HEALTH TIPS

ಕಿಫ್ ಬಿ ಪ್ರದರ್ಶನದಲ್ಲಿ ಮನಸೂರೆಗೊಂಡ ವರ್ಚು ವಲ್ ರಿಯಾಲಿಟಿ ತಂತ್ರಜ್ಞಾನ

       
          ಕಾಸರಗೋಡು: ರಾಜ್ಯದಲ್ಲಿ ಭವಿತವ್ಯದಲ್ಲಿ ಜಾರಿಗೊಳ್ಳಲಿರುವ ಅಭಿವೃದ್ಧಿ ಯೋಜನೆಗಳನ್ನು ಮುಂಗಡವಾಗಿ ಒಂದೇ ಛಾವಣಿಯಡಿ ಕಾಣಬಹುದಾದ ಸದವಕಾಶ ನಮ್ಮ ಜನತೆಗೆ ಲಭಿಸಿದೆ. ಗಡಿನಾಡು ಕಾಸರಗೋಡು ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿರುವ ಅಭಿವೃದ್ಧಿ ಯೋಜನೆಗಳ ಪ್ರದರ್ಶನ ಸಹಿತ ಸಮಗ್ರ ಮಾಹಿತಿ ಇಲ್ಲಿ ಒಂದೇ ಕಡೆ ಲಭಿಸುತ್ತಿದೆ.
      ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ ನಡೆಯುತ್ತಿರುವ ರಾಜ್ಯ ಸರಕಾರದ ಕಿಫ್ ಬಿ ಪ್ರದರ್ಶನದಲ್ಲಿ ಈ ದೃಶ್ಯಾವಳಿ ಸಹಿತದ ಪ್ರದರ್ಶನ ಈ ಮೂಲಕ ಗಮನಸೆಳೆಯುತ್ತಿದೆ. ವರ್ಚು ವಲ್ ರಿಯಾಲಿಟಿ ಬಿ.ಐ.ಎಂ. ವತಿಯಿಂದ ನೂತನ ತಂತ್ರಜ್ಞಾನದೊಂದಿಗೆ ಅನೇಕ ದೃಶ್ಯವಿಸ್ಮಯಗಳನ್ನುನೋಡಬಹುದಾಗಿದ್ದು, ಇಲ್ಲೊಂದು ಮಾಯಾಲೋಕವೇ ಸೃಷ್ಟಿಯಾಗಿದೆ. ಬೃಹತ್ ಕಟ್ಟಡಗಳ ಒಳಾಂಗಣ, ಹೊರಾಂಗಣಗಳನ್ನುಯಥಾ ಸ್ವರೂಪದಲ್ಲಿಏಕಕಾಲಕ್ಕೆ ವೀಕ್ಷಿಸಬಹುದಾದ ವರ್ಚು ವಲ್ ರಿಯಾಲಿಟಿ ತಂತ್ರಜ್ಞಾನ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಬಿ.ಐ.ಎಂ. ಸ್ಟಾಲ್ ಗಳು ಇಲ್ಲಿ ಸಕ್ರಿಯವಾಗಿವೆ. ಇಡೀ ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಕಿಫ್ ಬಿ ಪ್ರದ±ನ ಮೇಳದಲ್ಲಿ ಬಿ.ಐ.ಎಂ. ಸ್ಟಾಲ್ ಮೂಲಕ ಕಟ್ಟಡಗಳ ತ್ರೀಡಿ ಚಲನ ದೃಶ್ಯಗಳು ವೀಕ್ಷಕರಿಗೆ ಲಭಿಸುತ್ತಿದೆ.ಕಿಫ್ ಬಿಯ 21 ಯೋಜನೆಗಳ ವೀಡಿಯೋಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ. ಜಿಲ್ಲೆಯ ಸುಬ್ರಹ್ಮಣ್ಯನ್ ತಿರುಮುಂಬ್‍ಕಲ್ಚರಲ್ ಕಾಂಪ್ಲೆಕ್ಸ್ , ತ್ರಿಕರಿಪುರದ ಎಂ.ಆರ್.ಸಿ.ಕೃಷ್ಣನ್ ಮೆಮೋರಿಯಲ್ ಇಂಡೋರ್ ಸ್ಟೇಡಿಯಂ ಇತ್ಯಾದಿಗಳು ಅನುಷ್ಟಾನಗೊಂಡ ವೇಳೆ ಹೇಗಿರಬಹುದು ಎಂದು ತೋರುವ ತ್ರೀಡಿ ಚಲನಚಿತ್ರಗಳನ್ನು ಕಾಣಬಹುದಾಗಿದೆ. ಇಂಜಿನಿಯರಿಂಗ್ ಪರಿಣತರು ಅವರ ಉದ್ಯೋಗ ಪರಿಷ್ಕರಣೆ ಅಂಗವಾಗಿ ಬಳಸುವ ಬಿಲ್ಡಿಂಗ್ ಇನ್‍ಫರ್ಮೇಷನ್ ಮಾಡೆಲಿಂಗ್ ತಂತ್ರಜ್ಞಾವನ್ನು ಈ ಮೂಲಕ ಕಿಫ್ ಬಿ ಸಾರ್ವಜನಿಕರ ಮುಂದಿರಿಸಿದೆ.
           ಪ್ಲಾಸ್ಟಿಕ್‍ಗೆ ಬದಲಿ ಉತ್ಪನ್ನಗಳು:
     ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ಬದಲಿ(ಪ್ರಕೃತಿಸ್ನೇಹಿ) ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಸ್ಟಾಲ್‍ಗಳು ಈ ಪ್ರದರ್ಶನದಲ್ಲಿ ವೀಕ್ಷಕರನ್ನು ಸೆಳೆಯುತ್ತಿವೆ. ಜಿಲ್ಲಾ ಕುಟುಂಬಶ್ರೀ ಮಿಷನ್ ಮತ್ತು ಕೇರಳ ನಿರ್ಮಿತಿ ಸ್ಟಾಲ್ ಗಳು &quoಣ;ಪುನರ್‍ಜ್ಜನಿ&quoಣ; ಎಂಬ ಹೆಸರಿನಲ್ಲಿ ಇಲ್ಲಿ ಸಕ್ರಿಯವಾಗಿವೆ. ಗೃಹೋಪಯೋಗಿ ಮತ್ತು ಅಲಂಕಾರ ಸಾಮಾಗ್ರಿಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆಜಿಲ್ಲೆಯ 560 ಕುಟುಂಬಗಳ268ಮಳೆಯರುತಯಾರಿಸಿದ ಉತ್ಪನ್ನಗಳು ಇಲ್ಲಿವೆ. ಈನಿಟ್ಟಿನಲ್ಲಿ ಕೊರಗ ಜನಾಂಗದವರುಸಿದ್ಧಪಡಿಸುವ ಉತ್ಪನ್ನ ಗಳಿಗೆ ಬೇಡಿಕೆ ಅಧಿಕವಾಗಿದೆ. ಬೆತ್ತದ ಕಿರು ಬುಟ್ಟಿಗಳು, ಹೂದಾನಿಗಳು, ಹಾಳೆತಟ್ಟೆಗಳು,ಮಣ್ಣಿನ ಲೋಟ,ಪಾತ್ರೆ, ಕುಡಿಕೆ ಇತ್ಯಾದಿಗಳು, ಬಟ್ಟೆ ಚೀಲಗಳು, ಬಡ್ಸ್ ಶಾಲೆಗಳ ಮಕ್ಕಳ ತಾಯಂದಿರು ನಿರ್ಮಿಸಿರುವ ಬೀಜಗಳ ಪೆನ್ ಗಳುಇತ್ಯಾದಿಗಳು ಗಮನ ಸೆಳೆಯುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries