ತಿರುವನಂತಪುರ: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಕೇರಳ ವಿಧಾನಸಭೆಯಲ್ಲಿ ಗೊತ್ತುವಳಿ ಮಂಡಿಸಿದ ಕೇರಳ ಮುಖ್ಯಮಂತ್ರಿ ವಿರುದ್ಧ ಹಕ್ಕುಚ್ಯುತಿ ಆರೋಪಿಸಿ ರಾಜ್ಯಸಭಾ ಸದಸ್ಯ, ಬಿಜೆಪಿ ಮುಖಂಡ ಜಿ.ವಿ ನರಸಿಂಹ ರಾವ್ ಉಪರಾಷ್ಟ್ರಪತಿ ಅವರಿಗೆ ದೂರುಸಲ್ಲಿಸಿದ್ದಾರೆ.
ರಾಜ್ಯಸಭೆ ಹಾಗೂ ಲೋಕಸಭೆ ಅಂಗೀಕಾರದೊಂದಿಗೆ ರಾಷ್ಟ್ರಪತಿ ಅಂಕಿತ ಹಾಕಿದ ಕಾನೂನಿನ ವಿರುದ್ಧ ಕೇರಳ ಸರ್ಕಾರ ಗೊತ್ತುವಲಿ ಮಂಡಿಸುವ ಮೂಲಕ ಸಮವಿಧಾನವಿರೋಧಿ ಧೋರಣೆ ತಳೆದಿದೆ. ಇದು ಸಂಸತ್ ಅಧಿಕಾರದ ಮೇಲಿನ ಹಸ್ತಕ್ಷೇಪವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾನೂನು ಸಂವಿಧಾನವಿರೋಧಿಯಾಗಿದ್ದು, ಇದನ್ನು ಕೇರಳದಲ್ಲಿ ಜಾರಿಗಳಿಸಲು ಅವಕಾಶ ನೀಡುವುದಿಲ್ಲ ಎಂದು ಗೊತ್ತುವಳಿ ಮಂಡನೆ ವೇಳೆ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದರು.