.ಮಹಮ್ಮದ್ಮನ್ಸೂರ್ ತಿಳಿಸಿದರು.
ನಾಡಿನ ಮುಖಚರ್ಯಯನ್ನೇ ಬದಲಿಸುವಂಥಾ ಸಿವಿಲ್ ಸ್ಟೇಷನ್ ಗಾಗಿ ಒಂದೂವರೆ ಎಕ್ರೆ ಜಾಗವನ್ನು ಸಹೃದಯರಾದ ಸಾರ್ವಜನಿಕರೇ ಒದಗಿಸಿದ್ದಾರೆ. ಕೆ.ಉಣ್ಣಿಕೃಷ್ಣನ್, ಆಂಟನಿ ಮಾಳಿಯೇಕ್ಕಾಲ್, ಸಿಲ್ ಬಿ ಮ್ಯಾಥ್ಯೂ ಎಂಬವರು ಈ ಜಾಗವನ್ನು ಒದಗಿಸಿಕೊಟ್ಟವರು. ಸಿವಿಲ್ ಸ್ಟೇಷನ್ ನಿರ್ಮಾಣದಲ್ಲಿ ತೊಡಗಿಕೊಮಡಿರುವ ಇತರ ರಾಜ್ಯಗಳ ಕಾರ್ಮಿಕರ ವಸತಿ, ಕುಡಿಯುವ ನೀರು, ಮೂಲಭೂತ ಸೌಲಭ್ಯಗಳು ಇತ್ಯಾದಿಯನ್ನು ನಿರ್ಮಾಣ ಜಾಗದಲ್ಲೇ ಏರ್ಪಡಿಸಲಾಗಿದೆ. ಕಾಮಗಾರಿ ನಿರತರಾದ 26 ಇತರ ರಾಜ್ಯಗಳ ಕಾರ್ಮಿಕರಿಗೆ ರಾಜ್ಯ ಸರಕಾರ ವತಿಯಿಂದ ನೀಡುವ ಆವಾಝ್ ವಿಮೆ ಕಾರ್ಡ್ ಒದಗಿಸಲಾಗಿದೆ.
8.37 ಕೋಟಿ ರೂ. ವೆಚ್ಚದಲ್ಲಿ 4 ಅಂತಸ್ತಿನ ಕಟ್ಟಡ:
ಮಲೆನಾಡ ತಾಲೂಕಾಗಿರುವ ವೆಳ್ಳರಿಕುಂಡ್ ತಾಲೂಕು ಕಚೇರಿಯ ವಿಸ್ತ್ರೀರ್ಣ 3615.78 ಚದರ ಮೀಟರ್ ಆಗಿದೆ. ಆರಂಭದಲ್ಲಿ 17.79 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಅಂದಾಜಿನಲ್ಲಿದ್ದ ಸಿವಿಲ್ ಸಟೇಷನ್8.37 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವುದಾಗಿ ಕಲ್ಯಾಶ್ಶೇರಿಯ ಟಿ.ಪಿ.ಪ್ರಕಾಶನ್ ಅವರ ಮಾಲೀಕತ್ವದ ಟಿ.ಪಿ.ಕನ್ಸ್ ಸ್ಟ್ರಕ್ಷನ್ ಟೆಂಡರ್ ಸಲ್ಲಿಸಿ, ಹೊಣೆ ಪಡೆದಿತ್ತು. ಈ ಕಟ್ಟಡ ಪೂರ್ಣಗೊಂಡ ವೇಳೆ 10 ಕಚೇರಿಗಳು ಇಲ್ಲಿ ಚಟುವಟಿಕೆ ನಡೆಸಲಿವೆ. ಅತಿ ಕೆಳಗಿನ ಅಂತಸ್ತಿನಲ್ಲಿ ವಾಹನನಿಲುಗಡೆ ಸೌಲಭ್ಯ ಏರ್ಪಡಿಸಲಾಗುವುದು.
ಮೊದಲ ಅಂತಸ್ತಿನಲ್ಲಿ ತಾಲೂಕು ಕಚೇರಿ, ಲೀಗಲ್ ಮೆಟ್ರಾಲಜಿ, ಲೇಬರ್ ಕಚೇರಿ, ಸ್ಟಾಟಿಸ್ಟಿಕ್ಸ್ ಕಚೇರಿ, ಇಂಡಸ್ಟ್ರಿರಿಯಲ್ ಆಫೀಸ್, ತನಿಖಾ ವಿಭಾಗ ಇತ್ಯಾದಿ ಕಚೇರಿ ಆರಂಭಗೊಳ್ಳಲಿವೆ. ಎರಡನೇ ಂತಸ್ತಿನಲಲಿ ತಾಲೂಕು ತಹಸೀಲ್ದಾರ್ ಅವರ ಕಚೇರಿ ಸಹಿ ತಾಲೂಕು ಅಡ್ಮಿನಿಸ್ಟೇಷನ್, ಲೋಕೋಪಯೋಗಿ, ರಸ್ತೆ ಸಾರಿಗೆ ಅಧಿಕಾರಿ, ಮಣ್ಣು ಸಂರಕ್ಷಣೆ, ಉದ್ಯೋಗ ವಿನಿಮಯ ಕಚೇಋರಿ ಇತ್ಯಾದಿ ಇರುವುದು.
ಜಲ ವಿತರಣೆ ಸೌಲಭ್ಯ, ವಾಟರ್ ಟಾಂಕಿ, ಡ್ರೈನೇಜ್ ಸೌಲಭ್ಯ, ಸುತ್ತು ಆವರಣ ಗೋಡೆ, 6 ಸೋಕ್ ಪಿಟ್ ಗಳು, ಸಿವಿಲ್ಸ್ಟೇಷನ್ ಗೆ ಆಗಮಿಸುವ ರಸ್ತೆಯ ಕಾಗಾರಿ, ಮಳೆ ನೀರು ಸಂಗ್ರಹಾಗಾರ, ಸೀವೇಜ್ ಟ್ರೀಟ್ ಮೆಂಟ್ ಪ್ಲಾಂಟ್, ಶೀಟ್ ರೂಫಿಂಗ್ ಮೊದಲಾದವು ಇಲ್ಲಿರುವುವು. ಜೊತೆಗೆ ಎರಡು ತಪ್ಪಲಿನಲ್ಲಿರುವ ಮೊದಲ ಮತ್ತು ದ್ವಿತೀಯ ಬ್ಲೋಕ್ ಗಳನ್ನು ಸಂಪರ್ಕಿಸುವ ಒಂದು ಪ್ಯಾಸೇಜ್ ಇರುವುದು. ಕುನ್ನಿಲ್ ಚೆರುವಿಲಾಯಿನಲಲಿ ಮಳೆಯ ನೀರು ರಭಸದಿಂದ ಹರಿಯುವುದನ್ನು ತಡೆಯಲು ರೀಟೈನಿಂಗ್ ಆವರಣಗೋಡೆ, ಡ್ರೈನೇಜ್ ಸೌಲಭ್ಯ ಸಿವಿಲ್ ಸ್ಟೇಷನ್ ನಲ್ಲಿರುವುದು. ಒಂದು ತಾಲೂಕು ಸಂಬಂಧಿಸಿದ ಎಲ್ಲ ಸರಕಾರಿ ಕಚೇರಿಗಳಿಗೂ ಜಾಗ ಒದಗಿಸುವ ಮೂಲಕ ಈ ಸಿವಿಲ್ ಸ್ಟೇಷನ್ ನಿರ್ಮಾಣಗೊಳ್ಳುತ್ತಿದೆ. ಜನತೆಗೆ ಬಂದು ಹೋಗಲೂ ಸುಲಭಸಾಧ್ಯವಿದೆ.
1984 ಆ.28ರಂದು ವೆಳ್ಳರಿಕುಂಡ್ ಸಬ್ ಟ್ರಷರಿ ಉದ್ಘಾಟನೆ ನಡೆಸಿ ಮಾತನಾಡಿದ ಅಂದಿನ ಹಣಕಾಸು ಸಚಿವ ಕೆ.ಎಂ.ಮಾಣಿ ಅವರು ನಡೆಸಿದ್ದ ಭಾಷಣ ಮಲೆನಾಡಿನ ಮಂದಿಗೆ ಇಂದಿಗೂ ನೆನಪಿದೆ. ಮಲೆನಾಡು ಅಭಿವೃಧ್ಧಿಯತ್ತ ದಾಪುಗಾಲು ಹಾಕುತ್ತಿದೆ. ಮಲೆನಾಡ ತಾಲೂಕು ಸಹಿತ ಅನೇಕ ಸೌಲಭ್ಯಗಳು ಇಲ್ಲಿಗೆ ಲಭಿಸಲಿವೆ ಎಂದು ಮಲೆನಾಡಿಗೆ ವಿದ್ಯುತ್ ಸಂಪರ್ಕ ಒದಗಿಸಿದ ಸಚಿವ ಕೆ.ಎಂ.ಮಾಣಿ ತಿಳಿಸಿದರು.
ತದನಂತರ ಮೂರು ದಶಕಗಳ ನಂತರ ವೆಳ್ಳರಿಕುಂಡ್ ತಾಲೂಕು ರಚನೆಗೊಂಡಿತ್ತು. 2014 ಫೆ.21ರಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ತಾಲೂಕು ಉದ್ಘಾಟಿಸಿದ್ದರು. 2019 ಫೆ.9ರಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಸಿವಿಲ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು.
ಹೊಸದುರ್ಗ ತಾಲೂಕಿನಲ್ಲಿ ಸೇರಿದ್ದ ಕಳ್ಳಾರ್, ಪನತ್ತಡಿ, ಕೋಡೋಂ-ಏಳೂರು, ಬಲಾಳ್, ಕಿನಾನೂರು-ಕರಿಂದಳಂ, ವೆಸ್ಟ್ ಏಳೇರಿ, ಈಸ್ಟ್ ಏಳೇರಿ ಗ್ರಾಮಪಂಚಾಯತ್ ಗಳನ್ನು ಸೇರಿಸಿ ವೆಳ್ಳರಿಕುಂಡ್ ನ್ನು ಕೇಂದ್ರವಾಗಿಸಿ ಮಲೆನಾಡ ತಾಲೂಕು ರಚನೆಗೊಂಡಿತ್ತು.