ಬದಿಯಡ್ಕ: ಬೇಳ ಕೌಮುದಿ ಗ್ರಾಮೀಣ ನೇತ್ರಾಲಯದ ನೇತೃತ್ವದಲ್ಲಿ ಒಂಭತ್ತು, ಹತ್ತು ಹಾಗೂ ಪ್ಲಸ್‍ಟು ತರಗತಿಯ ಕನ್ನಡ ವಿದ್ಯಾರ್ಥಿಗಳಿಗೆ ಮಹಾತ್ಮಾ ಗಾಂಧಿಜಿಯವರ ಆತ್ಮಕಥೆಯಾದ ನನ್ನ ಸತ್ಯಾನ್ವೇಷಣೆ ಎಂಬ ವಿಷಯದ ಪುಸ್ತಕ ವಿಮರ್ಶೆಯ ಬರವಣಿಗೆ ಮತ್ತು ನೇರವಾಗಿ ಪ್ರಸ್ತುತಪಡಿಸಲು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ತಮ್ಮ ಬರಹಗಳನ್ನು ಜ.15ರ ಮೊದಲು ನೇರವಾಗಿ ಅಥವಾ ಇಮೇಲ್ ಮುಖಾಂತರ ನೀಡಬಹುದಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜ.31ರಂದು ಬಹುಮಾನಗಳನ್ನು ವಿತರಿಸಲಾಗುವುದು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.