ಕಾಸರಗೋಡು: ಅಣೆಕಟ್ಟು ಮಹೋತ್ಸವದ ಮೂಲಕ ಕಾಸರಗೋಡು ಜಿಲ್ಲೆಯ 77 ವಾರ್ಡ್‍ಗಳಲ್ಲಿ ತಲಾ ಹತ್ತು ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು. ಇದರ ಪ್ರಥಮ ಹಂತದಲ್ಲಿ 6500 ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು ಜಿಲ್ಲೆಯ 12 ನದಿಗಳ ಪೈಕಿ ಒಂದರಲ್ಲಿ ಮಾತ್ರವೇ ರೆಗ್ಯುಲೇಟರ್ ಕಂ ಬ್ರಿಡ್ಜ್ ಇದೆ. ಇತರ 11 ನದಿಗಳಲ್ಲಿ ರೆಗ್ಯುಲೇಟರ್ ಕಂ ಬ್ರಿಡ್ಜ್ ನಿರ್ಮಿಸುವ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಆರಂಭಿಸಿದ ಜಲ ಸಂರಕ್ಷಣಾ ಚಟುವಟಿಕೆಗಳು ಫಲ ನೀಡಿವೆ ಎಂಬುದಕ್ಕೆ ಜಿಲ್ಲೆಯ ನಿರೀಕ್ಷಣಾ ಬಾವಿಗಳ ನೀರಿನ ಮಟ್ಟ ಹೆಚ್ಚುತ್ತಿರುವುದೇ ಸಾಕ್ಷಿಯಾಗಿದೆ. 65 ನಿರೀಕ್ಷಣಾ ಬಾವಿಗಳ ಪೈಕಿ 64 ರಲ್ಲಿ ಕೂಡಾ ನೀರಿನ ಪ್ರಮಾಣ ಹಿಂದಿನ ವರ್ಷಕ್ಕಿಂತ ಹೆಚ್ಚಿದೆ. 20 ಸೆಂಟಿ ಮೀಟರ್‍ನಿಂದ 12 ಮೀಟರ್‍ನಷ್ಟು ನೀರು ಬಾವಿಗಳಲ್ಲಿ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಹೇಳಿದರು.
ಪಿಲಿಕ್ಕೋಡು ಗ್ರಾಮ ಪಂಚಾಯತ್ ಪಾಡಿಕ್ಕೀಲ್ ಪಳ್ಳಿಕಂಡ ತೋಡಿನ ಸಮೀಪ ಅಣೆಕಟ್ಟು ಮಹೋತ್ಸವದ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯ ಜಲ ಸಂರಕ್ಷಣಾ ಚಟುವಟಿಕೆಗಳಿಗೆ ಶಕ್ತಿ ತುಂಬುವ ಯೋಜನೆಯಾಗಿದೆ ಅಣೆಕಟ್ಟು ಮಹೋತ್ಸವ ಎಂದೂ, ನಷ್ಟವಾದ ಜೀವ ಜಲವನ್ನು ಮತ್ತೆ ಪಡೆಯುವ ಪ್ರಾದೇಶಿಕ ಸಂಗಮವಾದ ಅಣೆಕಟ್ಟು ಮಹೋತ್ಸವ ಎಂದು ಜಿಲ್ಲಾಧಿಕಾರಿ ಹೇಳಿದರು.
12 ನದಿಗಳಿರುವ ಜಿಲ್ಲೆಯಲ್ಲಿ ಬೇಸಿಗೆ ಸಮೀಪಿಸುವಾಗ ಬರಗಾಲ ತೀವ್ರಗೊಳ್ಳುತ್ತದೆ. ಈ ಪರಿಸ್ಥಿತಿಯನ್ನು ಬದಲಿಸಬೇಕಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜಲ ಸುರಕ್ಷೆ, ಆಹಾರ ಸುರಕ್ಷೆ, ಆರ್ಥಿಕ ಸುರಕ್ಷೆ, ಸಾಮಾಜಿಕ ಸುರಕ್ಷೆ ಹೀಗೆ ನಾಲ್ಕು ವಲಯಗಳಲ್ಲಿ ಕಾರ್ಯಚಟುವಟಿಕೆಗಳನ್ನು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಜಾರಿಗೊಳಿಸಲು ಉದ್ದೇಶಿಸಲಾಗುತ್ತಿದೆ ಎಂದೂ, ಇದರ ಪ್ರಾಥಮಿಕ ಹಂತ ಎಂಬ ನೆಲೆಯಲ್ಲಿ ಜಲಸಂರಕ್ಷಣಾ ಚಟುವಟಿಕೆಗಳಿಗೆ ಚಾಲನೆ ನೀಡುತ್ತಿರುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ಪಿಲಿಕ್ಕೋಡು ಪಂಚಾಯತ್ ಅಧ್ಯಕ್ಷ ಟಿ.ವಿ.ಶ್ರೀಧರನ್ ಅಧ್ಯಕ್ಷತೆ ವಹಿಸಿದರು. ಅಣೆಕಟ್ಟು ಉತ್ಸವ ಗೀತೆಯ ಬಿಡುಗಡೆಯನ್ನು ಜಿಲ್ಲಾ„ಕಾರಿ ಡಾ|ಡಿ.ಸಜಿತ್‍ಬಾಬು ನೆರವೇರಿಸಿದರು. ಪಿಲಿಕ್ಕೋಡು ಪಂಚಾಯತ್ ಉಪಾಧ್ಯಕ್ಷೆ ಪಿ.ಶೈಲಜ ಉತ್ಸವ ಗೀತೆಯನ್ನೊಳಗೊಂಡ ಪೆನ್ ಡ್ರೈವ್‍ನ್ನು ಸ್ವೀಕರಿಸಿದರು. ಸಂಚಾಲಕ ಪಿ.ವಿ.ಚಂದ್ರನ್ ವರದಿ ಮಂಡಿಸಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅ„ಕಾರಿ ಇ.ಪಿ.ರಾಜ್‍ಮೋಹನ್, ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಕುಂಞÂರಾಮನ್, ಎಂ.ಟಿ.ಪಿ.ಮೈಮೂನತ್, ಪಿಲಿಕ್ಕೋಡು ಪಂಚಾಯತ್ ಸದಸ್ಯರಾದ ಪಿ.ಶಾಂತ, ಟಿ.ಪಿ.ರಾಘವನ್ ಮಾತನಾಡಿದರು. ಪಿಲಿಕ್ಕೋಡು ಪಂಚಾಯತ್ ಕಾರ್ಯದರ್ಶಿ ಕೆ.ರಮೇಶನ್ ಸ್ವಾಗತಿಸಿದರು. ಕೃಷಿ ಅಧಿಕಾರಿ ಪಿ.ಡಿ.ಜಲೇಶನ್ ವಂದಿಸಿದರು.