ಪೆರ್ಲ: ಸೇರಾಜೆ ಕಾನ ಶ್ರೀ ಮಲರಾಯಿ ಧೂಮಾವತೀ, ಜಟಾಧಾರಿ, ನಾಗಪರಿವಾರ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀದೈವಗಳ ನೇಮೋತ್ಸವ ಜನವರಿ 29ಮತ್ತು 30ರಂದು ಜರುಗಲಿದೆ. ಕ್ಷೇತ್ರದ ತಂತ್ರಿವರ್ಯ, ಶ್ರೀಕ್ಷೇತ್ರ ಕುಕ್ಕಾಜೆಯ ಶ್ರೀಕೃಷ್ಣ ಗುರೂಜಿ ಅವರಮಾರ್ಗದರ್ಶನದಲ್ಲಿ ಜರುಗಲಿದೆ.
29ರಂದು ಬೆಳಗ್ಗೆ 7ಕ್ಕೆ ಗಣಪತಿ ಹವನ, ನಾಗತಂಬಿಲ, ಶ್ರೀzಧೂಮಾವತೀ ಬನದಲ್ಲಿ ತಂಬಿಲ, ಹರಿಸೇವೆ, ಮಲರಾಯಿ, ಧೂಮಾವತೀ ಜಟಾಧಾರಿ ದೈವಗಳಿಗೆ ತಂಬಿಲ ಸೇವೆ ನಡೆಯುವುದು. ಸಂಜೆ 6ಕ್ಕೆ ಗುಳಿಗನ ಕೋಲ, ಕಲ್ಲಾಲದ್ ಗುಳಿಗನ ಕೋಲ, ರಆತ್ರಿ 9ರಿಂದ ಮುಕಾಂಬಿಕಾ ಗುಳಿಗ, ಮೊಡಚಾಮುಂಡಿ ದಐವದ ನೇಮ ನಡೆಯುವುದು.
30ರಂದು ಬೆಳಗ್ಗೆ 8ಕ್ಕೆ ಮಲರಾಯಿ ದೈವ, ಮಧ್ಯಾಹ್ನ 2ಗಂಟೆಗೆ ಶ್ರೀ ಧೂಮಾವತೀ ದೈವದ ನೇಮೋತ್ಸವ ನಡೆಯುವುದು. ಸಂಜೆ 7ರಿಂದ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ-ಕೊರತಿ, ಕೊರಗತನಿಯ ದೈವಗಳ ನೇಮ ನಡೆಯುವುದು.