ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ 'ಆರ್‍ದ್ರಂ'ಹೆಸರಿನ ವ್ಯಾಯಾಮ ಕೇಂದ್ರ ಆರಂಭಗೊಂಡಿದೆ. ಜೀವನಶೈಲಿ ಬದಲಾವಣೆಯ ಪರಿಣಾಮ ಇಂದಿನ ಕಾಲಮಾನದಲ್ಲಿ ಕಾಡುತ್ತಿರುವ ರೋಗಗಳ ನಿಯಂತ್ರಣ, ವ್ಯಾಯಾಮ ಮತ್ತು ಕ್ರೀಡೆಗಳಿಗೆ ಪೆÇ್ರೀತ್ಸಾಹ ಒದಗಿಸುವ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆವತಿಯಿಂದ ಈ ವ್ಯಾಯಾಮ ಕೇಂದ್ರ ಆರಂಭಿಸಲಾಗಿದೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಮರಂಭದಲ್ಲಿ ಕಂದಾಯ ಸಚಿವಇ.ಚಂದ್ರಶೇಖರನ್ ಜಿಮ್ ಉದ್ಘಾಟಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಪಿ.ಕುಞÂಕಣ್ಣನ್,ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ವಿವಿಧ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಷಾಹಿನಾ ಸಲೀಂ, ಶಾರದಾ ಎಸ್.ನಾಯರ್, ಕೆ.ಜಲೀಲ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೆವಿದಾಸ್, ವಿವಿಧ ರಾಜಕೀಯಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.