HEALTH TIPS

ಉಡುಪಿ ಶ್ರೀಕೃಷ್ಣಮಠದಲ್ಲಿ ರಾಮಕೃಷ್ಣ ಕಾಟುಕುಕ್ಕೆಯವರಿಗೆ ಪರ್ಯಾಯ ಶ್ರೀಗಳಿಂದ ಹರಿದಾಸದೀಕ್ಷೆ

     
         ಉಡುಪಿ: ಜೀವನವನ್ನೇ ದಾಸ ಸಾಹಿತ್ಯದ ಪ್ರಸಾರ-ಪ್ರಚಾರಕ್ಕಾಗಿ ಮುಡಿಪಿಟ್ಟು, ಭೋಗ-ಭಾಗ್ಯದ ಬದುಕನ್ನು ತ್ಯಜಿಸಿ ವೈಷ್ಣವತೆಯ ಸರ್ವೋತ್ತಮತ್ವವನ್ನು ಸಾರಲು ಹೊರಟ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಉಡುಪಿ ಶ್ರೀ ಕೃಷ್ಣಮಠದ ಸರ್ವಜÐ ಪೀಠದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪ್ರಣವ ಮಂತ್ರೋಪದೇಶ ಪೂರ್ವಕ ಪವಿತ್ರ ಹರಿದಾಸ ದೀಕ್ಷೆ ನೀಡಿ ಹರಸಿದರು. ಕೇರಳ-ಕರ್ನಾಟಕ ಗಡಿಭಾಗದಲ್ಲಿ  ಸುಮಾರು 2ದಶಕಗಳಿಂದ ದಾಸಸಾಹಿತ್ಯ ಮತ್ತು ಭಜನಾ ಸಂಸ್ಕøತಿಯ ಪುನರುತ್ಥಾನಕ್ಕೆ ಟೊಂಕಕಟ್ಟಿ ದುಡಿದು, 4ಸಾವಿರದಷ್ಟು ಭಜನಾರ್ಥಿಗಳನ್ನು ಮತ್ತು ನೂರಾರು ಭಜನಾಮಂಡಲಿಗಳನ್ನು ಸೃಷ್ಟಿಸಿ ಭಜನಾ ಕ್ರಾಂತಿಯನ್ನೆಬ್ಬಿಸಿದ ಅವರಿಗೆ "ಮಧ್ವಾಧೀಶ ವಿಠಲದಾಸ" ಅಂಕಿತ ಪ್ರದಾನದೊಂದಿಗೆ ದಾಸದೀಕ್ಷೆ ನೀಡಲಾಯಿತು.
        ಬಳಿಕ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಿರಂತರ ದಾಸ ಸಂಕಿರ್ತನೆ, ಹರಿದಾಸ ಚಿಂತನೆಗಳೊಂದಿಗೆ ನಡೆದ ಸಮಾರಂಭದ ಅಂತ್ಯದಲ್ಲಿ ಆಶೀರ್ವಚನ ನುಡಿಗಳನ್ನಿತ್ತ ಪರ್ಯಾಯ ಶ್ರೀಗಳವರು "ಹರಿದಾಸತ್ವ" ಎನ್ನುವುದು ಶೋಕಿಯ ಹೆಸರಲ್ಲ. ಅದು ಜೀವನ ಶೈಲಿಯ ವ್ರತ. ವರ್ತಮಾನದಲ್ಲಿ ದಾಸಸಾಹಿತ್ಯದ ಅರಿವು, ಪ್ರಚಾರ ಅಗತ್ಯ ಮತ್ತು ಅತ್ಯಂತ ತುರ್ತಿನ ಕೆಲಸ. ರಾಮಕೃಷ್ಣ ಕಾಟುಕುಕ್ಕೆಯವರನ್ನು ಹರಿದಾಸರನ್ನಾಗಲು ಭಗವಂತನೇ ಪ್ರಚೋದಿಸಿದ್ದು ಎನ್ನಲು ನಮ್ಮಲ್ಲಿ ದೃಷ್ಟಾಂತವಿದೆ. ಉಡುಪಿಯಲ್ಲಿ ನಿರ್ವಿಗ್ನತೆಯಿಂದ ಭಜನಾ ಯಜÐ ನಡೆಯುವಲ್ಲಿ ಅವರ ಪಾತ್ರವೂ ಇದೆ. ಪರಿಣಾಮ ಅವರೊಳಗೆ ಭಗವಂತನೇ ಪ್ರಚೋದನೆಯಾಗಿ ಹರಿದಾಸ ದೀಕ್ಷೆ ಸ್ವೀಕಾರ ಯೋಗ ಅವರಿಗೆ ಸಿಕ್ಕಿದೆ.ಇದು ಕೋಟ್ಯಾಂತರ ಮನುಷ್ಯರಲ್ಲಿ ಅಪೂರ್ವ ಸಿಗುವ ಮೋಕ್ಷಯೋಗ. ಪರಮಪದದೆಡೆಗೆ ಸನಿಹವಾಗಿ ಉಳಿಯುವ ಪುಣ್ಯ ಯೋಗ" ಎಂದು ಶ್ರೀಗಳವರು ನುಡಿದರು.
     ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ "ಸಾಹಿತ್ಯ ಅಂದರೆ ಕ್ರಾಂತಿಯಲ್ಲ, ಅದು ಜೀವನ ಪ್ರೀತಿ. ಅದು ಆಧ್ಯಾತ್ಮ, ಸತ್ಮರ್ಮಗಳಿಂದ ಬರಬೇಕು. ಅದಕ್ಕೆ ಜೀವಧಾತುವೇ ದಾಸಸಾಹಿತ್ಯ. ದಾಸ ಸಾಹಿತ್ಯ ಸಮ್ಮೇಳನ ನಡೆಸಿದ ಹೆಮ್ಮೆ ದ.ಕ ಜಿಲ್ಲೆಯ ಸಾಹಿತ್ಯ ಪರಿಷತ್ ಗೆ ಇದೆ. ಸಾಹಿತ್ಯ ಸಂಘರ್ಷ ಸೃಷ್ಟಿಸುವುದಕ್ಕಿಂತ ಅರಿವು ಮತು ಬೌದ್ಧಿಕ ಎತ್ತರವನ್ನು ನೆಲದ ಸಂಸ್ಕøತಿಯ ಮೂಲಕ ಕಾಪಿಡುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ದಾಸ ಸಾಹಿತ್ಯವೇ ನಿಜವಾದ ಸಾಹಿತ್ಯ' ಎಂದು ನುಡಿದರು.
    ತಿರುಪತಿ ದಾಸಾಹಿತ್ಯ ಪ್ರಾಜೆಕ್ಟ್ ಉಡುಪಿ ಜಿಲ್ಲಾ ಸಂಯೋಜಕ ಗೋಪಾಲಾಚಾರ್, ಬೆಂಗಳೂರು ಹರಿದಾಸ ಸಂಘದ ವಿದ್ವಾಂಸ ಹ.ರಾ. ನಾಗರಾಚಾರ್ಯ, ಕುಂಟಾರು ತಾಂತ್ರಿಕ ಮನೆತನದ ಬ್ರಹ್ಮಶ್ರೀ  ಮುರಳೀಧರ ತಂತ್ರಿ, ವಿಹಿಂಪ ಉಡುಪಿ ಜಿಲ್ಲಾ ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ, ಭಜನಾಗುರು ಜಯಾನಂದಕುಮಾರ್ ಹೊಸದುರ್ಗ, ಈಶ್ವರೀ ಬೇರ್ಕಡವು, ಪ್ರೇಮಲತಾ ರಾವ್ ಪುತ್ತೂರು,  ಕಿರಣ್ ಕುಮಾರ ರೈ ಪುತ್ತೂರು, ಅನಾರು ವಿಷ್ಣುಶರ್ಮ, ಕಾಟುಕುಕ್ಕೆ ಕ್ಷೇತ್ರ ಅಧ್ಯಕ್ಷ ನಾರಾಯಣನ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಪತ್ರಕರ್ತ ಎಂ.ನಾ. ಚಂಬಲ್ತಿಮಾರ್ ನುಡಿ ವಿಶ್ಲೇಷಣೆಗಳ ಜತೆ ಕಾರ್ಯಕ್ರಮ ನಿರೂಪಿಸಿದರು. ಮೂಡುಬಿದಿರೆ ಉಮೇಶ ಭಟ್ ವಂದಿಸಿದರು. ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್(ರಿ) ಪುತ್ತೂರು  ಸಂಯೋಜಕತ್ವದಲ್ಲಿ ಕಾರ್ಯಕ್ರಮಗಳು ಜರುಗಿತು.
              ಪ್ರಣವ ಮಂತ್ರದಲ್ಲಿ ದಾಸದೀಕ್ಷೆ:
           ಮಧ್ವಾಧೀಶ ವಿಠಲದಾಸರಾದ ರಾಮಕೃಷ್ಣ_
ಜ.2ರಂದು ಗುರುವಾರ ಬೆಳಿಗ್ಗೆ 7ರ ಬಳಿಕದ ಸುಮೂಹರ್ತದಲ್ಲಿ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದರು ದೇಹಶುದ್ಧಿಗಾಗಿ  ಪಂಚಗವ್ಯಪ್ರಾಶನಗೈದು, ನೂತನ ಯಜ್ಞೋಪವೀತ ಧಾರಣೆ ಮಾಡಿಸಿದರು. ಬಳಿಕ ಶ್ರೀಕೃಷ್ಣ ಮಠದ ಸರ್ವಜ್ಞ ಪೀಠದಲ್ಲಿ ಪ್ರಣವಮಂತೋಪದೇಶ ಪೂರ್ವಕ, ವಿಧಿವಿಧಾನ ಬೋಧಿಸಿ ದಾಸದೀಕ್ಷೆ ನೀಡಿದರು. ಜತೆಯಲ್ಲೇ ಕಾಷಾಯ ವಸ್ತ್ರ ಪ್ರದಾನ, ಮಾಧ್ವ ಲಾಂಛನಗಳನ್ನಿತ್ತು ಮುದ್ರಾಧಾರಣೆಗೈದರು. ಬಳಿಕ ಮಧ್ವಾಧೀಶ ವಿಠಲದಾಸದಾಸ  ಎಂಬ ಅಂಕಿತನಾಮ ದಯಪಾಲಿಸಿದರು. ತದನಂತರ ಉಡುಪಿ ರಾಜಾಂಗಣದಲ್ಲಿ ಕಾಟುಕುಕ್ಕೆಯವರ ಶಿಷ್ಯಮಂಡಳಿಗಳ ಸಮೂಹ ಸಂಕೀರ್ತನೆ, ಹರಿದಾಸರಾದ ರಾಮಕೃಷ್ಣರ ದಾಸನಮನ, ಕಿಶೋರ್ ಪೆರ್ಲ, ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯ, ಭಜನಾಪಟು ಜಯಾನಂದಕುಮಾರ, ವಿದುಷಿ ಉಷಾ ಹೆಬ್ಬಾರ್ ಮಣಿಪಾಲ, ಜಯಭಾರತಿ ಕಾವುಪಟ್ಟೇರಿ ಬಳಗದವರಿಂದ ಸಂಕೀರ್ತನೆಗಳು ಮೊಳಗಿತು. ಕೇರಳ, ಕರ್ನಾಟಕದ ವಿವಿದೆಡೆಗಳಿಂದ ಆಗಮಿಸಿದ 2ಸಾವಿರದಷ್ಟು ದಾಸದಸಾಹಿತ್ಯ ಭಜನಾರ್ಥಿಗಳು ದೀಕ್ಷಾವಿದಿ ಪ್ರದಾನ ಸಂಭ್ರಮ ಕಣ್ತುಂಬಿಕೊಂಡರು.
            ಕರಾವಳಿಯ ಮೊದಲ ಹರಿದಾಸ:
ಹರಿದಾಸ ಸಾಹಿತ್ಯ ಪರಂಪರೆಯಲ್ಲಿ ಕರಾವಳಿಯ ಭಾಗದಿಂದ ಸಾಂಪ್ರದಾಯಿಕವಾಗಿ ಹರಿದಾಸ ದೀಕ್ಷೆ ಪಡೆದ ಮೊದಲಿಗನಾಗಿ ರಾಮಕೃಷ್ಣ ಕಾಟುಕುಕ್ಕೆ ಗುರುತಿಸಲ್ಪಟ್ಟಿದ್ದಾರೆ. ಕೇರಳ-ಕರ್ನಾಟಕ ಗಡಿಯ ಕಾಟುಕುಕ್ಕೆಯಲ್ಲಿ ನೆಲೆಸಿದ ಇವರು ಕಾಟುಕುಕ್ಕೆ ಕ್ಷೇತ್ರದ ಉದ್ಯೋಗಿ. ಸಂಕೀರ್ತನೆ ಮತ್ತು ಭಜನಾ ತರಬೇತಿಯೇ ಕೈಂಕರ್ಯ. ಇನ್ನುಳಿದ ಜೀವನವನ್ನು ಹರಿದಾಸ ಸಾಹಿತ್ಯದ ಪ್ರಚಾರ, ಪ್ರಸಾರ, ಪ್ರಚೋದನೆಗಾಗಿ ಮೀಸಲಿಡಬೇಕೆಂಬುದು ಅವರ ದ್ಯೇಯ. ಅಂತರಂಗದ ಪ್ರಚೋದನೆಯಿಂದ ಈ ನಿರ್ಧಾರ ಕೈಗೊಂಡಿದ್ದು ದೀಕ್ಷಿತನಾಗಿದ್ದೇನೆ. ಇನ್ನು ದಾಸಸಾಹಿತ್ಯಕ್ಕಾಗಿ ಆಶ್ರಮಧರ್ಮ ಪಾಲಿಸಬೇಕು. ಪೂರ್ವಿಕ ಹರಿದಾಸರು ನಡೆದ ಹಾದಿಯಲ್ಲೇ ನನ್ನ ಜೀವನವೂ ಮುನ್ನಡೆಯಬೇಕು ಎಂದು ನಿರ್ಧರಿಸಿದ್ದಾರೆ ಮಧ್ವಾಧೀಶವಿಠಲ ನಾಮಕ ರಾಮಕೃಷ್ಣರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries